ವರ್ಷಾಂತ್ಯದಲ್ಲಿ ಹೋಂಡಾ ಸಿಬಿಆರ್300ಆರ್ ಎಂಟ್ರಿ

Written By:

ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಜಪಾನ್ ಮೂಲದ ಹೋಂಡಾ ಮೋಟಾರುಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು ಹೊಚ್ಚ ಹೊಸ ಸಿಬಿಆರ್300ಆರ್ ಬೈಕ್ ದೇಶದಲ್ಲಿ ಲಾಂಚ್ ಮಾಡಲಿದೆ.

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಹೀರೊ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾಗಿರುವ ಸಿಬಿಆರ್250ಆರ್ ಉತ್ತರಾಧಿಕಾರಿ ವರ್ಷಾಂತ್ಯದಲ್ಲಿ ಎಂಟ್ರಿ ಕೊಡಲಿದೆ. ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚುತ್ತಿರುವುದರಿಂದ ಆಧುನಿಕೆಗೆ ಹೆಚ್ಚು ಮೈಗೂಡಿಸಿಕೊಂಡು ಹೋಗಬೇಕಾಗಿರುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಅತ್ಯಂತ ಶಕ್ತಿಶಾಲಿ ಸಿಬಿಆರ್300ಆರ್ ನೆರವಾಗುವ ಭರವಸೆಯಿದೆ.

ಎಂಜಿನ್

ಹೋಂಡಾ ಸಿಬಿಆರ್‌300ಆರ್, ದೊಡ್ಡದಾದ 286 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಳ್ಳಲಿದೆ. ಇದರ 4 ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ 29 ಅಶ್ವಶಕ್ತಿ (27 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಅಂತೆಯೇ 6 ಸ್ಪೇಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಇರಲಿದೆ.

ಡಿಸೈನ್

ವಿನ್ಯಾಸದ ವಿಚಾರದಲ್ಲೂ ಹಳೆಯ ಜನಾಂಗದ ಸಿಬಿಆರ್250ಆರ್ ಮಾದರಿಯನ್ನು ಹೊಸತಾದ ಸಿಬಿಆರ್300ಆರ್ ಮೀರಿ ನಿಲ್ಲಲಿದೆ. ಪ್ರಮುಖವಾಗಿಯೂ ಮುಂಭಾಗದಲ್ಲಿ ಡ್ಯುಯಲ್ ಹೆಡ್‌ಲೈಟ್ ಇರಲಿದೆ. ಅದೇ ರೀತಿ ಹೆಚ್ಚು ಹಿಂದಿನ ದೊಡ್ಡ ಆಕಾರದ ಬದಲಾಗಿ ಸಣ್ಣದಾದ ಹೆಚ್ಚು ಆಕರ್ಷಣೀಯ ಎಕ್ಸಾಸ್ಟ್ ಸಹ ಪಡೆಯಲಿದೆ. ಇನ್ನುಳಿದಂತೆ ಆಸನ ವ್ಯವಸ್ಥೆಯಲ್ಲೂ ಸುಧಾರಣೆ ತರಲಾಗಿದೆ.

honda cbr300r

ಅಂದಾಜು ಬೆಲೆ

ಬಲ್ಲ ಮೂಲಗಳ ಪ್ರಕಾರ ಹೋಂಡಾ ಸಿಬಿಆರ್300ಆರ್ ಸ್ಟಾಂಡರ್ಡ್ ವೆರಿಯಂಟ್‌ ಬೆಲೆ 2.80 ಲಕ್ಷ ರು.ಗಳಿಷ್ಟಿರಲಿದೆ. ಅಂತೆಯೇ ಇದರ ಎಬಿಎಸ್ ಮಾದರಿಯು 3.20 ಲಕ್ಷ ರು.ಗಳಷ್ಟು ಬೆಲೆ ಬಾಳಲಿದೆ. ಮೊದಲು ಅಭಿವೃದ್ಧಿ ಹೊಂದಿದ ದೇಶವನ್ನು ಪ್ರವೇಶಿಸಲಿರುವ ಸಿಬಿಆರ್300ಆರ್ ವರ್ಷಾಂತ್ಯದಲ್ಲಿ ಭಾರತ ಎಂಟ್ರಿ ಪಡೆಯಲಿದೆ.

English summary
Honda Motorcycle and Scooter India has been the first to offer an affordable quarter litre motorcycle. The CBR250R has been in India for a while now and the Japanese manufacturer has not updated the bike since its launch. They have been introducing various paint schemes.
Story first published: Monday, July 14, 2014, 11:24 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark