ಇಂಡಿಯನ್ ಮೋಟಾರ್‌ಸೈಕಲ್ಸ್‌ನಿಂದ ದೇಶದಲ್ಲಿ ಮೊದಲ ಡೀಲರ್‌ಶಿಪ್

Written By:

ಐಕಾನಿಕ್ ಕ್ರೂಸರ್ ಬ್ರಾಂಡ್ ಆಗಿರುವ ಇಂಡಿಯನ್ ಮೋಟಾರ್‌ಸೈಕಲ್ಸ್, ಇತ್ತೀಚೆಗಷ್ಟೇ ಭಾರತಕ್ಕೆ ತನ್ನ ರೇಂಜ್ ಬೈಕ್‌ಗಳನ್ನು ಪರಿಚಯಿಸಿತ್ತು. ಆದರೆ ಬೇಸರದ ಸಂಗತಿಯೆಂದರೆ ದೇಶದಲ್ಲಿ ಇಂಡಿಯನ್ ಮೋಟಾರ್‌ಸೈಕಲ್ಸ್ ಡೀಲರ್‌ಶಿಪನ್ನು ಇದುವರೆಗೆ ತೆರೆದುಕೊಂಡಿರಲಿಲ್ಲ.

ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿರುವ ಇಂಡಿಯನ್ ಮೋಟಾರ್‌ಸೈಕಲ್ಸ್, ಇದೇ ಮೇ 7ರಂದು ದೇಶದಲ್ಲಿನ ತನ್ನ ಮೊತ್ತ ಮೊದಲ ಶೋ ರೂಂ ತೆರೆದುಕೊಳ್ಳಲಿದೆ. ನೂತನ ಡೀಲರ್‌ಶಿಪ್ ಹರಿಯಾಣದ ಗುರ್ಗಾಂವ್‌ನಲ್ಲಿ (ಬಿ-10, ಇನ್ಫೋಸಿಟಿ, ಸೆಕ್ಟರ್-34) ಸ್ಥಿತಗೊಂಡರಲಿದೆ.

To Follow DriveSpark On Facebook, Click The Like Button

ನೂತನ ಡೀಲರ್‌ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಪೊಲರಿಸ್ ಇಂಡಸ್ಟ್ರೀಸ್ ಚೀಫ್ ಓಪರೇಟಿಂಗ್ ಆಫೀಸರ್ ಬೆನ್ನೆಟ್ ಮಾರ್ಗನ್ ಹಾಗೂ ಪೊಲರಿಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ದುಬೇ ಉಪಸ್ಥಿತರಿರಲಿದ್ದಾರೆ.

ಇಂಡಿಯನ್ ಚೀಫ್ ಕ್ಲಾಸಿಕ್, ಇಂಡಿಯನ್ ಚೀಫ್ ವಿಂಟೇಜ್ ಹಾಗೂ ಇಂಡಿಯನ್ ಚೀಫ್ಟೈನ್ ಮಾದರಿಗಳನ್ನು ಭಾರತದಲ್ಲಿ ಮಾರಾಟದಲ್ಲಿದೆ. ಈ ಎಲ್ಲ ಬೈಕ್‌ಗಳು ತನ್ನದೇ ಆದ ವಿಶಿಷ್ಟ ವಿನ್ಯಾಸ ಪಡೆದುಕೊಂಡಿದ್ದು, ಶ್ರೀಮಂತ ಪರಂಪರೆಯನ್ನು ಸಾರುತ್ತಿದೆ.

indian motorcycles

ನಿಮ್ಮ ಮಾಹಿತಿಗಾಗಿ, 1901ನೇ ಇಸವಿಯಲ್ಲಿ ಜಾರ್ಜ್ ಎಂ ಹೆಂಡೀ ಹಾಗೂ ಕಾರ್ಲ್ ಓಸ್ಕರ್ ಹೆಡ್‌ಸ್ಟ್ರೋಮ್ ಎಂಬವರು ಇಂಡಿಯಾ ಮೋಟಾರ್‌ಸೈಕಲ್ಸ್ ಸ್ಥಾಪಿಸಿದ್ದರು. ಆದರೆ 1953ರಲ್ಲಿ ದಿವಾಳಿಯಾಗಿದ್ದರಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಬಳಿಕ 2011ರಲ್ಲಿ ಪೊಲರಿಸ್ ಇಂಡಸ್ಟ್ರೀಸ್ ತೆಕ್ಕೆಗೆ ಸೇರಿರುವ ಇಂಡಿಯನ್ ಮೋಟಾರ್‌ಸೈಕಲ್ಸ್ ಮಗದೊಮ್ಮೆ ತನ್ನ ಗತಕಾಲದ ವೈಭವವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದೆ.

English summary
Iconic motorcycle cruiser brand, Indian Motorcycles have already launched their range of bikes in India.
Story first published: Monday, May 5, 2014, 15:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark