ಪಿಯಾಜಿಯೊದಿಂದ ಲಿಬರ್ಟಿ 125 ಸಿಸಿ ಸ್ಕೂಟರ್ ಅನಾವರಣ

Written By:

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಪಿಯಾಜಿಯೊ, ದೆಹಲಿ ಆಟೋ ಎಕ್ಸ್ ಪೋದಲ್ಲಿ ಮಗದೊಂದು ಪ್ರೀಮಿಯಂ ಸ್ಕೂಟರ್ ಪ್ರದರ್ಶನ ಮಾಡಿದೆ. ಹೌದು, ಪಿಯಾಜಿಯೊ ಲಿಬರ್ಟಿ 125 ಸಿಸಿ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ.

ಇದರ ಪ್ರಮುಖ ವಿಶೇಷತೆ ಏನೆಂದರೆ ನೂತನ ಪಿಯಾಜಿಯೊ ಲಿಬರ್ಟಿ 125 ಸಿಸಿ ಸ್ಕೂಟರ್ ದೊಡ್ಡದಾದ ಚಕ್ರಗಳನ್ನು ಪಡೆದಿದೆ. ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಈ ಸ್ಕೂಟರ್ ಇದೀಗ ಭಾರತ ಮಾರುಕಟ್ಟೆಯಲ್ಲೂ ಜಾದೂ ಮಾಡುವ ನಿರೀಕ್ಷೆಯಿದೆ.

ಆರಾಮದಾಯಕ ಪಯಣ, ಹೆಚ್ಚು ಸ್ಟೋರೆಜ್ ಜಾಗ ಮತ್ತು 7 ಲೀಟರ್ ಇಂಧನ ಟ್ಯಾಂಕ್ ಇದರ ವೈಶಿಷ್ಟ್ಯವಾಗಿದೆ. ಒಟ್ಟಿನಲ್ಲಿ ಸಿಟಿ ರೈಡಿಂಗ್‌ಗೆ ಹೇಳಿ ಮಾಡಿಸಿದಂತಿದೆ. ನೂತನ ಲಿಬರ್ಟಿ ಸ್ಕೂಟರ್ 1935 ಎಂಎಂ ಉದ್ದ, 760 ಎಂಎಎಂ ಅಗಲ ಮತ್ತು 1325 ಎಂಎಂ ಎತ್ತರ ಹೊಂದಿದೆ. ಹಾಗೆಯೇ 795 ಎಂಎಂ ಸೀಟು ಎತ್ತರವನ್ನು ಪಡೆದಿದೆ.

ಇದರ 125 ಸಿಸಿ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ 10.5 ಅಶ್ವಶಕ್ತಿ (9.6 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯನ್ನು ಪರಿಗಣಿಸಿರುವ ಪಿಯಾಜಿಯೊ ದೇಶದಲ್ಲೂ ಉತ್ತಮ ಮಾರಾಟ ಕಾಯ್ದುಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

Piaggio Liberty 125
English summary
We are talking about the Piaggio Liberty 125 CV that was revealed for the first time in India at the Auto Expo 2014.
Story first published: Wednesday, February 12, 2014, 14:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark