ದೇಶದಲ್ಲಿ ತನ್ನ ಸಾನಿಧ್ಯ ಇನ್ನಷ್ಟು ಬಲಪಡಿಸಿದ ಯಮಹಾ

Written By:

ದೇಶದ ದ್ವಿಚಕ್ರ ವಾಹನೋದ್ಯಮದಲ್ಲಿ ಹೊಸ ಬಿರುಗಾಳಿಯೆಬ್ಬಿಸಿರುವ ಯಮಹಾ ಮೋಟಾರು ಇಂಡಿಯಾ ಸಂಸ್ಥೆಯು ಡಿಸೆಂಬರ್ ತಿಂಗಳ ಮಾರಾಟದಲ್ಲೂ ವರ್ಧನೆ ದಾಖಲಿಸುವ ಮೂಲಕ ಒಟ್ಟಾರೆಯಾಗಿ 2013ನೇ ಸಾಲನ್ನು ಯಶಸ್ಸಿನೊಂದಿಗೆ ವಿದಾಯ ಹಾಡಿದೆ.

ಭಾರತ ದ್ವಿಚಕ್ರ ಮಾರುಕಟ್ಟೆಯಲ್ಲಿ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸಿರುವ ಯಮಹಾ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಶೇಕಡಾ 36.88ರಷ್ಟು ವರ್ಧನೆ ದಾಖಲಿಸಿಕೊಂಡಿದೆ. ಈ ಅವಧಿಯಲ್ಲಿ ಸಂಸ್ಥೆಯು 64,997 ಯುನಿಟ್‌ಗಳ ಮಾರಾಟ ಕಂಡಿದೆ. ಕಳೆದ ಬಾರಿಯಿದು 47,483 ಯುನಿಟ್‌ಗಳಿಗೆ ಮಾತ್ರ ಸೀಮಿತಗೊಂಡಿತ್ತು.

To Follow DriveSpark On Facebook, Click The Like Button
Yamaha India

ಈ ಪೈಕಿ ಜಪಾನ್‌ನ ಈ ವಾಹನ ತಯಾರಕ ಸಂಸ್ಥೆಯು ದೇಶಿಯವಾಗಿ 39,777 ಯುನಿಟ್ ಮಾರಾಟ ದಾಖಲಿಸುವ ಮೂಲಕ ಶೇಕಡಾ 58.32ರಷ್ಟು ವೃದ್ಧಿ ದಾಖಲಿಸಿದೆ. ಕಳೆದ ಸಾಲಿನಲ್ಲಿ ಇದು 25,123 ಯುನಿಟ್‌ಗಳಿರಷ್ಟಿತ್ತು. ಹಾಗೆಯೇ ರಫ್ತು ವಿಭಾಗದಲ್ಲೂ ಶೇಕಡಾ 12.79ರಷ್ಟು ಏರಿಕೆ ದಾಖಲಿಸಿದೆ. ಕಳೆದ ಬಾರಿ 22,360 ಯುನಿಟ್‌ಗಳಿಷ್ಟಿದ್ದ ಈ ಸಂಖ್ಯೆಯು ಈ ಬಾರಿ 25,220 ಯುನಿಟ್‌ಗಳಿಗೆ ಏರಿಕೆಯಾಗಿದೆ.

ಈ ಎಲ್ಲದರ ಮೂಲಕ ಕಳೆದ ಸಾಲಿನಲ್ಲಿ 6,51,487 ಯುನಿಟ್ ಮಾರಾಟ ಕಂಡುಕೊಂಡಿರುವ ಯಮಹಾ ಶೇಕಡಾ 33.82ರಷ್ಟು ಏರಿಕೆ ದಾಖಲಿಸಿದೆ. 2012ನೇ ಸಾಲಿನಲ್ಲಿ ಇದು 4,86,810 ಯುನಿಟ್‌ಗಳಿಷ್ಟಿತ್ತು.

English summary
Yamaha Motor India reported a 36.88% increase in two-wheeler sales. It sold 64.997 units this December 2013 compared to 47,483 units, which it sold last December.
Story first published: Friday, January 3, 2014, 14:40 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark