ಬೆನೆಲ್ಲಿ ಅಗ್ಗದ 250 ಸಿಸಿ ಸೂಪರ್ ಬೈಕ್ ಭಾರತಕ್ಕೆ

Written By:

ಕ್ರೀಡಾ ಬೈಕ್ ಪ್ರೇಮಿಗಳಲ್ಲಿ ರೋಮಾಂಚನ ಮೂಡಿಸುವ ಸುದ್ದಿಯೊಂದರಲ್ಲಿ ಡಿಎಸ್‌ಕೆ ಸಹಯೋಗದಲ್ಲಿ ಭಾರತ ಮಾರುಕಟ್ಟೆಗೆ ರಂಗ ಪ್ರವೇಶ ಮಾಡಿರುವ ಇಟಲಿಯ ಐಕಾನಿಕ್ ಸೂಪರ್ ಬೈಕ್ ಸಂಸ್ಥೆಯಾಗಿರುವ ಬೆನೆಲ್ಲಿ ದೇಶದಲ್ಲಿ ಮಗದೊಂದು ಅತಿ ಅಗ್ಗದ 250 ಸಿಸಿ ಬೈಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

Also Read: ಚೆಲುವಿನ ಚಿತ್ತಾರ ಕರಿಜ್ಮಾ ಕಮಾಲ್

ಹೌದು, ಇದೇ ಬರುವ 2015 ಡಿಸೆಂಬರ್ 18ರಂದು ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಈ ಮೂಲಕ ದೇಶದ ಕ್ರೀಡಾ ಪ್ರೇಮಿಗಳ ಮೇಲಿನ ತನ್ನ ಬದ್ದತೆಯನ್ನು ಪ್ರದರ್ಶಿಸಲಿದೆ.

To Follow DriveSpark On Facebook, Click The Like Button
ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ಇದಕ್ಕೂ ಮೊದಲು 2015 ಇಂಡಿಯಾ ಬೈಕ್ ವೀಕ್‌ನಲ್ಲಿ ಟಿಎನ್‌ಟಿ 25 ಭರ್ಜರಿ ಅನಾವರಣಗೊಂಡಿತ್ತು. ಈಗ ಹೊಸ ವರ್ಷಕ್ಕೆ ಹೊಸ ಹರುಷವನ್ನು ತರುವ ಮೂಲಕ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ನೂತನ ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 25 ಬೈಕ್ 249.2 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 21 ಎನ್‌ಎಂ ತಿರುಗುಬಲದಲ್ಲಿ 24.15 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ಆರು ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿರುವ ಬೆನೆಲ್ಲಿ ಟಿಎನ್‌ಟಿ 25 ಗಂಟೆಗೆ ಗರಿಷ್ಠ 125 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದ್ದು, ನೂತನ ಬೈಕ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಪಡೆಯುವ ಎಲ್ಲ ಸಾಧ್ಯತೆಗಳಿವೆ.

ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 300, ಟಿಎನ್‌ಟಿ 600ಐ, ಟಿಎನ್‌ಟಿ 600 ಜಿಟಿ, ಟಿಎನ್‌ಟಿ 899 ಮತ್ತು ಟಿಎನ್‌ಟಿ ಆರ್ ಬೈಕ್ ಗಳು ಮಾರಾಟದಲ್ಲಿದೆ. ಈ ಸಾಲಿಗೀಗ ಮಗದೊಂದು ಅಗ್ಗದ ಬೈಕ್ ಸೇರ್ಪಡೆಯಾಗಲಿದೆ.

ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ಬೆನೆಲ್ಲಿ ಟಿಎನ್‌ಟಿ 25 ಬೈಕ್ 1.5 ಲಕ್ಷ ರು.ಗಳಿಂದ 1.7 ಲಕ್ಷ ರು.ಗಳ ವರೆಗಿನ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ಹಾಗಿದ್ದರೂ ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ 25 ಎಂಟ್ರಿ ಲೆವೆಲ್ ಸೂಪರ್ ಬೈಕ್‌ಗೆ ದೇಶದಲ್ಲಿ ಕಠಿಣ ಸ್ಪರ್ಧೆ ಎದುರಾಗಲಿದೆ. ಇದು ಕೆಟಿಎಂ ಡ್ಯೂಕ್ 200, ಹೋಂಡಾ ಸಿಬಿಆರ್250ಆರ್ ಹಾಗೂ ಹೀರೊ ಕರಿಜ್ಮಾಗಳಂತಹ ದಿಗ್ಗಜರ ಸವಾಲನ್ನು ಎದುರಿಸಬೇಕಾಗುತ್ತಿದೆ. ಈ ಸಾಲಿಗೀಗ ಸದ್ಯದಲ್ಲೇ ಹ್ಯೊಸಂಗ್ ಜಿಡಿ250ಎನ್ ಮತ್ತು ಟಿವಿಎಸ್ ಅಪಾಚಿ 200 ಕೂಡಾ ಸೇರ್ಪಡೆಯಾಗಲಿದೆ.

ಅತಿ ಶೀಘ್ರದಲ್ಲೇ ಡಿಎಸ್‌ಕೆ-ಬೆನೆಲ್ಲಿ ಟಿಎನ್‌ಟಿ 25 ಭಾರತದಲ್ಲಿ ಬಿಡುಗಡೆ

ದೇಶದಲ್ಲಿ ಕ್ರೀಡಾ ಬೈಕ್ ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದರ ಬೆನ್ನಲ್ಲೇ ಬಹುತೇಕ ಎಲ್ಲ ಐಕಾನಿಕ್ ಸಂಸ್ಥೆಗಳು ದೇಶದತ್ತ ಕಣ್ಣಾಯಿಸುತ್ತಿದೆ.

English summary
DSK Benelli Confirms TNT 25 India Launch On Dec. 18
Story first published: Monday, December 14, 2015, 17:12 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark