ಹೋಂಡಾ ಸ್ಕೂಟರ್ ಓವರ್‌ಟೇಕ್ ಮಾಡಿದ ಹೀರೊ ನಂ.1

Written By:

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೇಶದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ಹಾಗೂ ಹೀರೊ ದ್ವಿಚಕ್ರ ವಾಹನಗಳು ರಾರಾಜಿಸುತ್ತಿದೆ. ಇದು ಸ್ಪರ್ಧಾತ್ಮಕ ಸ್ಥಿತಿಯೊಂದಿಗೆ ಗುಣಮಟ್ಟದ ಉತ್ಪನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ.

ಒಂದು ಕಾಲದಲ್ಲಿ ಒಂದೇ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ ಹೋಂಡಾ ಹಾಗೂ ಹೀರೊ ದ್ವಿಚಕ್ರ ವಾಹನಗಳು ಬಳಿಕ ತನ್ನದೇ ಆದ ವಿಭಿನ್ನ ಮಾರುಕಟ್ಟೆಯನ್ನು ಪಡೆದುಕೊಂಡಿತ್ತು. ಈಗ ಸ್ಕೂಟರ್ ರಫ್ತು ಅಂಕಿಅಂಶದಲ್ಲಿ ಹೋಂಡಾ ಮೋಟಾರುಸೈಕಲ್ಸ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯನ್ನು ಹಿಂದಿಕ್ಕಿರುವ ಹೀರೊ ಮೊಟೊಕಾರ್ಪ್ ಅಗ್ರಸ್ಥಾನಕ್ಕೇರಿದೆ.

To Follow DriveSpark On Facebook, Click The Like Button
hero maestro

ಇದರೊಂದಿಗೆ ಕಳೆದ ನಾಲ್ಕು ವರ್ಷಗಳ ಹೋಂಡಾ ಅಧಿಪತ್ಯಕ್ಕೆ ಕೊನೆ ಹಾಡಿದೆ. 2014ನೇ ಸಾಲಿನಲ್ಲಿ ಹೀರೊ ಸಂಸ್ಥೆಯು 84,690 ಸ್ಕೂಟರ್‌ಗಳನ್ನು ರಫ್ತು ಮಾಡಿದೆ. 2013ನೇ ಸಾಲಿನಲ್ಲಿ ಇದು ಕೇವಲ 15,776 ಯುನಿಟ್‌ಗಳಾಗಿತ್ತು. ಇನ್ನೊಂದೆಡೆ ಈ ವರ್ಷದಲ್ಲಿ ಹೋಂಡಾ ಸಂಸ್ಥೆಯು 79,184 ಯುನಿಟ್‌ಗಳ ಮಾರಾಟವನ್ನು ಕಂಡಿದೆ.

ಹೀರೊ ಸಂಸ್ಥೆಯ 110ಸಿಸಿ ಪ್ಲೆಷರ್ ಸ್ಕೂಟರ್ ಮಹಿಳಾ ಗ್ರಾಹಕರನ್ನು ಗುರಿಯಾಗಿಸಿದ್ದರೆ ಮ್ಯಾಸ್ಟ್ರೊ 110ಸಿಸಿ ಸ್ಕೂಟರ್ ಪುರುಷ ಗ್ರಾಹಕರನ್ನು ಸೆಳೆಯುತ್ತಿದೆ. ಇನ್ನೊಂದೆಡೆ ಹೋಂಡಾ ಸಂಸ್ಥೆಯು ಜನಪ್ರಿಯ ಆಕ್ಟಿವಾ ಜೊತೆಗೆ 110ಸಿಸಿ ಆವಿಯೇಟರ್ ಹಾಗೂ ಡಿಯೋ ಮಾದರಗಳನ್ನು ಮಾರಾಟ ಮಾಡುತ್ತಿದೆ.

honda activa

ಒಟ್ಟಾರೆಯಾಗಿ 2014 ಸ್ಕೂಟರ್ ಮಾರಾಟದಲ್ಲಿ ಶೇಕಡಾ 29ರಷ್ಟು ವೃದ್ಧಿಯಾಗಿದ್ದು, ಒಟ್ಟು 4.32 ಮಿಲಿಯನ್ ಯುನಿಟ್ ಮಾರಾಟವಾಗಿದೆ. ಇನ್ನೊಂದೆಡೆ ಬೈಕ್ ಮಾರಾಟ 6.2 ಶೇಕಡಾ ಏರಿಕೆ ಕಂಡು 10.91 ಮಿಲಿಯನ್‌ಗೆ ತಲುಪಿದೆ. ಒಟ್ಟಿನಲ್ಲಿ 2014ನೇ ಸಾಲಿನಲ್ಲಿ ಶೇ. 11.5ರಷ್ಟು ಏರಿಕೆ ಕಂಡಿರುವ ದ್ವಿಚಕ್ರ ವಾಹನ ಮಾರಾಟವು 16 ಮಿಲಿಯನ್‌ಗಳನ್ನು ತಲುಪಿದೆ.

ದ್ವಿಚಕ್ರ ವಾಹನ ಸಂಸ್ಥೆಗಳ ರಫ್ತು ಮಾರಾಟ ವಿವರ

ಹೀರೊ ಮೊಟೊಕಾರ್ಪ್

2014 - 84,690

2013 - 15,776

ಶೇರು (%) - 37.20

ಹೋಂಡಾ

2014 - 79,184

2013 - 42,717

ಶೇರು (%) - 34.80

ಟಿವಿಎಸ್ ಮೋಟಾರ್

2014 - 21,821

2013 - 18,826

ಶೇರು (%) - 9.60

ಯಮಹಾ ಮೋಟಾರ್ ಇಂಡಿಯಾ

2014 - 3,139

2013 - 1,943

ಶೇರು (%) - 1.40

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ

2014 - 3,598

2013 - 582

ಶೇರು (%) - 1.60

ಮಹೀಂದ್ರ ಟು ವೀಲರ್ಸ್

2014 - 3,554

2013 - 4,142

ಶೇರು (%) - 1.60

ಎಲ್‌ಎಂಎಲ್

2014 - 31,879

2013 - 33,619

ಶೇರು (%) - 14.00

ಪಿಯಾಜಿಯೊ ವೆಹಿಕಲ್ಸ್

2014 - 0

2013 - 22

ಶೇರು (%) - 0

ಒಟ್ಟು ರಷ್ಟು ಮಾರಾಟ

2014 - 227,865

2013 - 117,627

English summary
Hero MotoCorp has overtaken Honda Motorcycle and Scooter India to become the country's largest motor scooter exporter.
Story first published: Wednesday, January 21, 2015, 17:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark