ನಿರೀಕ್ಷಿಸಿ ಇಂಡಿಯನ್ ಮೋಟಾರ್ ಸೈಕಲ್ ಬಜೆಟ್ ಬೈಕ್

Written By:

ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಇಂಡಿಯನ್ ಮೋಟಾರ್ ಸೈಕಲ್ ಬೈಕ್ ಗಳು ಸಾಕಷ್ಟು ದುಬಾರಿಯೆನಿಸಿದೆ. ಉದಾಹರಣೆಗೆ ದೇಶದಲ್ಲಿ ಬಿಡುಗಡೆಯಾಗಿರುವ ಇಂಡಿಯನ್ ಮೋಟಾರ್ ಸೈಕಲ್ ರೋಡ್ ಮಾಸ್ಟರ್ ಸರಿ ಸುಮಾರು ದೆಹಲಿ ಎಕ್ಸ್ ಶೋ ರೂಂ 34.95 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಇದು ಶ್ರೀಮಂತ ಗ್ರಾಹಕರಿಗೆ ಈ ಆಡಂಬರ ಬೈಕ್ ಖರೀದಿಸಲು ಕಷ್ಟವೆನಿಸುತ್ತದೆ. ಹಾಗಿರುವ ಪೊಲರಿಸ್ ಇಂಡಸ್ಟ್ರಿಸ್ ಒಡೆತನದಲ್ಲಿರುವ ಇಂಡಿಯನ್ ಮೋಟಾರ್ ಸೈಕಲ್ಸ್ ಇದಕ್ಕೊಂದು ಉಪಾಯ ಕಂಡು ಹುಡುಕಿದೆ.

To Follow DriveSpark On Facebook, Click The Like Button
indian motorcycles

ಅದೇನೆಂದರೆ 10 ಲಕ್ಷ ರು.ಗಳ ಒಳಗಡೆ ಬಜೆಟ್ ಬೈಕ್ ಬಿಡುಗಡೆ ಮಾಡಲಾಗುವುದು. ಅಂದರೆ ಈಗ ಮಾರಾಟದಲ್ಲಿರುವ ಇಂಡಿಯನ್ ಸ್ಕೌಟ್ ಗಿಂತಲೂ ಅಗ್ಗದ ಬೈಕ್ ಎನಿಸಿಕೊಳ್ಳಲಿದೆ. ಇಂಡಿಯನ್ ಸ್ಕೌಟ್ ದೆಹಲಿ ಎಕ್ಸ್ ಶೋ ರೂಂ ಬೆಲೆ 11.99 ಲಕ್ಷ ರು.ಗಳಾಗಿದೆ.

ಇನ್ನೊಂದೆಡೆ ತನ್ನೆಲ್ಲ ಶ್ರೇಣಿಯ ಬೈಕ್ ಗಳನ್ನು ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡುವ ಯೋಜನೆ ಹೊಂದಿದೆ. ಇದು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ಸಂಸ್ಥೆಗೆ ನೆರವಾಗಲಿದೆ. ಸದ್ಯ ಅಮೆರಿಕದ ಈ ಐಕಾನಿಕ್ ಬೈಕ್ ಗಳು ಕಂಪ್ಲೀಟ್ ನೌಕ್ಡ್ ಡೌನ್ ಮುಖಾಂತರ ದೇಶವನ್ನು ತಲುಪುತ್ತಿದೆ.

ಒಟ್ಟಾರೆಯಾಗಿ ಇಂಡಿಯನ್ ಮೋಟಾರ್ ಸೈಕಲ್ ಬಜೆಟ್ ಬೈಕ್ ಗಳು ಸಹ ದೇಶದ ಸಾಮಾನ್ಯ ಗ್ರಾಹಕರ ಪಾಲಿಗೆ ದುಬಾರಿಯಾಗಲಿದೆ ಎಂಬುದು ವಿಪರ್ಯಾಸವೇ ಸರಿ.

English summary
Indian Motorcycles is currently owned by Polaris Industries and has introduced its products in India as well. They recently launched their two new products in the country called Dark Horse and Indian Roadmaster.
Story first published: Saturday, May 30, 2015, 9:34 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark