2016 ಆಟೋ ಎಕ್ಸ್ ಪೋ: ಎನ್‌ಫೀಲ್ಡ್, ಬಜಾಜ್, ಹಾರ್ಲೆ ಗೈರು?

By Nagaraja

ಎರಡು ವರ್ಷಕ್ಕೊಮ್ಮೆ ನಡೆಯುವ ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳವನ್ನು ದೇಶದ ಪ್ರತಿಯೊಬ್ಬ ವಾಹನ ಪ್ರೇಮಿಯೂ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುತ್ತಾರೆ. ಹಾಗಿರುವಾಗ ದೇಶದ ಕೆಲವು ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ಈ ಪ್ರತಿಷ್ಠಿತ ಆಟೋ ಶೋಗೆ ಗೈರು ಹಾಜರಾಗಲಿದೆ ಎಂಬ ವಾರ್ತೆಯು ಅಚ್ಚರಿ ಮೂಡಿಸಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳವಾಗಿದೆ. ಅಂತೆಯೇ 2016 ಜನವರಿ ತಿಂಗಳಲ್ಲಿ ಭರ್ಜರಿಯಾಗಿ ಆಯೋಜನೆಯಾಗಲಿದೆ. ಆದರೆ ರಾಯಲ್ ಎನ್ ಫೀಲ್ಡ್, ಬಜಾಜ್ ಆಟೋ ಹಾಗೂ ಹಾರ್ಲೆ ಡೇವಿಡ್ಸನ್ ಗಳಂತಹ ಪ್ರತಿಷ್ಠಿತ ಸಂಸ್ಥೆಗಳು ಮೇಳದಿಂದ ದೂರ ನಿಲ್ಲಲಿದೆ ಎಂಬ ಬಗ್ಗೆ ಮಾಹಿತಿಗಳು ಲಭಿಸಿದೆ.

ರಾಯಲ್ ಎನ್‌ಫೀಲ್ಡ್

ಬಲ್ಲ ಮೂಲಗಳ ಪ್ರಕಾರ ದೆಹಲಿ ಎಕ್ಸ್ ಪೋದಲ್ಲಿ ತೆರೆ ಸಹಿತ ಸ್ಟಾಲ್ ತೆರೆಯಲು ವಾರವೊಂದರಲ್ಲಿ 5ರಿಂದ 15 ಕೋಟಿ ರುಪಾಯಿಗಳಷ್ಟು ವೆಚ್ಚ ತಗುಲಲಿದೆ. ಇದರ ಮೊದಲು ಈ ಮೊತ್ತವನ್ನು ಸಂಸ್ಥೆಯ ಹೊಸ ಉತ್ಪನ್ನಗಳ ಅಭಿವೃದ್ಧಿ ಹಾಗೂ ಮಾರ್ಕೆಟಿಂಗ್‌ಗಾಗಿ ವಿನಿಯೋಗಿಸಲು ಸಂಸ್ಥೆಗಳು ಮುಂದಾಗುತ್ತಿದೆ.

ಕೇವಲ ದ್ವಿಚಕ್ರ ಸಂಸ್ಥೆಗಳಷ್ಟೇ ಅಲ್ಲದೆ ಸ್ಕೋಡಾ ಆಟೋ, ವೋಲ್ವೋ, ವೋಲ್ವೋ ಕಾರ್ಸ್ ಮತ್ತು ಡೈಮ್ಲರ್ ಸಹ ಇದೇ ನಿಲುವನ್ನು ಅನುಸರಿಸುವ ಸಾಧ್ಯತೆಯಿದೆ ಎಂಬುದರ ಬಗ್ಗೆಯೂ ಮಾಹಿತಿ ಬಂದಿದೆ. ಇವೆಲ್ಲ ಬೆಳವಣಿಗೆಯಿಂದಾಗಿ ಈ ಬಹುನಿರೀಕ್ಷಿತ ವಾಹನ ಪ್ರದರ್ಶನ ಮೇಳಕ್ಕೆ ಹಿನ್ನೆಡೆಯಾಗುವ ಭೀತಿ ಕಾಡುತ್ತಿದೆ.

Most Read Articles

Kannada
English summary
Royal Enfield, Bajaj & Harley-Davidson To Miss 2016 Auto Expo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X