2016 ಆಟೋ ಎಕ್ಸ್ ಪೋದಲ್ಲಿ ಐಷಾರಾಮಿ ಕಾರುಗಳ ಎಂಟ್ರಿ

Written By:

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎರಡು ವರ್ಷಕ್ಕೊಮ್ಮೆ ಸಾಗುತ್ತಿರುವ ಆಟೋ ಎಕ್ಸ್ ಪೋ ನಿಧಾನವಾಗಿ ಜಾಗತಿಕ ವಾಹನ ಚಟುವಟಿಕೆಗಳ ಕೇಂದ್ರ ಬಿಂದುವಾಗಿ ಪರಿವರ್ತನೆಯಾಗುತ್ತಿದೆ.

ಈಗ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿರುವ ವಿಶ್ವದ ಐಷಾರಾಮಿ ಕಾರು ಸಂಸ್ಥೆಗಳು ಸಹ 2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ತನ್ನ ಛಾಪನ್ನು ಒತ್ತುವ ಇರಾದೆಯಲ್ಲಿದೆ.

aston martin

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ ಮುಂಬರುವ ಆಟೋ ಎಕ್ಸ್ ಪೋದಲ್ಲಿ ಬ್ರಿಟನ್‌ನ ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾದ ಆಸ್ಟನ್ ಮಾರ್ಟಿನ್, ಇಟಲಿಯ ಮಸೆರಟಿ ಹಾಗೂ ಬೆಂಟ್ಲಿಗಳಂತಹ ಪ್ರೀಮಿಯಂ ಕಾರು ತಯಾರಕ ಸಂಸ್ಥೆಗಳು ತನ್ನ ಹೊಸ ಮಾದರಿಗಳೊಂದಿಗೆ ಮುಂದೆ ಬರಲಿದೆ. ಈ ಸಂಬಂಧ ಮೇಲೆ ಸೂಚಿಸಿದ ಪ್ರಖ್ಯಾತ ಸಂಸ್ಥೆಗಳು ಉತ್ಸುಕತೆಯನ್ನು ವ್ಯಕ್ತಪಡಿಸಿದೆ.

ಇದು ದೇಶದ ವಾಹನ ಪ್ರಿಯರಿಗೆ ಹೊಸ ಅನುಭವವಾಗಲಿದ್ದು, ವಿಶ್ವದ ಐಷಾರಾಮಿ ಕಾರುಗಳನ್ನು ಕಣ್ಣಾರೆ ನೋಡುವ ಅವಕಾಶವಿರಲಿದೆ. 2016 ದೆಹಲಿ ಆಟೋ ಎಕ್ಸ್ ಪೋ ಫೆಬ್ರವರಿ 5ರಿಂದ 9ರ ವರೆಗೆ ಸಾಗಲಿದೆ.

ದೇಶದ ಐಷಾರಾಮಿ ವಾಹನ ಮಾರುಕಟ್ಟೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಾರ್ಷಿಕವಾಗಿ 30,000ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗುತ್ತಿದೆ. ಇಲ್ಲಿ ಜರ್ಮನಿಯ ಆಡಿ ಹಾಗೂ ಮರ್ಸಿಡಿಸ್ ಬೆಂಝ್‌ಗಳಂತಹ ಸಂಸ್ಥೆಗಳು ಅಂದಾಜು 10,000 ಯುನಿಟ್‌ಗಳಷ್ಟು ಮಾರಾಟ ಕಂಡುಕೊಂಡಿದೆ.

English summary
Aston Martin, Maserati, Bentley to debut at Auto Expo 2016
Story first published: Monday, February 23, 2015, 16:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark