ದೆಹಲಿ ಆಟೋ ಎಕ್ಸ್ ಪೋಗೆ ನಿಮ್ಮ ಟಿಕೆಟ್ ಈಗಲೇ ಕಾಯ್ದಿರಿಸಿ!
ಬಹುನಿರೀಕ್ಷಿತ ದೆಹಲಿ ಆಟೋ ಎಕ್ಸ್ ಪೋಗೆ ದಿನಗಣನೆ ಈಗಾಗಲೇ ಪ್ರಾರಂಭವಾಗಿದೆ. ಈ ಸಂಬಂಧ ಆಯೋಜನಾಕಾರರು ವೇಳಾಪಟ್ಟಿ ದಿನಾಂಕ ಹಾಗೂ ಸ್ಥಳದ ಬಗೆಗಿನ ಸಮಗ್ರ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
2016 ಆಟೋ ಎಕ್ಸ್ ಪೋ ಎರಡು ಹಂತಗಳಾಗಿ ನಡೆಯಲಿದೆ. ಅವುಗಳೆಂದರೆ,
- ಕಾಂಪೊನೆಂಟ್ ಶೋ
- ಮೋಟಾರು ಶೋ

ದಿನಾಂಕ
ಕಾಂಪೊನೆಂಟ್ ಶೋ - 2016 ಜನವರಿ 4ರಿಂದ 7ರ ವರೆಗೆ
ಮೋಟಾರು ಶೋ - 2016 ಜನವರಿ 05ರಿಂದ 09ರ ವರೆಗೆ
ವಾಹನ ಪ್ರದರ್ಶನ ನಡೆಯುವ ಸ್ಥಳ
ಕಾಂಪೊನೆಂಟ್ ಶೋ - ಪ್ರಗತಿ ಮೈದಾನ
ಮೋಟಾರು ಶೋ - ಇಂಡಿಯನ್ ಎಕ್ಸ್ ಪೋ ಮಾರ್ಟ್ ಆ್ಯಂಡ್ ಸೆಂಟರ್, ಗ್ರೇಟರ್ ನೋಯ್ಡಾ

ಏನಿದು ವಾಹನ ಮೇಳ?
ದೆಹಲಿ ಆಟೋ ಎಕ್ಸ್ ಪೋ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಹಾ ವಾಹನ ಪ್ರದರ್ಶನ ಮೇಳವಾಗಿದ್ದು, ವಾಹನ ಪ್ರೇಮಿಗಳ ಪಾಲಿಗೆ ಹಬ್ಬದ ವಾತಾವರಣ ನೀಡುತ್ತದೆ. ಇಲ್ಲಿ ದೇಶ, ವಿದೇಶಗಳ ಸಂಸ್ಥೆಯು ತನ್ನೆಲ್ಲ ನಾವೀನ್ಯ ತಂತ್ರಗಾರಿಕೆಯ ಹೊಸ, ಪರಿಷ್ಕೃತ ಹಾಗೂ ಕಾನ್ಸೆಪ್ಟ್ ಮಾದರಿಗಳ ಜೊತೆಗೆ ಬಿಡಿಭಾಗಗಳನ್ನು ಪ್ರದರ್ಶಿಸುತ್ತದೆ.
2014ನೇ ಆಟೋ ಎಕ್ಸ್ ಪೋದಲ್ಲಿ ಒಟ್ಟು 44 ವಾಹನಗಳು ಬಿಡುಗಡೆ ಭಾಗ್ಯ ಕಂಡಿತ್ತಲ್ಲದೆ, ಈ ಪೈಕಿ 26 ಜಾಗತಿಕವಾಗಿ ಬಿಡುಗಡೆಯಾಗಿತ್ತು. ಅಲ್ಲದೆ ಸರಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ವಾಹನ ಪ್ರದರ್ಶನ ಮೇಳದ ವೀಕ್ಷಣೆಗಾಗಿ ಇಲ್ಲಿಗೆ ಭೇಟಿ ಕೊಟ್ಟಿದ್ದರು. ಅಂದು 300ರಷ್ಟು ಕಾರುಗಳು ಸೇರಿದಂತೆ 20ರಷ್ಟು ದ್ವಿಚಕ್ರ ವಾಹನ ಸೇರಿದಂತೆ ತ್ರಿಚಕ್ರ ವಾಹನ ಹಾಗೂ ಟ್ರಕ್ ಗಳು ಪ್ರದರ್ಶನ ಕಂಡಿದ್ದವು.


Click it and Unblock the Notifications








