ವೆಸ್ಪಾ 150-125 ಸಿಸಿ ಪ್ರೀಮಿಯಂ ಶ್ರೇಣಿಗಳ ಸ್ಕೂಟರ್ ಬಿಡುಗಡೆ

Written By:

ಇಟಲಿ ಮೂಲದ ಐಕಾನಿಕ್ ಸಂಸ್ಥೆ ವೆಸ್ಪಾ, ಭಾರತದಲ್ಲಿ ಪ್ರೀಮಿಯಂ ಶ್ರೇಣಿಯ 150 ಹಾಗೂ 125 ಸಿಸಿ ಸ್ಕೂಟರ್ ಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ಜಾಗತಿಕ ಬ್ರಾಂಡ್ ಅಂಬಾಸಿಡರ್ ಹಾಗೂ ಖ್ಯಾತ ಫುಟ್ಬಾಲ್ ಆಟಗಾರ ಅಲೆಸ್ಸ್ಯಾಂಡ್ರೋ ಡೆಲ್ ಪಿಯರೋ ದೇಶಕ್ಕೆ ಹೊಸ ವೆಸ್ಪಾ ಸ್ಕೂಟರ್ ಗಳನ್ನು ಪರಿಚಯಿಸಿದರು.

ಇದೇ ವೇಳೆಯಲ್ಲಿ "ಮಕ್ಕಳಿಗಾಗಿ ವೆಸ್ಪಾ" (Vespa for Children) ಸಹಾಯಾರ್ಥ ನಿಧಿ ಸಂಗ್ರಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆಯಲ್ಲಿ ಪಿಯರೋ ಸಹಿ ಮಾಡಿದ ವೆಸ್ಪಾ ಸ್ಕೂಟರ್ ಹರಾಜಿಗಿಡಲಾಗಿತ್ತು.

To Follow DriveSpark On Facebook, Click The Like Button
ವೆಸ್ಪಾ 150-125 ಸಿಸಿ ಪ್ರೀಮಿಯಂ ಶ್ರೇಣಿಗಳ ಸ್ಕೂಟರ್ ಬಿಡುಗಡೆ

ತನ್ನದೇ ವಿಶೇಷ ವಿನ್ಯಾಸ, ಕಟ್ಟಿಂಗ್ ಎಡ್ಜ್ ತಂತ್ರಜ್ಞಾನದೊಂದಿಗೆ ವೆಸ್ಪಾ ಸ್ಕೂಟರ್, ವಾಹನ ಪ್ರೇಮಿಗಳ ಜೀವನ ಶೈಲಿಯನ್ನೇ ಬದಲಾಯಿಸಿದೆ. ನೂತನ ವೆಸ್ಪಾ ಎಸ್‌ಎಕ್ಸ್‌ಎಲ್ ಮತ್ತು ವೆಸ್ಪಾ ವಿಎಕ್ಸ್‌ಎಲ್ ಸ್ಕೂಟರ್ ಗಳು 150 ಸಿಸಿ 3 ವಾಲ್ವ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 125 ಸಿಸಿ 3 ವಾಲ್ವ್ ಎಂಜಿನ್ ಆಯ್ಕೆಯೊಂದಿಗೂ ಲಭ್ಯವಿರುತ್ತದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

  • ವೆಸ್ಪಾ ಎಸ್‌ಎಕ್ಸ್ ಎಲ್ 150: 88,696 ರು.
  • ವೆಸ್ಪಾ ವಿಎಕ್ಸ್‌ಎಲ್ 150: 84,641 ರು.
ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

  • ವೆಸ್ಪಾ ಎಸ್‌ಎಕ್ಸ್‌ಎಲ್ 125: 81967 ರು.
  • ವೆಸ್ಪಾ ವಿಎಕ್ಸ್‌ಎಲ್ 125: 77,308 ರು.
ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸಾಲ್,
  • 11 ಇಂಚುಗಳ ಅಲಾಯ್ ವೀಲ್,
  • ಅಗಲವಾದ ಟ್ಯೂಬ್ ಲೆಸ್ ಟಕ್ರ,
  • ಫ್ರಂಟ್ ಡಿಸ್ಕ್ ಬ್ರೇಕ್,
  • ಸಿಂಗಲ್ ಫೇಸ್ ಮೊನೊಕಾಕ್ ಸ್ಟೀಲ್ ಬಾಡಿ
ಆಕರ್ಷಕ ಬಣ್ಣಗಳು

ಆಕರ್ಷಕ ಬಣ್ಣಗಳು

ವೆಸ್ಪಾ ಎಸ್‌ಎಕ್ಸ್‌ಎಲ್: ಕಿತ್ತಳೆ, ಮ್ಯಾಟ್ ಬ್ಲ್ಯಾಕ್, ಬಿಳಿ, ಮ್ಯಾಟ್ ರೆಡ್, ಆಝುರ್ ಬ್ಲೂ

ವೆಸ್ಪಾ ವಿಎಕ್ಸ್‌ಎಲ್: ಹಳದಿ, ಬಿಳಿ, ಕೆಂಪು, ಮ್ಯಾಟ್ ಬ್ಲ್ಯಾಕ್, ಹಸಿರು, ಮೇಜ್ ಗ್ರೇ

Read more on ವೆಸ್ಪಾ vespa
English summary
Vespa global brand ambassador Alessandro Del Piero launches the new 150 cc premium Vespa range in India.
Story first published: Wednesday, September 2, 2015, 11:03 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark