ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

By Nagaraja

ಪೊಲರಿಸ್ ಇಂಡಸ್ಟ್ರೀಸ್ ಬಹುರಾಷ್ಟ್ರೀಯ ಸಂಸ್ಥೆಯ ಅಧೀನತೆಯಲ್ಲಿರುವ ಪೊಲರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಮುಂಬೈನಲ್ಲಿ ಅತಿ ನೂತನ 2016 ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಬೈಕನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

ಮುಂಬೈನಲ್ಲಿ ಸ್ಥಿತಗೊಂಡಿರುವ ಆಟೋ ಹ್ಯಾಂಗರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಡೀಲರ್ ಶಿಪ್ ಗೆ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಭರ್ಜರಿ ಎಂಟ್ರಿ ಕೊಟ್ಟಿದೆ. ಪ್ರಶಸ್ತಿ ವಿಜೇತ ಇಂಡಿಯನ್ ಸ್ಕೌಟ್ ಶ್ರೇಣಿಯ ನೂತನ ಬೈಕ್ ಇದಾಗಿದೆ.

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ನೂತನ 2016 ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 11.99 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದ್ದು, ಪ್ರಸಕ್ತ ತಿಂಗಳಿನಿಂದಲೇ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ.

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ಇದಕ್ಕೆ 60 ಕ್ಯೂಬಿಕ್ ಇಂಚುಗಳ (999 ಸಿಸಿ ) ಎಂಜಿನ್ ನಿಂದಾಗಿ ಇಂಡಿಯನ್ ಸ್ಕೌಟ್ ಸಿಕ್ಸ್ಟಿ ಎಂಬ ಹೆಸರನ್ನಿಡಲಾಗಿದೆ. ಇದರಲ್ಲಿ 999 ಸಿಸಿ ಲಿಕ್ವಿಡ್ ಕೂಲ್ಡ್ ಫ್ಯೂಯಲ್ ಇಂಜೆಕ್ಟಡ್ ವಿ-ಟ್ವಿನ್ ಎಂಜಿನ್ ಆಳವಡಿಸಲಾಗಿದೆ.

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ಇದರಲ್ಲಿರುವ 99ಸಿಸಿ ಎಂಜಿನ್ 88.8 ಎನ್ ಎಂ ತಿರುಗುಬಲದಲ್ಲಿ 78 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ನಿರ್ಮಾಣ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಲ್ಲಿ ಅತ್ಯುತ್ತಮ ಮನ್ನಣೆಯನ್ನು ಗಿಟ್ಟಿಸಿಕೊಂಡಿರುವ ಅಮೆರಿಕದ ಮೂಲದ ಐಕಾನಿಕ್ ಇಂಡಿಯನ್ ಮೋಟಾರ್ ಸೈಕಲ್ ಸಂಸ್ಥೆಯು, ಭಾರತಕ್ಕೆ ಮಗದೊಂದು ಕೊಡುಗೆಯನ್ನು ನೀಡಿದೆ.

ಸಸ್ಪೆನ್ಷನ್

ಸಸ್ಪೆನ್ಷನ್

ಮುಂಭಾಗ: ಟೆಲೆಸ್ಕಾಪಿಕ್ ಫಾರ್ಕ್

ಹಿಂಭಾಗ: ಡ್ಯುಯಲ್ ಶಾಕ್

ಬ್ರೇಕ್

ಬ್ರೇಕ್

ಮುಂಭಾಗ: 298 ಎಂಎಂ ಜೊತೆ 2 ಪಿಸ್ತಾನ್ ಕ್ಯಾಲಿಪರ್

ಹಿಂಭಾಗ: 298 ಎಂಎಂ ಜೊತೆ 1 ಪಿಸ್ತಾನ್ ಕ್ಯಾಲಿಪರ್

ಚಕ್ರಗಳು

ಚಕ್ರಗಳು

ಮುಂಭಾಗ: 130/90-16 72H

ಹಿಂಭಾಗ: 150/80-16 71H

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ಇಂಧನ ಟ್ಯಾಂಕ್: 12.5 ಲೀಟರ್

ಚಕ್ರಾಂತರ: 1562 ಎಂಎಂ

ಸೀಟು ಎತ್ತರ: 643 ಎಂಎಂ

ಗ್ರೌಂಡ್ ಕ್ಲಿಯರನ್ಸ್: 135 ಎಂಎಂ

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 2311

ಅಗಲ: 880

ಎತ್ತರ: 1207

ಭಾರ: 246 ಕೆ.ಜಿ.

ಮೂರು ಕ್ಲಾಸಿಕ್ ಬಣ್ಣಗಳು

ಮೂರು ಕ್ಲಾಸಿಕ್ ಬಣ್ಣಗಳು

ಥಂಡರ್ ಬ್ಲ್ಯಾಕ್,

ಇಂಡಿಯನ್ ಮೋಟಾರ್ ಸೈಕಲ್ ರೆಡ್ ಮತ್ತು

ಪಿಯರ್ಲ್ ವೈಟ್.

ಆಕ್ಸೆಸರಿಗಳು

ಆಕ್ಸೆಸರಿಗಳು

ಸೀಟು,

ಹ್ಯಾಂಡಲ್ ಬಾರ್,

ಫೂಟ್ ಪೆಗ್,

ಸ್ಯಾಡಲ್ ಬ್ಯಾಗ್,

ಕ್ವಿಕ್ ರಿಲೀಸ್ ವಿಂಡ್ ಸ್ಕ್ರೀನ್

ಇಂಡಿಯನ್ ಮೋಟಾರ್ ಸೈಕಲ್ ಬಗ್ಗೆ ಒಂದಿಷ್ಟು...

ಇಂಡಿಯನ್ ಮೋಟಾರ್ ಸೈಕಲ್ ಬಗ್ಗೆ ಒಂದಿಷ್ಟು...

ಪೊಲರಿಸ್ ಇಂಡಸ್ಟ್ರೀಸ್ ಅಂತರಾಷ್ಟ್ರೀಯ ಸಂಸ್ಥೆಯ ಭಾಗವಾಗಿರುವ ಇಂಡಿಯನ್ ಮೋಟಾರ್ ಸೈಕಲ್, ಅಮೆರಿಕದ ಮೊತ್ತ ಮೊದಲ ಮೋಟಾರ್ ಸೈಕಲ್ ಸಂಸ್ಥೆಯಾಗಿದ್ದು, 1901ನೇ ಇಸವಿಯಲ್ಲಿ ಸ್ಥಾಪಿತವಾಗಿತ್ತು.

ಭಾರತದಲ್ಲಿರುವ ಇಂಡಿಯ್ ಮೋಟಾರ್ ಸೈಕಲ್ ಗಳು

ಭಾರತದಲ್ಲಿರುವ ಇಂಡಿಯ್ ಮೋಟಾರ್ ಸೈಕಲ್ ಗಳು

ಚೀಫ್ ಶ್ರೇಣಿ: ಇಂಡಿಯನ್ ಚೀಫ್ ಕ್ಲಾಸಿಕ್, ಇಂಡಿಯನ್ ಚೀಫ್ ವಿಂಟೇಜ್, ಇಂಡಿಯನ್ ಚೀಫ್ಟೈನ್, ಇಂಡಿಯನ್ ಚೀಫ್ ಡಾರ್ಕ್ ಹಾರ್ಸ್.

ಸ್ಕೌಟ್ ಶ್ರೇಣಿ: ಇಂಡಿಯನ್ ಸ್ಕೌಟ್, ಇಂಡಿಯನ್ ಸ್ಕೌಂಡ್ ಸಿಕ್ಟ್ಟಿ ಮತ್ತು ಇಂಡಿಯನ್ ರೋಡ್ ಮಾಸ್ಟರ್.

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ಭಾರತದಲ್ಲಿ ಇಂಡಿಯನ್ ಮೋಟಾರ್ ಸೈಕಲ್ ಬೈಕ್ ಗಳನ್ನು ಗುರ್ವಾಂವ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಅಹಮದಾಬಾದ್, ಚಂಡೀಗಡ ಮತ್ತು ಕೊಚ್ಚಿಯಲ್ಲಿ (ಸದ್ಯದಲ್ಲೇ ಆರಂಭ) ಸ್ಥಿತಗೊಂಡಿರುವ ಡೀಲರ್ ಶಿಪ್ ಗಳ ಮುಖಾಂತರ ಮಾರಾಟ ಮಾಡಲಾಗುವುದು.

ಮುಂಬೈನಲ್ಲಿ ಇಂಡಿಯನ್ ಮೋಟಾರ್‌ಸೈಕಲ್ ಸ್ಕೌಟ್ ಸಿಕ್ಸ್ಟಿ ಕಲರವ

ಇಂಡಿಯನ್ ಮೋಟಾರ್ ಸೈಕಲ್ ಇತ್ತೀಚೆಗಷ್ಟೇ ದೇಶದಲ್ಲಿ ರೋಡ್ ಸೈಡ್ ಅಸಿಸ್ಟನ್ಸ್ ಪ್ರೋಗ್ರಾಂ (ಆರ್ ಎಸ್ ಎ) ಮತ್ತು ಎಕ್ಸ್ ಟೇಂಡೆಡ್ ವಾಂಟಿ (ಇಡಬ್ಲ್ಯು) ಕಾರ್ಯಕ್ರಮವನ್ನು ಆರಂಭಿಸಿತ್ತು.

Most Read Articles

Kannada
English summary
All New 2016 Indian Scout Sixty Launched In Mumbai
Story first published: Wednesday, July 13, 2016, 15:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X