'ಅಥೆರ್' ದೇಶದ ಮೊದಲ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ

Written By:

ಬೆಂಗಳೂರಿನಲ್ಲಿ ಸಾಗುತ್ತಿರುವ ಸರ್ಜ್ 2016 (SURGE 2016) ಟೆಕ್ ಸಮಾವೇಶದಲ್ಲಿ ಅಥೆರ್ ಎನರ್ಜಿ ಸಂಸ್ಥೆಯು ದೇಶದ ಮೊತ್ತ ಮೊದಲ ಅಥೆರ್ ಎಸ್340 ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದೆ.

ಬೆಂಗಳೂರು ತಳಹದಿಯದ್ದೇ ಆಗಿರುವ ಈ ಸಂಸ್ಥೆಯನ್ನು ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್ ಎಂಬವರು ಸ್ಥಾಪಿಸಿದ್ದರು. ಈ ಸ್ಮಾರ್ಟ್ ಸ್ಕೂಟರ್ ಟಚ್ ಸ್ಕ್ರೀನ್ ಡ್ಯಾಶ್ ಬೋರ್ಡ್, ರಿಮೋಟ್ ಅಪ್ಲಿಕೇ,ನ್ ಕಂಟ್ರೋಲ್, ನೇವಿಗೇಷನ್ ಸಿಸ್ಟಂ, ಲೈಟ್ ಸೆನ್ಸಿಂಗ್ ಹೆಡ್ ಲ್ಯಾಂಪ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಕೂಡಿರಲಿದೆ.

ಎಲೆಕ್ಟ್ರಿಕ್ ಸ್ಕೂಟರ್

ಲಿಥಿಯಂ ಇಯಾನ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುವ ಅಥೆರ್ ಎಸ್340, ಕೇವಲ 50 ನಿಮಿಷಗಳಲ್ಲೇ ಶೇಕಡಾ 80ರಷ್ಟು ಚಾರ್ಜ್ ಮಾಡಿಸಬಹುದಾಗಿದೆ. ಅಲ್ಲದೆ ಸಂಪೂರ್ಣ ಜಾರ್ಜ್ ಮಾಡಿಸಿದಾಗ ಗಂಟೆಗೆ 72 ಕೀ.ಮೀ. ವೇಗದಲ್ಲಿ 60 ಕೀ.ಮೀ. ವ್ಯಾಪ್ತಿಯ ವರೆಗೂ ಸಂಚರಿಸಬಹುದಾಗಿದೆ. ಅಂತೆಯೇ ಸಾಮಾನ್ಯ 5ಎ ಸಾಕೆಟ್ ನಿಂದಲೂ ಚಾರ್ಜ್ ಮಾಡಿಸಬಹುದಾಗಿದೆ.

ಇನ್ನು ಗಮನಾರ್ಹ ಸಂಗತಿಯೆಂದರೆ ಅಥೆರ್ ಎಸ್340 ಎಲೆಕ್ಟ್ರಿಕ್ ಸ್ಕೂಟರನ್ನು ಮೊಬೈಲ್ ಫೋನ್ ಮುಖಾಂತರ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ. ಹಾಗಿದ್ದರೂ ಬೆಲೆ ಇನ್ನಷ್ಟೇ ಪ್ರಕಟವಾಗಬೇಕಾಗಿದೆ.

English summary
Ather Unveils Peppy Looking Eco Friendly Smart Electric Scooter
Story first published: Tuesday, February 23, 2016, 18:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X