ಬೆರಗುಗೊಳಿಸುವ ಹೋಂಡಾ 'ನವಿ' ಅನಿರೀಕ್ಷಿತ ಬೆಲೆಯಲ್ಲಿ ಎಂಟ್ರಿ

Written By:

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್ ಇಂಡಿಯಾ ಬಹುನಿರೀಕ್ಷಿತ 2016 ಆಟೋ ಎಕ್ಸ್ ಪೋದಲ್ಲಿ ನೂತನ ಹೋಂಡಾ ನವಿ ಬಿಡುಗಡೆಗಾಗಿ ಸಾಕಷ್ಟು ತಯಾರಿಗಳನ್ನು ನಡೆಸಿತ್ತು.

ಆಟೋ ಎಕ್ಸ್ ಪೋ ತಾಜಾ ಕಾರು ಬೈಕ್ ಸುದ್ದಿಗಾಗಿ ಇಲ್ಲಿಗೆ ಭೇಟಿ ಕೊಡುತ್ತಿರಿ

ಎಲ್ಲವೂ ಅಂದುಕೊಂಡಂತೆ ಈ ಆಕರ್ಷಕ ದ್ವಿಚಕ್ರ ವಾಹನವು ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದೆ. ಇದನ್ನು ಸ್ಕೂಟರ್ ಅಥವಾ ಬೈಕ್ ಎಂದು ವಿಶ್ಲೇಷಿಸಬೇಕೇ ಎಂಬುದು ಓದುಗರಿಗೆ ಬಿಟ್ಟ ವಿಚಾರ. ಇದಕ್ಕೂ ಮಿಗಿಲಾಗಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಬಿಡುಗಡೆಯಾಗಿರುವುದು ಬೈಕ್ ಪ್ರೇಮಿಗಳನ್ನು ಅಚ್ಚರಿಗೊಳಿಸಿದೆ.

To Follow DriveSpark On Facebook, Click The Like Button
ಹೋಂಡಾ ನವಿ

ಹೋಂಡಾ ನವಿ ಬೆಲೆ ಎಷ್ಟು ಗೊತ್ತೇ?

39,500 ರು. (ಎಕ್ಸ್ ಶೋ ರೂಂ ದೆಹಲಿ)

ಎಂಜಿನ್ ತಾಂತ್ರಿಕತೆ

  • 109.2 ಸಿಸಿ ಪೆಟ್ರೋಲ್ ಎಂಜಿನ್
  • 8 ಅಶ್ವಶಕ್ತಿ @ 7500 rpm
  • 8.83 ಎನ್‌ಎಂ ತಿರುಗುಬಲ @ 5500 rpm
  • ಆಟೋಮ್ಯಾಟಿಕ್ ಗೇರ್ ಬಾಕ್ಸ್

ಬ್ರೇಕ್ ಮತ್ತು ಸಸ್ಪೆನ್ಷನ್

ಅತಿ ನೂತನ ಕಾಂಬಿ ಬ್ರೇಕ್ ಸಿಸ್ಟಂ (ಸಂಯುಕ್ತ) ಬ್ರೇಕ್ ವ್ಯವಸ್ಥೆಯೊಂದಿಗೆ ಬಂದಿರುವ ನೂತನ ಹೋಂಡಾ ನವಿ, ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ಮೊನೊಶಾಕ್ ರಿಯರ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಪಡೆದುಕೊಂಡಿದೆ.

ಹೋಂಡಾ ನವಿ

ಶೈಲಿ

ಆಫ್ ರೋಡ್ ಬೈಕ್ ತರಹನೇ ಗೋಚರಿಸುತ್ತಿರುವ ಹೋಂಡಾ ನವಿ ಸ್ಕೂಟರ್ ಅಥವಾ ಬೈಕ್ ಆಗಿದೆಯೇ ಎಂಬುದು ಇನ್ನು ಗೊಂದಲದಲ್ಲಿ ಮುಂದುವರಿದಿದೆ. ಮುಂಭಾಗದಲ್ಲಿ ಆಯತಾಕಾರದ ಹೆಡ್ ಲ್ಯಾಂಪ್ ಹೆಚ್ಚು ಆಕರ್ಷಣೆಯನ್ನು ಕಾಪಾಡಿಕೊಂಡಿದೆ.

ಐದು ಆಕರ್ಷಕ ಬಣ್ಣಗಳು

ಪ್ಯಾಟ್ರಿಯೊನ್ ರೆಡ್, ಹೊಪ್ಪರ್ ಗ್ರೀನ್, ಶಾಸ್ತಾ ವೈಟ್, ಸ್ಪಾರ್ಕಿ ಆರಂಜ್ ಮತ್ತು ಬ್ಲ್ಯಾಕ್.

ಅಂದ ಹಾಗೆ 2016 ಆಟೋ ಎಕ್ಸ್ ಪೋದಲ್ಲಿ ನವಿ ಮೂರು ವೆರಿಯಂಟ್ ಗಳನ್ನು ಹೋಂಡಾ ಪ್ರದರ್ಶನಗೊಳಿಸಿತ್ತು. ಅವುಗಳೆಂದರೆ,

  • ನವಿ ಸ್ಟ್ರೀಟ್,
  • ನವಿ ಅಡ್ವೆಂಚರ್ ಮತ್ತು
  • ನವಿ ಆಫ್ ರೋಡ್.

ಬುಕ್ಕಿಂಗ್, ಪ್ರತಿಸ್ಪರ್ಧಿಗಳು

2016 ಫೆಬ್ರವರಿ 03ರಿಂದಲೇ ಹೋಂಡಾ ನವಿ ಬುಕ್ಕಿಂಗ್ ಆರಂಭಗೊಂಡಿದ್ದು, ಆಸಕ್ತರು ಹೋಂಡಾ ಅಧಿಕೃತ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ. ಸದ್ಯಕ್ಕೆ ದೇಶದ ಮಾರುಕಟ್ಟೆಯಲ್ಲಿ ಹೋಂಡಾ ನವಿಗೆ ಯಾವುದೇ ಪ್ರತಿಸ್ಪರ್ಧಿಗಳಿಲ್ಲ.

English summary
2016 Auto Expo: Quirky Honda NAVI Bike/Scooter Crossover Launched
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X