ಬೆನೆಲ್ಲಿ 150 ಸಿಸಿ ಸ್ಕೂಟರ್ ಭಾರತದಲ್ಲಿ ಟೆಸ್ಟಿಂಗ್ ನಡೆಸಿದ್ದು ಏಕೆ?

Written By:

ಅಂದುಕೊಂಡಂತೆ 2016ನೇ ಸಾಲಿನಲ್ಲಿ ದೇಶದ ದ್ವಿಚಕ್ರ ವಾಹನ ವಿಭಾಗ ಕ್ರಾಂತಿಕಾರಿ ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿದೆ. ಮುಂಬರುವ ಆಗಸ್ಟ್ ತಿಂಗಳಲ್ಲಿ ಇಟಲಿಯ ಪಿಯಾಜಿಯೊ ಒಡೆತನದ ಐಕಾನಿಕ್ ಎಪ್ರಿಲಿಯಾ ಎಸ್‌ಆರ್150 ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿರುವಂತೆಯೇ ಮಗದೊಂದು ಪ್ರಖ್ಯಾತ ಸಂಸ್ಥೆಯು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿರುವುದು ಹೆಚ್ಚಿನ ಕುತೂಹಲಗಳಿಗೆ ಎಡೆ ಮಾಡಿ ಕೊಟ್ಟಿದೆ.

ಇಟಲಿಯ ಮಗದೊಂದು ಐಕಾನಿಕ್ ಸಂಸ್ಥೆಯಾಗಿರುವ ಬೆನೆಲ್ಲಿ, ತನ್ನ ಶಕ್ತಿಶಾಲಿ 150 ಸಿಸಿ ಸ್ಕೂಟರ್ ನ ಸಂಚಾರ ಪರೀಕ್ಷೆಯನ್ನು ಭಾರತೀಯ ರಸ್ತೆಗಳಲ್ಲಿ ಹಮ್ಮಿಕೊಂಡಿರುವುದು ಹೆಚ್ಚಿನ ಆಸಕ್ತಿಯನ್ನು ಕೆರಳಿಸಿದೆ.

ಬೆನೆಲ್ಲಿ 150 ಸಿಸಿ ಸ್ಕೂಟರ್ ಭಾರತದಲ್ಲಿ ಟೆಸ್ಟಿಂಗ್

ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ಬೆನೆಲ್ಲಿ ಎಕ್ಸ್ ಟಿ 150 ಸಿಸಿ ಸ್ಕೂಟರನ್ನು ಪುಣೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರಿ ಪರೀಕ್ಷೆ ನಡೆಸಲಾಗಿದೆ. ಈ ಸಂದರ್ಭದನ್ನು ಸ್ಕೂಟರಿಗೆ ಕಪ್ಪು ಪಟ್ಟಿ ಧರಿಸಿ ಮರೆಮಾಚುವ ಪ್ರಯತ್ನ ಮಾಡಲಾಗಿತ್ತು.

ಬೆನೆಲ್ಲಿ 150 ಸಿಸಿ ಸ್ಕೂಟರ್ ಭಾರತದಲ್ಲಿ ಟೆಸ್ಟಿಂಗ್

ಶಕ್ತಿಯುತ ದೇಹ ರಚನೆ, ಮುಂಭಾಗದಲ್ಲಿ ದೊಡ್ಡದಾದ ವಿಂಡ್ ಸ್ಕ್ರೀನ್, ಫೈವ್ ಸ್ಪೋಕ್ ಅಲಾಯ್ ವೀಲ್, ಡಿಸ್ಕ್ ಬ್ರೇಕ್ ಮತ್ತು ಎಕ್ಸಾಸ್ಟ್ ಕೊಳವೆಗಳು ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದೆ.

ಬೆನೆಲ್ಲಿ 150 ಸಿಸಿ ಸ್ಕೂಟರ್ ಭಾರತದಲ್ಲಿ ಟೆಸ್ಟಿಂಗ್

ಈ ಸಂಬಂಧ ಬೆನೆಲ್ಲಿಯಾಗಲಿ ಅಥವಾ ದೇಶದಲ್ಲಿ ಬೆನೆಲ್ಲಿ ಪಾಲುದಾರಿಕೆ ಹೊಂದಿರುವ ಡಿಎಸ್‌ಕೆಯಿಂದ ಯಾವುದೇ ಖಚಿತ ಮಾಹಿತಿಗಳು ಇದುವರೆಗೆ ಬಂದಿಲ್ಲ. ಆದರೂ ಪರೀಕ್ಷೆ ನಡೆಸಿರುವುದು 150 ಸಿಸಿ ಸ್ಕೂಟರ್ ಎಂಬುದಂತೂ ಸ್ಪಷ್ಟವಾಗಿದೆ.

ಬೆನೆಲ್ಲಿ 150 ಸಿಸಿ ಸ್ಕೂಟರ್ ಭಾರತದಲ್ಲಿ ಟೆಸ್ಟಿಂಗ್

ನೂತನ ಬೆನೆಲ್ಲಿ 150 ಸಿಸಿ ಸ್ಕೂಟರ್ ಕೆಫೆನೀರೋ ಎಂದು ಅಂದಾಜಿಸಲಾಗಿದ್ದು, ಇದು 13.4 ಅಶ್ವಶಕ್ತಿಯನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿರುತ್ತದೆ.

ಬೆನೆಲ್ಲಿ 150 ಸಿಸಿ ಸ್ಕೂಟರ್ ಭಾರತದಲ್ಲಿ ಟೆಸ್ಟಿಂಗ್

ಸಾಮಾನ್ಯ ಸ್ಕೂಟರ್ ಗಳಿಗೆ ಹೋಲಿಸಿದಾಗ 150 ಕೆ.ಜಿ. ಯಷ್ಟು ತೂಕ ಹೊಂದಿರುವ ಖೆಫೆನೀರೋ ಯಾವಾಗ ಭಾರತ ಪ್ರವೇಶ ಪಡೆಯಲಿದೆ ಎಂಬುದಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಗಳು ಲಭ್ಯವಾಗಿಲ್ಲ.

English summary
Spied: Benelli Cafanero 150 Scooter Spotted Testing In India
Story first published: Wednesday, March 23, 2016, 12:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark