ಸ್ಪ್ಲೆಂಡರ್‌ಗೆ ಬಿಸಿ ಮುಟ್ಟಿಸಿದ ಆಕ್ಟಿವಾ ಮಗದೊಮ್ಮೆ ನಂ.1

By Nagaraja

ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2016 ಆಟೋ ಎಕ್ಸ್ ಪೋಗೆ ಸಾಕ್ಷಿಯಾಗಿರುವ ಫೆಬ್ರವರಿ ತಿಂಗಳಲ್ಲೂ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳು ಗಮನಾರ್ಹ ಮಾರಾಟವನ್ನು ಸಾಧಿಸಿವೆ.

ಪ್ರಯಾಣಿಕ ದ್ವಿಚಕ್ರ ವಾಹನ ಮಾರುಕಟ್ಟೆಗೆ ಅನೇಕ ಹೊಸ ಮಾದರಿಗಳು ಲಗ್ಗೆಯಿಡುತ್ತಿರುವಂತೆಯೇ ಆಗಲೇ ಅಸ್ತಿತ್ವದಲ್ಲಿರುವ ಕೆಲವು ಬೈಕ್ ಗಳು ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದೆ. ಪ್ರಸ್ತುತ ಲೇಖನದಲ್ಲಿ 2016 ಫೆಬ್ರವರಿ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾಗಿರುವ ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

10. ಬಜಾಜ್ ಸಿಟಿ

10. ಬಜಾಜ್ ಸಿಟಿ

42,924 ಯುನಿಟ್ ಗಳ ಮಾರಾಟವನ್ನು ಕಂಡಿರುವ ಬಜಾಜ್ ಸಿಟಿ 100 ಟಾಪ್ 10 ಪಟ್ಟಿಯನಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.

09. ಬಜಾಜ್ ಪಲ್ಸರ್

09. ಬಜಾಜ್ ಪಲ್ಸರ್

ಜನಪ್ರಿಯತೆಯಲ್ಲಿ ಈಗಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ದೇಶದ ನಂ.1 ಕ್ರೀಡಾ ಬೈಕ್ 47,208 ಯುನಿಟ್ ಗಳ ಮಾರಾಟದೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ.

ಮುಖ್ಯಾಂಶಗಳು

135 ಸಿಸಿ ಎಂಜಿನ್,

13 ಅಶ್ವಶಕ್ತಿ, 11 ಎನ್ ಎಂ ತಿರುಗುಬಲ,

ಮೈಲೇಜ್ 64 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 71,000 ರು.

08. ಟಿವಿಎಸ್ ಜೂಪಿಟರ್

08. ಟಿವಿಎಸ್ ಜೂಪಿಟರ್

ಆಕ್ಟಿವಾ ಬಳಿಕ ಟಾಪ್ 10 ಪಟ್ಟಿನಲ್ಲಿ ಸ್ಥಾನ ಪಡೆದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಟಿವಿಎಸ್ ಜೂಪಿಟರ್ ಪಾತ್ರವಾಗಿದೆ. 2016 ಫೆಬ್ರವರಿ ತಿಂಗಳಲ್ಲಿ 47,712 ಯುನಿಟ್ ಗಳ ಮಾರಾಟ ಕಾಪಾಡಿಕೊಂಡಿರುವ ಟಿವಿಎಸ್ ಜೂಪಿಟರ್ ಗಮನಾರ್ಹವೆನಿಸಿದೆ.

ಮುಖ್ಯಾಂಶಗಳು

109 ಸಿಸಿ ಎಂಜಿನ್,

8 ಅಶ್ವಶಕ್ತಿ, 8 ಎನ್ ಎಂ ತಿರುಗುಬಲ,

ಮೈಲೇಜ್ 62 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 55,000 ರು.

 07. ಹೋಂಡಾ ಸಿಬಿ ಶೈನ್

07. ಹೋಂಡಾ ಸಿಬಿ ಶೈನ್

ಏಳನೇ ಸ್ಥಾನದಲ್ಲಿರುವ ಹೋಂಡಾ ಸಿಬಿ ಶೈನ್ ಒಟ್ಟಾರೆ 58,433 ಯುನಿಟ್ ಗಳ ಮಾರಾಟವನ್ನು ದಾಖಲಿಸಿದ್ದು, ಮಗದೊಮ್ಮೆ ತಾನ್ಯಕೆ ಅತ್ಯುತ್ತಮ ಎಕ್ಸಿಕ್ಯೂಟಿವ್ ಬೈಕ್ ಎಂಬುದನ್ನು ನಿರೂಪಿಸಿದೆ.

ಮುಖ್ಯಾಂಶಗಳು

125 ಸಿಸಿ ಎಂಜಿನ್,

10 ಅಶ್ವಶಕ್ತಿ, 11 ಎನ್ ಎಂ ತಿರುಗುಬಲ,

ಮೈಲೇಜ್ 66 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 63,000 ರು.

06. ಹೀರೊ ಗ್ಲಾಮರ್

06. ಹೀರೊ ಗ್ಲಾಮರ್

ಆರನೇ ಸ್ಥಾನದಲ್ಲಿರುವ ಹೀರೊ ಗ್ಲಾಮರ್ 2016 ಫೆಬ್ರವರಿ ತಿಂಗಳಲ್ಲಿ ಒಟ್ಟು 60,883 ಯುನಿಟ್ ಗಳ ಮಾರಾಟ ನಡೆಸಿದೆ.

ಮುಖ್ಯಾಂಶಗಳು

125 ಸಿಸಿ ಎಂಜಿನ್,

8 ಅಶ್ವಶಕ್ತಿ, 10 ಎನ್ ಎಂ ತಿರುಗುಬಲ,

ಮೈಲೇಜ್ 55 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 63,500 ರು.

05. ಟಿವಿಎಸ್ ಎಕ್ಸ್ ಎಲ್ ಸೂಪರ್

05. ಟಿವಿಎಸ್ ಎಕ್ಸ್ ಎಲ್ ಸೂಪರ್

ಐದನೇ ಸ್ಥಾನದಲ್ಲಿರುವ ಟಿವಿಎಸ್ ಎಕ್ಸ್ ಎಲ್ ಟು ಮತ್ತು ಫೋರ್ ಸ್ಟ್ರೋಕ್ ಎಂಜಿನ್ ಆಯ್ಕೆಯಲ್ಲಿರುವ ಏಕ ಮಾತ್ರ ಗಾಡಿಯಾಗಿದೆ. ಸಣ್ಣ ವ್ಯಾಪಾರಿಗಳಲ್ಲಿ ಹೆಚ್ಚಿನ ಜನಪ್ರಿಯತೆ ಕಾಯ್ದುಕೊಂಡಿರುವ ಟಿವಿಎಸ್ ಎಕ್ಸ್ ಎಲ್ ಸೂಪರ್ ಒಟ್ಟು 66,432 ಯುನಿಟ್ ಗಳ ಮಾರಾಟವನ್ನು ಕಂಡಿದೆ.

ಮುಖ್ಯಾಂಶಗಳು

70 ಸಿಸಿ ಎಂಜಿನ್,

3.5 ಅಶ್ವಶಕ್ತಿ, 5 ಎನ್ ಎಂ ತಿರುಗುಬಲ,

ಮೈಲೇಜ್ 66 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 35,000 ರು.

04. ಹೀರೊ ಪ್ಯಾಶನ್

04. ಹೀರೊ ಪ್ಯಾಶನ್

ಪ್ಯಾಶನ್ ಪ್ರೊ ಬಲದಿಂದ ಹೀರೊ ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟವನ್ನು ಕಾಯ್ದುಕೊಂಡಿದೆ. 2016 ಫೆಬ್ರವರಿ ಸಾಲಿನಲ್ಲಿ ಹೀರೊ ಪ್ಯಾಶನ್ ಒಟ್ಟು 81,656 ಯುನಿಟ್ ಗಳಷ್ಟು ಮಾರಾಟವನ್ನು ಕಂಡಿದೆ.

ಮುಖ್ಯಾಂಶಗಳು

97 ಸಿಸಿ ಎಂಜಿನ್,

7 ಅಶ್ವಶಕ್ತಿ, 8 ಎನ್ ಎಂ ತಿರುಗುಬಲ,

ಮೈಲೇಜ್ 84 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 58,000 ರು.

03. ಹೀರೊ ಎಚ್‌ಎಫ್ ಡಿಲಕ್ಸ್

03. ಹೀರೊ ಎಚ್‌ಎಫ್ ಡಿಲಕ್ಸ್

ಹೇಗೆ ಪ್ರಯಾಣಿಕ ಕಾರು ವಿಭಾಗದಲ್ಲಿ ಮಾರುತಿ ತನ್ನ ಸಾನಿಧ್ಯವನ್ನು ವ್ಯಕ್ತಪಡಿಸುತ್ತಿದೆಯೋ ಅದೇ ರೀತಿ ಹೀರೊ ಮೊಟೊಕಾರ್ಕ್ ಪ್ರಯಾಣಿಕ ದ್ವಿಚಕ್ರ ವಿಭಾಗದಲ್ಲಿ ತನ್ನ ಪರಾಕ್ರಮ ಮೆರೆದಿದೆ. ಅಂದ ಹಾಗೆ ಹೀರೊ ಎಚ್ ಎಫ್ ಡಿಲಕ್ಸ್ 2016 ಫೆಬ್ರವರಿ ತಿಂಗಳಲ್ಲಿ ಒಟ್ಟು 1,06,572 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಮುಖ್ಯಾಂಶಗಳು

97 ಸಿಸಿ ಎಂಜಿನ್,

7.7 ಅಶ್ವಶಕ್ತಿ, 8 ಎನ್ ಎಂ ತಿರುಗುಬಲ,

ಮೈಲೇಜ್ 83 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 50,000 ರು.

02. ಹೀರೊ ಸ್ಪ್ಲೆಂಡರ್

02. ಹೀರೊ ಸ್ಪ್ಲೆಂಡರ್

ದೇಶದ ಸರ್ವಕಾಲಿಕ ಶ್ರೇಷ್ಠ ಬೈಕ್ ಗಳಲ್ಲಿ ಹೀರೊ ಸ್ಪ್ಲೆಂಡರ್ ಗುರುತಿಸಿಕೊಂಡಿದೆ. ಮೈಲೇಜ್ ವಿಚಾರದಲ್ಲಿ ಮೋಡಿ ಮಾಡಿರುವ ಸ್ಪ್ಲೆಂಡರ್ ಈಗಲೂ ವಾಹನ ಪ್ರೇಮಿಗಳ ನಂ.1 ಬೈಕ್ ಎನಿಸಿಕೊಂಡಿದೆ. ಪ್ರಸ್ತುತ ಬೈಕ್ 2016 ಫೆಬ್ರವರಿ ತಿಂಗಳಲ್ಲಿ ಒಟ್ಟು 1,89,314 ಯುನಿಟ್ ಗಳ ಮಾರಾಟವನ್ನು ದಾಖಲಿಸಿದೆ.

ಮುಖ್ಯಾಂಶಗಳು

97 ಸಿಸಿ ಎಂಜಿನ್,

7.4 ಅಶ್ವಶಕ್ತಿ, 8 ಎನ್ ಎಂ ತಿರುಗುಬಲ,

ಮೈಲೇಜ್ 81 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 53,000 ರು.

ಸ್ಪ್ಲೆಂಡರ್‌ಗೆ ಬಿಸಿ ಮುಟ್ಟಿಸಿದ ಆಕ್ಟಿವಾ ಮಗದೊಮ್ಮೆ ನಂ.1

01. ಹೋಂಡಾ ಆಕ್ಟಿವಾ

ಭಾರತ ಮಾರುಕಟ್ಟೆಯಲ್ಲಿ ಬೈಕ್ ಅಧಿಪತ್ಯವನ್ನೇ ಹಿಂದಿಕ್ಕಿರುವ ದೇಶದ ನಂ.1 ಸ್ಕೂಟರ್ ಹೋಂಡಾ ಆಕ್ಟಿವಾ ಮಗದೊಮ್ಮೆ ಅತ್ಯುತ್ತಮ ದ್ವಿಚಕ್ರ ವಾಹನವೆಂಬ ಪಟ್ಟ ಕಟ್ಟಿಕೊಂಡಿದೆ. 2016 ಫೆಬ್ರವರಿ ಸಾಲಿನಲ್ಲಿ ಹೋಂಡಾ ಆಕ್ಟಿವಾ ಒಟ್ಟು 2,10,028 ಯುನಿಟ್ ಗಳ ಮಾರಾಟವನ್ನು ದಾಖಲಿಸಿದ್ದು, ನಿಜಕ್ಕೂ ಅವಿಶ್ವಸನೀಯವೆನಿಸಿದೆ.

ಮುಖ್ಯಾಂಶಗಳು

109 ಸಿಸಿ ಎಂಜಿನ್,

8 ಅಶ್ವಶಕ್ತಿ, 8.7 ಎನ್ ಎಂ ತಿರುಗುಬಲ,

ಮೈಲೇಜ್ 66 ಕೀ.ಮೀ.

ಅಂದಾಜು ಆನ್ ರೋಡ್ ಬೆಲೆ ದೆಹಲಿ: 53,000 ರು.

Most Read Articles

Kannada
English summary
Top 10 Selling Two-Wheelers In February 2016
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X