ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

Written By:

ಭಾರತದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಸಂಸ್ಥೆಯು, ಪ್ರಸಕ್ತ ಸಾಲಿನಲ್ಲೇ ಬಹುನಿರೀಕ್ಷಿತ ಆಫ್ರಿಕಾ ಟ್ವಿನ್ ಬೈಕ್ ಬಿಡುಗಡೆ ಮಾಡುವ ಯೋಜನೆ ಹೊಂದಿತ್ತು. ಆದರೆ ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಹೋಂಡಾ ಆಫ್ರಿಕಾ ಟ್ವಿನ್ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಇತ್ತೀಚೆಗಷ್ಟೇ ಜಪಾನ್ ನಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ಹೋಂಡಾ ಆಫ್ರಿಕಾ ಟ್ವಿನ್ ನಿರ್ಮಾಣಕ್ಕೆ ವಿಳಂಬವಾಗುತ್ತಿದೆ. ಇದರಿಂದಾಗಿ ಬಿಡುಗಡೆಯನ್ನು ಮುಂದೂಡಲಾಗಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಹೋಂಢಾ ಆಫ್ರಿಕಾ ಟ್ವಿನ್ ಬೈಕನ್ನು ಮೊದಲ ಬಾರಿಗೆ ಅನಾವರಣಗೊಳಿಸಿತ್ತು. ಇದು ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಮುಖಾಂತರ ದೇಶವನ್ನು ತಲುಪಲಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಬಳಿಕ ಸಂಸ್ಥೆಯ ಮಾನೇಸರ್ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆಯಾಗಲಿದೆ. ತನ್ಮೂಲಕ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಲು ನೆರವಾಗಲಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಸ್ಟೀಲ್ ಸೆಮಿ ಡಬಲ್ ಕ್ರಾಡಲ್ ವಿಧದ ಜೊತೆಗೆ ಸ್ಟೀಲ್ ರಿಯರ್ ಸಬ್ ಫ್ರೇಮ್ ನಿಂದ ನಿರ್ಮಿತ ಹೋಂಡಾ ಆಪ್ರಿಕಾ ಟ್ವಿನ್, ಸಿಆರ್ ಎಫ್ ರಾಲಿ ಬೈಕ್ ನಿಂದ ವಿನ್ಯಾಸ ಪ್ರೇರಣೆಯನ್ನು ಪಡೆದಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಇದರಲ್ಲಿರುವ ಅತ್ಯಂತ ಶಕ್ತಿಶಾಲಿ 998 ಸಿಸಿ ಫೋರ್ ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ 98 ಎನ್ ಎಂ ತಿರುಗುಬಲದಲ್ಲಿ 94 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಅಮೆರಿಕ ಮಾದರಿಯಂತೆ ಭಾರತೀಯ ಮಾಡೆಲ್ ಸಹ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆಯಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 10ರಿಂದ 15 ಕೀ.ಮೀ. ಇಂಧನ ಕ್ಷಮತೆ ನೀಡುವ ಸಾಧ್ಯತೆಯಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಅಂತೆಯೇ ಮೂರು ಬಣ್ಣದ ಆಯ್ಕೆಗಳು ಲಭ್ಯವಾಗಲಿದೆ. ಅವುಗಳೆಂದರೆ ಡಕಾರ್ ರಾಲಿ (ಕೆಂಪು ಮತ್ತು ನೀಲಿ), ಡಿಜಿಟಲ್ ಮೆಟ್ಯಾಲಿಕ್ ಸಿಲ್ವರ್ (ಬೂದು ಮತ್ತು ಕಪ್ಪು) ಮತ್ತು ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಮೆಟ್ಯಾಲಿಕ್ ಗಳಾಗಿವೆ

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಭಾರತದಲ್ಲಿ ಬಿಡುಗಡೆಯಾಗಲಿರುವ ಆಫ್ರಿಕಾ ಟ್ವಿನ್ 14 ಲಕ್ಷ ರು.ಗಳಿಂದ 16 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ಸದ್ಯಕ್ಕೆ ಹೋಂಡಾ ಆಫ್ರಿಕಾ ಟ್ವಿನ್ ಬೈಕ್ ಅಬ್ಬರವಿಲ್ಲ!

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ, ಹೋಂಡಾ ಆಫ್ರಿಕಾ ಟ್ವಿನ್ 2017ನೇ ಸಾಲಿನ ದ್ವಿತಿಯಾರ್ಧ ಅಥವಾ ಅದಕ್ಕಿಂತಲೂ ತಡವಾಗಿ ಭಾರತ ಮಾರುಕಟ್ಟೆಯನ್ನು ತಲುಪಲಿದೆ. ಇದು ದೇಶದಲ್ಲಿ ಟ್ರಯಂಪ್ ಟೈಗರ್ ಮತ್ತು ಡುಕಾಟಿ ಮಲ್ಟಿಸ್ಟ್ರಾಡಾ ಆವೃತ್ತಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

English summary
Honda Africa Twin India Launch Delayed To 2017
Story first published: Thursday, October 20, 2016, 20:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark