2016 ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಬಿಡುಗಡೆ

By Nagaraja

ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆ ಸುಜುಕಿ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಸಂಸ್ಧೆಯು ದೇಶದ ಮಾರುಕಟ್ಟೆಗೆ ಅತಿ ನೂತನ 2016 ಆಕ್ಸೆಸ್ 125 ಸ್ಕೂಟರನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 53,887 ರು. (ಎಕ್ಸ್ ಶೋ ರೂಂ ದೆಹಲಿ)

ಪ್ರಸ್ತುತ ತಾಜಾತನ ಗಿಟ್ಟಿಸಿಕೊಂಡಿರುವ ಸುಜುಕಿ ಆಕ್ಸೆಸ್ 125, ಹೋಂಡಾ ಆಕ್ಟಿವಾ 125 ಗಳಂತಹ ಜನಪ್ರಿಯ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡುವ ಇರಾದೆಯಲ್ಲಿದೆ.

2016 ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಬಿಡುಗಡೆ

ರೆಟ್ರೊ ಮತ್ತು ವಕ್ರವಾಗಿರುವ ವಿನ್ಯಾಸವನ್ನು ನೂತನ 2016 ಸುಜುಕಿ ಆಕ್ಸೆಸ್ 125 ಸ್ಕೂಟರ್ ನಲ್ಲಿ ಅನುಸರಿಸಲಾಗಿದೆ. ನೂತನ ಕ್ರೋಮ್ ಸ್ಪರ್ಶಿತ ಹೆಡ್ ಲ್ಯಾಂಪ್ ಜೊತೆ ತ್ರಿಡಿ ಲೊಗೊ ಪ್ರಮುಖ ಆಕರ್ಷಣೆಯಾಗಲಿದೆ. ಬದಿಯಲ್ಲೂ ಪರಿಷ್ಕೃತ ನೋಟ ಪ್ರದಾನ ಮಾಡಲಾಗಿದೆ.

2016 ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಬಿಡುಗಡೆ

ಇನ್ನುಳಿದಂತೆ ಎಲ್ ಇಡಿ ಟೈಲ್ ಲ್ಯಾಂಪ್, ಕ್ಲಿಯರ್ ಲೆನ್ಸ್ ಇಂಡಿಕೇಟರ್ ಗಳು ರಾತ್ರಿಯ ವೇಳೆಯಲ್ಲೂ ಪಯಣವನ್ನು ಸುರಕ್ಷಿತವಾಗಿಸಲಿದೆ. ಹೊಸತಾದ ಇನ್ಸ್ಟ್ರುಮೆಂಟ್ ಪ್ಯಾನೆಲ್, ಡಿಜಿಟಲ್ ಪರದೆ, ಮುಂಭಾಗದಲ್ಲಿ 12 ಇಂಚುಗಳ ಚಕ್ರಗಳು ಇತರ ಪ್ರಮುಖ ವೈಶಿಷ್ಟ್ಯಗಳಾಗಿರಲಿದೆ.

ಆಯಾಮ (ಎಂಎಂ)

ಆಯಾಮ (ಎಂಎಂ)

ಉದ್ದ: 1870

ಅಗಲ: 655

ಎತ್ತರ: 1160

ಚಕ್ರಾಂತರ: 1265

ಗ್ರೌಂಡ್ ಕ್ಲಿಯರನ್ಸ್: 160

ಭಾರ: 102 ಕೆ.ಜಿ

ಸಸ್ಪೆನ್ಷನ್, ಬ್ರೇಕ್

ಸಸ್ಪೆನ್ಷನ್, ಬ್ರೇಕ್

ನೂತನ ಆಕ್ಸೆಸ್ 125, ಫ್ರಂಟ್ ಟೆಲಿಸ್ಕಾಪಿಕ್ ಸಸ್ಷೆನ್ಷನ್ ಸೆಟಪ್ ಮತ್ತು ಹಿಂದುಗಡೆ ಟ್ವಿನ್ ಶಾಕ್ಸ್ ಪಡೆದಿದೆ. ಹಾಗೆಯೇ ಮುಂದೆ ಹಾಗೂ ಹಿಂದುಗಡೆ ಡ್ರಮ್ ಬ್ರೇಕ್ ಗಳ ಸೌಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಐಚ್ಛಿಕ ಡಿಸ್ಕ್ ಬ್ರೇಕ್ ಸೌಲಭ್ಯವೂ ಇರುತ್ತದೆ.

ಸ್ಟೋರೆಜ್ ಜಾಗ

ಸ್ಟೋರೆಜ್ ಜಾಗ

ಈ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 21 ಲೀಟರ್ ಗಳ ಸ್ಟೋರೆಜ್ ಜಾಗವನ್ನು ನೀಡಲಾಗುತ್ತಿದೆ. ಇದಲ್ಲದೆ ಉದ್ದವಾದ ಸೀಟು, ದೊಡ್ಡದಾದ ಫ್ಲೋರ್ ಬೋರ್ಡ್ ಮತ್ತು ಫ್ರಂಟ್ ಪಾಕೆಟ್ ವ್ಯವಸ್ಥೆಯೂ ಇರುತ್ತದೆ.

2016 ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಬಿಡುಗಡೆ

ನೂತನ ಆಕ್ಸೆಸ್ 125, ಡಿಸಿ ಸಾಕೆಟ್ ಜೊತೆಗೆ ಸುಜುಕಿ ಈಸಿ ಸ್ಟ್ಯಾರ್ಟ್ ವ್ಯವಸ್ಥೆಯನ್ನು ಪಡೆದಿರುತ್ತದೆ. ಅಲ್ಲದೆ ಡಿಜಿಟಲ್ ಪರದೆ, ಟ್ರಿಪ್ ಮೀರ್ ಮತ್ತು ಸರ್ವಿಸ್ ರಿಮೈಂಡರ್ ಒಳಗೊಂಡಿರುವ ಇನ್ಸ್ಟ್ರುಮೆಂಟ್ ಪ್ಯಾನೆಲ್ ಸಿಗಲಿದೆ.

2016 ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಬಿಡುಗಡೆ

ಅಂದ ಹಾಗೆ ನೂತನ ಸುಜುಕಿ ಆಕ್ಸೆಸ್, 125ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 10.2 ಎನ್ ಎಂ ತಿರುಗುಬಲದಲ್ಲಿ (500 ಆರ್‌ಪಿಎಂ) 8 ಅಶ್ವಶಕ್ತಿಯನ್ನು (7000 ಆರ್‌ಪಿಎಂ) ಉತ್ಪಾದಿಸಲಿದೆ.

2016 ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಬಿಡುಗಡೆ

ಸುಜುಕಿ ಇಕೊ ಫರ್ಫಮೆನ್ಸ್ (ಎಸ್‌ಇಪಿ) ತಂತ್ರಗಾರಿಕೆಯೊಂದಿಗೂ ಲಭ್ಯವಾಗಲಿರುವ ನೂತನ ಆಕ್ಸೆಸ್ 125, ಪ್ರತಿ ಲೀಟರ್ ಗೆ 64 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಬಣ್ಣಗಳು

ಬಣ್ಣಗಳು

ಪಿಯರ್ಲ್ ಸುಜುಕಿ ಡೀಪ್ ಬ್ಲೂ ನಂ.2, ಕ್ಯಾಂಡಿ ಸೊನೊಮಾ ರೆಡ್, ಮೆಟ್ಯಾಲಿಕ್ ಮ್ಯಾಟ್ ಫೈಬ್ರೋನ್ ಗ್ರೇ, ಪಿಯರ್ಲ್ ಮಿರಾಜ್ ವೈಟ್ ಮತ್ತು ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್.

2016 ಸುಜುಕಿ ಆಕ್ಸೆಸ್ 125 ಭಾರತದಲ್ಲಿ ಬಿಡುಗಡೆ

ಅಂತಿಮವಾಗಿ ಹೋಂಡಾ ಆಕ್ಟಿವಾ 125 ಮತ್ತು ವೆಸ್ಪಾ ಗಳಂತಹ ಜನಪ್ರಿಯ ಮಾದರಿಗಳಿಗೆ ಪ್ರತಿಸ್ಪರ್ಧೆಯೊಡ್ಡಲಿರುವ 2016 ಸುಜುಕಿ ಆಕ್ಸೆಸ್ 125 ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಂಡಿದ್ದು, ಕೆಲವೇ ತಿಂಗಳಲ್ಲೇ ಡಿಸ್ಕ್ ಬ್ರೇಕ್ ಆವೃತ್ತಿಯೂ ಆಗಮನವಾಗಲಿದೆ.


Most Read Articles

Kannada
Read more on ಸುಜುಕಿ suzuki
English summary
2016 Suzuki Access 125 Launched In India, Prices Start At Rs. 53,887
Story first published: Tuesday, March 15, 2016, 17:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X