ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

Written By:

ಪಿಯಾಜಿಯೊ ಸಂಸ್ಥೆಯ ಅಧೀನತೆಯಲ್ಲಿರುವ ಇಟಲಿಯ ಐಕಾನಿಕ್ ಸ್ಕೂಟರ್ ಸಂಸ್ಥೆ ವೆಸ್ಪಾ, ಭಾರತದಲ್ಲಿ ತನ್ನ ಶ್ರೇಣಿಯ ಸ್ಕೂಟರ್ ಗಳನ್ನು ಮತ್ತಷ್ಟು ವಿಸ್ತರಿಸಿಕೊಂಡಿದೆ. ಹೌದು, ಭಾರತಕ್ಕೆ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಮತ್ತು ವೆಸ್ಪಾ 70ನೇ ವಾರ್ಷಿಕ ವಿಶೇಷ ಆವೃತ್ತಿಯ ಸ್ಕೂಟರ್ ಗಳು ಭರ್ಜರಿ ಪ್ರವೇಶ ಪಡೆದಿದೆ.

To Follow DriveSpark On Facebook, Click The Like Button
ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ಸೊಬಗು, ಶೈಲಿ ಮತ್ತು ಬದಲಾವಣೆಯ ಜೊತೆಗೆ ಇಟಲಿಯ ಕಲೆಗಾರಿಕೆಗೆ ಈ ಎರಡು ಸ್ಕೂಟರ್ ಗಳು ಮಾದರಿಯಾಗಿರಲಿದೆ. ಈ ಪೈಕಿ ವೆಸ್ಪಾ 946 ಎಂಪೋರಿಯೊ ಅರ್ಮಾನಿ ದೇಶದ ಅತಿ ದುಬಾರಿ ಸ್ಕೂಟರ್ ಎನಿಸಿಕೊಳ್ಳಲಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ವೆಸ್ಪಾ 946 ಎಂಪೋರಿಯೊ ಅರ್ಮಾನಿ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ಭಾರತವನ್ನು ತಲುಪಲಿದ್ದು, ಪಿಯಾಜಿಯೊ ಸಂಸ್ಥೆಯ ಮೊಟೊಪ್ಲೆಕ್ಸ್ ಮುಖಾಂತರ ಮಾರಾಟವಾಗಲಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ಇನ್ನೊಂದೆಡೆ ವೆಸ್ಪಾ 70ನೇ ವಾರ್ಷಿಕ ವಿಶೇಷ ಆವೃತ್ತಿಯು ಭಾರತದಲ್ಲೇ ಸ್ಥಳೀಯವಾಗಿ ನಿರ್ಮಾಣವಾಗಲಿದ್ದು, ದೇಶದೆಲ್ಲೆಡೆ ಸ್ಥಿತಗೊಂಡಿರುವ ವೆಸ್ಪಾ ಡೀಲರುಗಳ ಬಳಿ ಲಭ್ಯವಾಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ವೆಸ್ಪಾ 946 ಎಂಪೋರಿಯೊ ಅರ್ಮಾನಿ: 12,04,970 ರು.

ವೆಸ್ಪಾ 70ನೇ ವಾರ್ಷಿಕ ಎಡಿಷನ್: 96,500 ರು.

ವೆಸ್ಪಾ 946 ಎಂಪೋರಿಯೊ ಅರ್ಮಾನಿ

ವೆಸ್ಪಾ 946 ಎಂಪೋರಿಯೊ ಅರ್ಮಾನಿ

ಇಟಲಿಯಲ್ಲಿ ನೆಲೆಯೂರಿರುವ ಶೈಲಿ ಮತ್ತು ಹೊಸ ಸೃಜನಶೀಲತೆಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಜಾರ್ಜಿಯೊ ಅರ್ಮಾಣಿ ಮತ್ತು ಪಿಯಾಜಿಯೊ ಜೊತೆಗೂಡಿ ವೆಸ್ಪಾ 946 ಎಂಪೋರಿಯೊ ಅರ್ಮಾನಿ ನಿರ್ಮಿಸಲಾಗಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

2015ನೇ ಸಾಲಿಗೆ ಜಾರ್ಜಿಯೊ ಅರ್ಮಾನಿ ಸ್ಥಾಪಿತವಾಗಿ 40ನೇ ವಾರ್ಷಿಕೋತ್ಸವ ಮತ್ತು ಪಿಯಾಜಿಯೊ ಸಂಸ್ಥೆಯ 130ನೇ ಜನ್ಮದಿನವ ಅಂಗವಾಗಿ ವಿಶೇಷ ವೆಸ್ಪಾ 946 ಸ್ಕೂಟರ್ ಗೆ ರೂಪುರೇಷೆಯನ್ನು ಕಲ್ಪಿಸಿಕೊಡಲಾಗಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ಇಲ್ಲಿ 946 ಎಂಬುದು 1946ನೇ ಇಸವಿಯ ಸೂಚಕವಾಗಿರಲಿದೆ. ಹಾಗೆಯೇ ವಿಶೇಷ ಬಣ್ಣ ಹಾಗೂ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ಹೆಡ್ ಲೈಟ್ ಮೇಲ್ಗಡೆಯಾಗಿ ಐಕಾನಿಕ್ ಹದ್ದು ಲಾಂಛನ, ಬದಿಯಲ್ಲಿ ಎಂಪೋರಿಯೊ ಅರ್ಮಾನಿ ಲಿಖಿತ ರೂಪದಲ್ಲಿ ಬರೆಯಲಾಗಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ತಂತ್ರಜ್ಞಾನದಲ್ಲೂ ವೆಸ್ಪಾ 946 ಎಂಪೋರಿಯೊ ಅರ್ಮಾನಿ ಉತ್ತುಂಗಕ್ಕೇರಿದ್ದು, ಅಲ್ಯೂಮಿನಿಯಂ ಸಿಲಿಂಡರ್ ಬ್ಲಾಕ್ಸ್, ಬ್ರೌನ್ ಲೆಥರ್ ಫಿನಿಶಿಂಗ್, ಐಷಾರಾಮಿ ಆಕ್ಸೆಸರಿ, ಎಲೆಕ್ಟ್ರಾನಿಕ್ ರೈಡಿಂಗ್ ಕಂಟ್ರೋಲ್, ತಾಜಾ ಇಂಟರ್ ನೆಟ್ ಡಿವೈಸ್ ಗಳಿರಲಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ಇವೆಲ್ಲದರ ಜೊತೆಗೆ ನಾವೀನ್ಯ ಫೋರ್ ಸ್ಟ್ರೋಕ್ ಇಂಜೆಕ್ಷನ್ ಎಂಜಿನ್ ಜೊತೆ ಗರಿಷ್ಠ ಇಂಧನ ಕ್ಷಮತೆ ಮತ್ತು ಕಡಿಮೆ ಮಾಲಿನ್ಯವನ್ನು ಹೊರ ಹಾಕಲಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

220 ಎಂಎಂ ಡಬಲ್ ಡಿಸ್ಕ್ ಬ್ರೇಕ್, ಟು ಚಾನೆಲ್ ಎಬಿಎಸ್ ಬ್ರೇಕಿಂಗ್ ಸಿಸ್ಟಂ ಮತ್ತು 12 ಇಂಚುಗಳ ಚಕ್ರಗಳು ರಸ್ತೆಗಳಲ್ಲಿ ಚಕ್ರಗಳು ಮುಂದಕ್ಕೆ ಉರುಳುವಾಗ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ.

ವೆಸ್ಪಾ 70ನೇ ವಾರ್ಷಿಕ ಎಡಿಷನ್

ವೆಸ್ಪಾ 70ನೇ ವಾರ್ಷಿಕ ಎಡಿಷನ್

ವೆಸ್ಪಾ ವಿಎಕ್ಸ್ ಎಲ್ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ ವೆಸ್ಪಾ 70ನೇ ವಾರ್ಷಿಕೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಭಾರತಕ್ಕೆ ಕಾಲಿಟ್ಟ ವೆಸ್ಪಾ ಅತಿ ದುಬಾರಿ ಸ್ಕೂಟರ್ ಗಳು!

ನೂತನ ವೆಸ್ಪಾ 70ನೇ ವಾರ್ಷಿಕ ಆವೃತ್ತಿಯು ಅತಿ ವಿಶಿಷ್ಟ ಅಝುರೊ 70 ದೇಹ ಬಣ್ಣವನ್ನು ಪಡೆಯಲಿದೆ. ಹೊಸತಾದ ಬ್ರೌನ್ ಲೆಥರ್ ಸೀಟು, 70ನೇ ವಾರ್ಷಿಕ ಲಾಂಛನ, ಫ್ಲೈ ಸ್ಕ್ರೀನ್, ಕ್ರೋಮ್ ಪೆರಿಮೀಟರ್ ಗಾರ್ಡ್ ಜೊತೆ ಸಹ ಸವಾರನಿಗೆ ಫೂಟ್ ರೆಸ್ಟ್, ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

Read more on ವೆಸ್ಪಾ vespa
English summary
Vespa 946 Emporio Armani and Vespa's 70th Anniversary Special Edition launched in India
Story first published: Tuesday, November 15, 2016, 15:47 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark