ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

Written By:

ಭಾರತಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವ ಟಾರ್ಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್, 24 ತಾಸಿನಲ್ಲೇ 1000ಗಿಂತಲೂ ಹೆಚ್ಚು ಮುಂಗಡ ಬುಕ್ಕಿಂಗ್ಸ್ ಗಳನ್ನು ಗಿಟ್ಟಿಸಿಕೊಳ್ಳುವ ದಾಖಲೆ ಬರೆದಿದೆ.

ಇವನ್ನೂ ಓದಿ: ಆಶ್ಚರ್ಯಕರ ಬೆಲೆಯಲ್ಲಿ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಬೆಂಗಳೂರು ಸೇರಿದಂತೆ ದೇಶದ ಮೂರು ಪ್ರಮುಖ ನಗರಗಳಲ್ಲಿ ಬಿಡುಗಡೆಗೊಂಡಿರುವ ದೇಶದ ಚೊಚ್ಚಲ ಎಲೆಕ್ಟ್ರಿಕ್ ಬೈಕ್ ಟಿ6ಎಕ್ಸ್, ಪರಿಸರ ಸ್ನೇಹಿ ಭವಿಷ್ಯದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

To Follow DriveSpark On Facebook, Click The Like Button
ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಭಾರತದ್ದೇ ತಳಹದಿಯ ಟಾರ್ಕ್ ಟಿ6ಎಕ್ಸ್ ವಿದ್ಯುತ್ ಚಾಲಿತ ನಿರ್ವಹಣಾ ಬೈಕ್ ಪರಿಚಾಯತ್ಮಕ 1.25 ಲಕ್ಷ ರುಪಾಯಿಗಳಿಗೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿತ್ತು.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಮೊದಲನೇ ಹಂತವಾಗಿ ಬೆಂಗಳೂರು ಹೊರತಾಗಿ ರಾಷ್ಟ್ರ ರಾಜಧಾನಿ ನವದೆಹಲಿ ನಗರದಲ್ಲಿ ಟಾರ್ಕ್ ಟಿ6ಎಕ್ಸ್ ಎಲೆಕ್ಟ್ರಿಕ್ ನಿರ್ವಹಣಾ ಬೈಕ್ ಬಿಡುಗಡೆಗೊಂಡಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಟಾರ್ಕ್ ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕ್, ಬ್ರಶ್ ಲೆಸ್ ಡಿಸಿ 6 ಕೆಡ್ಬ್ಲ್ಯು ಲಿಥಿಯಂ ಇಯಾನ್ ಬ್ಯಾಟರಿಂದ ನಿಯಂತ್ರಿಸಲ್ಪಡುತ್ತಿದ್ದು, 27 ಎನ್ ಎಂ ತಿರುಗುಬಲವನ್ನು ನೀಡುತ್ತದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಟಾರ್ಕ್ ಟಿ6ಎಕ್ಸ್ ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ನಿರ್ವಹಣಾ ಮೋಟಾರ್ ಸೈಕಲ್ ಆಗಿದ್ದು, ಏಳು ವರ್ಷಗಳ ಸಮಗ್ರ ಅಧ್ಯಯನ ಮತ್ತು ಅಭಿವೃದ್ಧಿಯ ಬಳಿಕ ಬಿಡಗಡೆಗೊಳಿಸಲಾಗಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಆಧುನಿಕ ನಗರ ಪ್ರಯಾಣಿಕ ವ್ಯವಸ್ಥೆಗೆ ಹೊಸ ಜೀವ ತುಂಬಿರುವ ಟಿ6ಎಖ್ಸ್, ಕಟ್ಟಿಂಗ್ ಎಡ್ಜ್ ತಂತ್ರಗಾರಿಕೆಯೊಂದಿಗೆ ಪಾರುಪತ್ಯ ಸಾಧಿಸಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಇವೆಲ್ಲದಕ್ಕೂ ಹೊರತಾಗಿ ಟೈಯೊಸ್ ಅಥವಾ ಟಾರ್ಕ್ ಟಾರ್ಕ್ ಇಟ್ಯೂಟಿವ್ ಸಿಗ್ನೇಚರ್ ಓಪರೇಟಿಂಗ್ ಸಿಸ್ಟಂ (TRIOS) ಟಿ6ಎಕ್ಸ್ ಎಲೆಕ್ಟ್ರಿಕ್ ಬೈಕನ್ನು ಮೇಲ್ದರ್ಜೆಯಲ್ಲಿ ಗುರುತಿಸುವಂತೆ ಮಾಡಿದೆ. ಇದು ಸವಾರಿಯ ಎಲ್ಲ ವಿವರಗಳ ಹೊರತಾಗಿ ಪವರ್ ಮ್ಯಾನೇಜ್ ಮೆಟ್, ರಿಯಲ್ ಟೈಮ್ ಪವರ್ ಬಳಕೆ, ವ್ಯಾಪ್ತಿ ಹಾಗೂ ಹೇಗೆ ಚಾಲನೆ ಮಾಡಿದರೆ ಸೂಕ್ತ ಎಂಬುದರ ಬಗ್ಗೆ ಮಾಹಿತಿಯನ್ನು ಒದಗಿಸಲಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಕಸ್ಟಮೈಸ್ಡ್ ಚಾಲನೆ ಆಯ್ಕೆ ಇರುವುದರಿಂದ ಶಕ್ತಿ ವಿತರಣೆಯನ್ನು ಹೊಂದಾಣಿಸಬಹುದಾಗಿದೆ. ಕೇವಲ ಒಂದೇ ಬಟನ್ ಟಚ್ ನಲ್ಲಿ ಸ್ಪೋರ್ಟ್ ನಿಂದ ಇಕೊ ಕ್ರೂಸರ್ ಮೋಡ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ಕ್ಲೌಡ್ ಆಟೋಮ್ಯಾಟಿಕ್ ತಂತ್ರಜ್ಞಾನವನ್ನು ಟಿ6ಎಕ್ಸ್ ಪಡೆದುಕೊಂಡಿದ್ದು, ರಸ್ತೆಯ ಸ್ಮಾರ್ಟ್ ಮೋಟಾರ್ ಸೈಕಲ್ ಆಗಿ ಪರಿವರ್ತಿಸಲಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಶೇಕಡಾ 80ರಷ್ಟು ಚಾರ್ಜ್ ಮಾಡಿಸಿದ್ದಲ್ಲಿ ಟಾರ್ಕ್ ಬೈಕ್ ನಲ್ಲಿ 100 ಕೀ.ಮೀ. ವ್ಯಾಪ್ತಿಯನ್ನು ಸರಾಗವಾಗಿ ಸಾಗಬಹುದಾಗಿದೆ. ಇನ್ನು ಗಂಟೆಗೆ ಗರಿಷ್ಠ 100 ಕೀ.ಮೀ. ವೇಗವರ್ಧಿಸಿಕೊಳ್ಳಬಹುದಾಗಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಇದರಲ್ಲಿ ಜೋಡಣೆ ಮಾಡಲಾಗಿರುವ ಲಿಥಿಯಂ ಇಯಾನ್ ಬ್ಯಾಟರಿಯು ಶೇಕಡಾ 80ರಷ್ಟು ಚಾರ್ಜ್ ಆಗಲು 60 ನಿಮಿಷಗಳು ತಗುಲಲಿದೆ. ಅದೇ ಹೊತ್ತಿಗೆ ಸಂಪೂರ್ಣವಾಗಿ ಚಾರ್ಜ್ ಆಗಲು ಎರಡು ತಾಸುಗಳಷ್ಟು ಸಮಯ ಬೇಕಾಗುವುದು.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಬ್ರೇಕ್ ಬಗ್ಗೆ ಮಾತನಾಡುವುದಾದ್ದಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಸೌಲಭ್ಯಗಳಿರಲಿದೆ. ತನ್ಮೂಲಕ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಇನ್ನು ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫಾರ್ಕ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಲೋಡಡ್ ಹೈಡ್ರಾಲಿಕ್ ಮೊನೊ ಸಸ್ಪೆನ್ಷನ್ ಜೋಡಣೆ ಮಾಡಲಾಗಿದೆ.

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಬ್ಯಾಟರಿ ಬಾಳ್ವಿಕೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಬಳಕೆಗೆ ಅನುಗುಣವಾಗಿ 80,000 ಕೀ.ಮೀ. ಗಳಿಂದ 1,00,000 ಕೀ.ಮೀ. ವರೆಗೆ ಬಾಳ್ವಿಕೆ ಬರಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

4.3 ಇಂಚುಗಳ ಟಚ್ ಸ್ಕ್ರೀನ್ ಟಿಎಫ್ ಟಿ,

ಮೊಬೈಲ್ ಮಾನಿಟರ್ ಪೋರ್ಟ್,

ಜಿಪಿಎಸ್ ಮತ್ತು ನೇವಿಗೇಷನ್,

ಕ್ಲೌಡ್ ಕನೆಕ್ಟಿವಿಟಿ,

ಹೆಲ್ಮೆಟ್ ಸ್ಟೋರೆಜ್,

ಮೊಬೈಲ್ ಆಪ್ ಸಪೋರ್ಟ್,

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಆ್ಯಂಟಿ ಥೆಪ್ಟ್,

ಜಿಯೋ ಫೆನ್ಸಿಂಗ್ ಮತ್ತು

ಡೇಟೈಮ್ ರನ್ನಿಂಗ್ ಲೈಟ್ಸ್

ಉಪಯುಕ್ತ ಸ್ಟೋರೆಜ್,

ಕಸ್ಟಮ್ ರೈಡಿಂಗ್ ಪ್ರೊಫೈಲ್

ಟಾರ್ಕ್ ಎಲೆಕ್ಟ್ರಿಕ್ ಬೈಕ್ ಮ್ಯಾಜಿಕ್; 24 ತಾಸಿನಲ್ಲೇ 1000ಕ್ಕೊ ಹೆಚ್ಚು ಬುಕ್ಕಿಂಗ್ಸ್!

ಟಾರ್ಕ್ ಎಲೆಕ್ಟ್ರಿಕ್ ಬೈಕ್‌ನ ಎಕ್ಸ್‌ಕ್ಲೂಸಿವ್ ಚಿತ್ರಗಳು ಮತ್ತು ವಿವರಗಳು

English summary
Tork T6X Electric Motorcycle Witnesses Overwhelming Repose Post Unveil
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark