ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

By Nagaraja

ದುರ್ಗಾ ಪೂಜಾ ಪ್ರಯುಕ್ತ ಸಿಟಿ ಆಫ್ ಜಾಯ್ ಎಂದೇ ಪ್ರಖ್ಯಾತವಾಗಿರುವ ಕೋಲ್ಕತಾದ ಪ್ರತಿ ಬೀದಿ ಬೀದಿಯಲ್ಲೂ ಹಬ್ಬದ ಕಹಳೆ ಮೂಡಿರುವುದು ದುರ್ಗಾ ದೇವಿಯ ಮಹಿಮೆಯನ್ನು ಸಾರುತ್ತದೆ. ಪ್ರತಿಯೊಂದು ಬೀದಿಗಳಲ್ಲಿ ವಿವಿಧ ಅಲಂಕಾರದಿಂದ ಕೂಡಿದ ವರ್ಣಮಯ ಲೈಟಿಂಗ್ಸ್ ಕಣ್ಮನ ಸೆಳೆಯುತ್ತಿದ್ದವು.

#WegoKolkata ನಂತರ ಬೆಳಕಿನ ಹಬ್ಬ ದೀಪಾವಳಿಗೆ ಮಹಾರಾಷ್ಟ್ರದ ರಾಜಧಾನಿ ಸಾಂಸ್ಕೃತಿಕ ನಗರಿ ಪುಣೆಯತ್ತ ನಾವು ಕಣ್ಣು ಹಾಯಿಸಿದೆವು . ಕತ್ತಲು ಆವರಿಸಿದಂತೆ ನಗರದೆಲ್ಲೆಡೆ ವಿವಿಧ ವರ್ಣಗಳಿಂದ ಕಂಗೊಳಿಸುವ ದೀಪಾಲಂಕಾರ, ಪಟಾಕಿ ಶಬ್ದಗಳು, ವಿವಿಧ ಬಗೆ-ಬಗೆ ಸಿಹಿ ತಿಂಡಿಗಳು ನಮ್ಮನ್ನು ಕೈಬೀಸಿ ಸ್ವಾಗತಿಸುತ್ತಿದ್ದವು.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಮಕ್ಕಳು ಆಚರಿಸುತ್ತಿರುವ ಬೆಳಕಿನ ಹಬ್ಬ ದೀಪಾವಳಿಯನ್ನು ನೋಡುತ್ತಿದ್ದರೆ ನಮ್ಮ ಬಾಲ್ಯದಿನಗಳಲ್ಲಿ ಆಚರಿಸಿದ ದೀಪಾವಳಿ ಹಬ್ಬದ ಸಂಭ್ರಮ ಒಂದು ಕ್ಷಣ ಕಣ್ಣು ಮುಂದೆ ಹಾದು ಹೋದಂತಾದವು. ಆ ಬಾಲ್ಯದ ದಿನಗಳಲ್ಲಿ ದೀಪಾವಳಿ ದೊಡ್ಡ ಸಂಭ್ರಮದ ಹಬ್ಬಕ್ಕೆ ಸಾಲು-ಸಾಲು ರಜೆಗಳಲ್ಲಿ ಪಟಾಕಿಗಳದ್ದೆ ಸದ್ದುಗಳು.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಇನ್ನು 90ರ ದಶಕಕ್ಕೂ ಹಿಂದೆ ಹೋದರೆ, ದೀಪಾವಳಿ ಹಬ್ಬ ಅಂದ್ರೆ ನಮಗೆ ನೆನಪಾಗುವುದು ಬಜಾಜ್ ಚೇತಕ್ ಸ್ಕೂಟರ್, ಅಪ್ಪ ತರುತಿದ್ದ ಪಟಾಕಿಗಳು ಹಾಗೂ ಸಿಹಿ ತಿಂಡಿಗಳನ್ನು ಗೆಳೆಯರ ಮತ್ತು ಅಕ್ಕ-ಪಕ್ಕದವರ ಜೊತೆ ಹಂಚಿಕೊಂಡು ಆಚರಿಸುತ್ತಿದ್ದ ದೀಪಾವಳಿ ಹಬ್ಬದ ಸಂಭ್ರಮ. ನೀವು ಕೂಡ ಈ ರೀತಿ ಬೆಳಕಿನ ಹಬ್ಬ ದೀಪಾವಳಿಯ ಆಚರಣೆಯ ಬಾಲ್ಯದ ನೆನಪುಗಳನ್ನು ನಮ್ಮೊಂದಿಗೆ ಕಾಮೆಂಟ್ಸ್ ಮೂಲಕ ಹಂಚಿಕೊಳ್ಳಿ.

ಹಾಗಾದರೆ ಬದಲಾಗಿರುವುದೇನು? ಇಂದಿನ ದೀಪಾವಳಿ ಎಷ್ಟು ವಿಭಿನ್ನವಾಗಿದೆ? #WeGoದಲ್ಲಿ ಬೆಳಗುತ್ತಿರುವ ಪುಣೆಯ ಬೀದಿಗಳಲ್ಲಿ ಸುತ್ತುಹಾಕೋಣ ಬನ್ನಿ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಒಮ್ಮೆ ಹಿಂತಿರುಗಿ ನೋಡಿದಾಗ ಸಹಜವಾಗಿ ನಮ್ಮಲ್ಲಿ ಮೂಡವಂಥ ಪ್ರಶ್ನೆಯೆಂದರೆ, ಈ ಹಿಂದೆ ನಮ್ಮ ಪೂರ್ವಜರು ಬೇರೆ-ಬೇರೆ ಸ್ಕೂಟರ್ಸ್ ಗಳನ್ನು ಉಪಯೋಗಿಸಿರುತ್ತಾರೆ. ಆದರೆ ಈಗಿನ ನಮ್ಮ ಟಿವಿಎಸ್ ವಿಗೊ ಬಗ್ಗೆ ಅವರ ಏನು ಹೇಳುತ್ತಾರೆ ಎನ್ನುವ ಕುತೂಹಲ ನಮ್ಮಲಿದೆ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಮುಂಭಾಗದ ಟೆಲಿಸ್ಕೋಪಿಕ್ ಸಸ್ಪೆನ್ಷನ್, ಸೀಟು ಕೆಳಗಿನ ಸ್ಟೋರೇಜ್, ಪ್ರಜ್ವಲ ಹೆಡ್ ಲೈಟ್, ಟ್ಯೂಬ್ಲೆಸ್ ಟೈರು, ಮತ್ತು ಇಳಿಜಾರಿನಲ್ಲಿ ನಿಲ್ಲಿಸಲು ಸಮರ್ಥ ಬ್ರೇಕ್. ಬುಲೆಟ್ ಡಾನ್ಸಂತೂ ಇಲ್ಲವೇ ಇಲ್ಲ. ಇಂಥ ಸವಲತ್ತುಗಳನ್ನು ನಿಮ್ಮ ತಂದೆ ಎಂದಾದರೂ ಅನುಭವಿಸಿದ್ದರಾ? ಡ್ರೈವ್ ಸ್ಪಾರ್ಕ್ ನ ಟೀಮ್ ಸದಸ್ಯರ ಅಪ್ಪಂದರ ಪರವಾಗಿ ನಾವು 'ಯಸ್' ಎಂದು ಹೇಳುತ್ತೇವೆ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ನಮ್ಮನ್ನೆಷ್ಟು ಮುದ್ದುಮುದ್ದಾಗಿ ಸಾಕಿದ್ದಾರೆ ಎಂಬುದನ್ನು ಇಂದು ನಾವು ಮರೆತುಬಿಡುತ್ತೇವೆ. ಇಂದಿನ ಜಮಾನಾದ ಸ್ಕೂಟರುಗಳನ್ನು ಗಮನಿಸಿದರೆ ಅತ್ಯಂತ ಸುಸೂತ್ರವಾದ ಸವಾರಿಗೆ ಏನೇನು ಬೇಕೋ ಅದನ್ನೆಲ್ಲ ಟಿವಿಎಸ್ ಒದಗಿಸಿದೆ.

ಹಾಗಿದ್ರೆ ಪುಣೆಯೇ ಏಕೆ? ಮತ್ತೆ ದೀಪಾವಳಿಗೇ ಏಕೆ?

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ನಮ್ಮ ಮೊದಲ ಆಯ್ಕೆ ಪುಣೆ ಏಕೆ ಅಂದ್ರೆ, ಭಾರತದಲ್ಲಿಯೇ ಈ ನಗರ ಬಹು ವಿಸ್ತಾರವಾದದ್ದು. ಹಾಗೂ ತೀರಾ ಪುರಾತನವಾಗಿದ್ದು. ದೊಡ್ಡ ಇತಿಹಾಸವನ್ನೇ ಈ ನಗರ ಹೊಂದಿದೆ.

5ನೇ ಶತಮಾನದಲ್ಲಿ ಈ ನಗರವು 'ಪುಣ್ಯ' ನಗರಿ ಎಂಬ ಸಂಸ್ಕೃತದಲ್ಲಿ ಕರೆಯಲ್ಪಟ್ಟಿತ್ತು. ಈಗ ಇದನ್ನು ಪುಣೆ ಎಂದು ಕರೆಯಲಾಗುತ್ತಿದೆ.

ಸಿಟಿ ಆಫ್ ವರ್ಚೂ ಎಂದು ಖ್ಯಾತವಾಗಿರುವ ಪುಣೆಯಲ್ಲಿ ವಿಗೋ ಏನೇನು ಮಾಡಿತು? ಮುಂದೆ ಓದಿರಿ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಪುಣೆಯ ತಂಪಾದ ವಾತಾವರಣ ಬೆಂಗಳೂರನ್ನು ನೆನಪಿಸುತ್ತದೆ. ಈ ರೀತಿ ಹೋಲಿಕೆಯನ್ನು ನಾವು ಖುಷಿಯಿಂದ ಅನುಭವಿಸಿದ್ವಿ. ಸಂಪತ್ತಿನ ದೇವತೆ ಲಕ್ಷ್ಮಿಯ ಸ್ವಾಗತಕ್ಕೆ ಸಿದ್ಧಗೊಂಡಿದ್ದ ಪುಣೆಯೊಳಗೆ ಕಾಲಿಡುತ್ತಿದ್ದ ಹಾಗೆ ಲಕ್ಷ್ಮಿ ದೇವಿಯ ಮೂರ್ತಿಗಳು ಪ್ರತಿ ರಸ್ತೆಯ ಮೂಲೆಮೂಲೆಯಲ್ಲೂ ಶುಭಾಶಯ ಕೋರಿದವು.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ದೀಪಾವಳಿಯಲ್ಲಿ ದೀಪ ಹೊತ್ತಿಸುವುದಕ್ಕೆ ಒಂದು ಕಾರಣವಿದೆ. ಕಾಡಿಗೆ ಹೋಗಿದ್ದ ರಾಮ-ಸೀತೆ ಮರಳಿ ಅಯೋಧ್ಯೆಗೆ ಬಂದ ಸಂಭ್ರಮಕ್ಕೆ ಹೀಗೆ ದೀಪ ಹೊತ್ತಿಸುತ್ತಾರೆ ಎಂಬ ನಂಬಿಕೆ ಇದೆ. ಜಗತ್ತಿನಾದ್ಯಂತ ಎಂಬತ್ತು ಕೋಟಿಗೂ ಹೆಚ್ಚು ಜನ ಈ ಹಬ್ಬವನ್ನು ಒಂದೊಂದು ಬಗೆಯಲ್ಲಿ ಆಚರಿಸುತ್ತಾರೆ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಬೆಳಂಬೆಳಗ್ಗೆ ಟಿವಿಸ್ ಜತೆಗೆ ಕಳೆಯುವುದಕ್ಕಿಂತ ಒಳ್ಳೆ ಅಯ್ಕೆ ಖಂಡಿತಾ ಮತ್ತೊಂದಿಲ್ಲ. ಪುಣೆಯ ಅಧಿದೇವತೆ ಕಸ್ಬಾ ಗಣಪತಿಗೆ ನಮಸ್ಕರಿಸೋ ಮೂಲಕ ನಮ್ಮ ಪ್ರಯಾಣ ಅರಂಭವಾಯಿತು. ಪುಣೆಯಲ್ಲೇ ತುಂಬ ಹಳೆಯದಾದ ಕಸ್ಬಾ ಪೇಟ್ ನಲ್ಲಿ ಈ ದೇವಸ್ಥಾನವಿದೆ. ಈ ಜಾಗವನ್ನು ಪುಣೆಯ ಹೃದಯಭಾಗ ಅಂತಲೇ ಕರೆಯುತ್ತಾರೆ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಗಣಪತಿಗೆ ನಮಸ್ಕಾರ ಮಾಡಿದ ಮೇಲೆ ನಮ್ಮ ಪುಣೆ ಪ್ರವಾಸ ಹೆಸರಾಂತ ಶಾಪಿಂಗ್ ಮಾಲ್ ಗೆ ಭೇಟಿಯೊಂದಿಗೆ ಶುರುವಾಯಿತು. ಇಲ್ಲಿನ ಚಿಲ್ಲರೆ ಅಂಗಡಿಗಳಲ್ಲಿ ಪ್ರಯತ್ನ ಪಟ್ಟರೂ ಏನೂ ತೊಂದರೆ ಇಲ್ಲ. ಸೋ, Here #Wego.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ದೀಪಾವಳಿಗೆ ಬಟ್ಟೆ ತೆಗೆದುಕೊಳ್ಳಬೇಕು ಅಂದುಕೊಂಡ ಕಾರಣಕ್ಕೆ ನಮ್ಮ ಪಟ್ಟಿಯಲ್ಲಿ ಹೆಸರುಗಳು ಲಕ್ಷ್ಮೀ ರಸ್ತೆ ಹಾಗೂ ತುಲಸಿ ಭಾಗ್. ಆ ಮಾರ್ಕೆಟ್ ನಲ್ಲಿ ನಾವು ಅಂದುಕೊಂಡ ಹಾಗೇ ವಿಪರೀತ ಜನ ಇದ್ದರು. ಲಕ್ಷ್ಮಿ ಪೂಜೆಯ ವಿಶೇಷ ಸಂದರ್ಭಕ್ಕೆ ಖರೀದಿಯಲ್ಲಿ ತೊಡಗಿದ್ದರು.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಪುಣೆಯನ್ನು ಹೃದಯಪೂರ್ವಕವಾಗಿ ಯೌವನದಿಂದ ಕೂಡಿದ ನಗರ ಅಂತ ಹೇಳಬಹುದು. ನಮ್ಮ ಹತ್ತಿರ ಇದ್ದಿದ್ದು ಟಿವಿಎಸ್ ವಿಗೋ. ಆದ್ದರಿಂದ ನಮಗೆ ತಕ್ಕನಾಗಿತ್ತು. ಆ ನಂತರ ನಾವು ಹೊರಟಿದ್ದು ಪುಣೆಯ ಯುವಜನರು ಹೆಚ್ಚಿನ ಸಂಖೆಯಲ್ಲಿ ಕಾಣುವ ಹಾಂಕಾಂಗ್ ಲೇನ್ ಗೆ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಹೌದು, ಹಾಂಕಾಂಗ್ ಲೇನ್. ವಿದೇಶಿ ವಸ್ತುಗಳಿಗೆ ಈ ಲೇನ್ ತುಂಬ ಹೆಸರುವಾಸಿ. ಎಲ್ಲೆಲ್ಲಿಂದಲೋ ಆಮದಾದ ವಸ್ತುಗಳು ಇಲ್ಲಿ ಸಿಗುತ್ತವೆ. ಇದು ಹೇಗೆಂದರೆ ಬೆಂಗಳೂರಿನ ನ್ಯಾಷನಲ್ ಮಾರ್ಕೆಟ್ ಇದ್ದಹಾಗೆ.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ನಮ್ಮದೆಲ್ಲ ಶಾಪಿಂಗ್ ಮುಗಿದ ಮೇಲೆ ನಗರಕ್ಕೆ ತಕ್ಷಣ ವಾಪಸಾದ್ವಿ. ಅಲ್ಲಿನ ಖ್ಯಾತ ಕಯಾನಿ ಬೇಕರಿಯಲ್ಲಿ ಬಿಸ್ಕೆಟ್ ನ ಘಮ ನಮ್ಮನ್ನು ಹಾಗೆ ಸೆಳೆಯಿತು. 1950ರ ವೇಳೆ ಆರಂಭವಾದ ಈ ಬೇಕರಿ ಎಷ್ಟು ಹೆಸರುವಾಸಿ ಅಂತ ಹೊರಗೆ ನಿಂತಿದ್ದ ಜನರ ಗುಂಪಿನಿಂದಲೇ ಗೊತ್ತಾಗ್ತಿತ್ತು.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಅಷ್ಟು ದೊಡ್ಡ ಜಂಗುಳಿ ಮಧ್ಯೆ ಕೂಡ ಸಲೀಸಾಗಿ ಸಾಗಬಲ್ಲ ಟಿವಿಎಸ್ ವಿಗೋ ನಮ್ಮನ್ನು ಅಲ್ಲಿ ತಲುಪಿಸಿತು. ಬಿಸ್ಕೆಟ್ ರುಚಿ ನೋಡುವ ಸಮಯವದು. ಜನರು ಆ ಬಿಸ್ಕೆಟ್ ಗಳನ್ನು ಯಾಕಷ್ಟು ಇಷ್ಟು ಪಡ್ತಾರೆ ಅಂತ ಗೊತ್ತಾಗಿದ್ದೇ ಆಗ. ಹೊಟ್ತೆ ಬಿರಿಯುವಷ್ಟು ಬಿಸ್ಕೆಟ್ ತಿಂದು, ಪುಣೆಯ ಬಿಸ್ಸಿಬಿಸ್ಸಿ ಚಹಾ ಕುಡಿದ್ವಿ. ಪುಣೆ ನಗರದೊಳಗೆ ಅವಿತಿರುವ ಸೌಂದರ್ಯ ಸವಿಯುವುದಕ್ಕೆ ವಿಗೋ ಏರಿ ಹೊರಟೆವು.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಸೂರ್ಯ ಪಶ್ಚಿಮಕ್ಕೆ ತೆರಳುತ್ತಿದ್ದಂತೆ ಇಡೀ ಪುಣೆ ದೀಪ ಹೊತ್ತಿಸಿದಂತೆ ಕಾಣುತ್ತಿತ್ತು. ನಾವು ಬೆಟ್ಟದ ಪಾರ್ವತಿ ದೇವಿ ದೇವಾಲಯಕ್ಕೆ ಹೊರಟ್ವಿ. ಕಡಿದಾದ ಬೆಟ್ಟಗಳನ್ನು ಸೀಳಿಕೊಂಡು, ಜನ ತುಂಬಿದ ರಸ್ತೆಗಳಲ್ಲಿ ತೆರಳೋದು ಸಲೀಸಲ್ಲ. ಆದರೆ ನಮ್ಮ ವಿಗೋ ಅ ಕೆಲಸವನ್ನು ಸಲೀಸಾಗಿ ಮಾಡಿತು. ಆ ಬೆಟ್ಟದ ಮೇಲಿಂದ ಪುಣೆಯ ಸೌಂದರ್ಯವನ್ನು ಒಗಸಾಗಿ ಸೆರೆ ಹಿಡಿಯಬಹುದು. ಆಗ ರಾತ್ರಿ ವೇಳೆ ಬೇರೆ. ಪುಣೆ ಝಗಮಗಿಸುತ್ತಿತ್ತು.

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಧನತೇರಾಸ್ ದಿನ ರಾತ್ರಿ ಪಾರ್ವತಿ ದೇವಿ ಬೆಟ್ಟಕ್ಕೆ ನಾವು ಹೋಗಿದ್ದು. ಅಲ್ಲಿಮ್ದ ಕೆಳಗೆ ದೀಪದಿಂದ ಬೆಳಗುತ್ತಿದ್ದ ಸೌಂದರ್ಯದಲ್ಲಿ ಪುಣೆ ನೋಡಿದರೆ ಇನ್ನೇನು ಕಾಣಬೇಕು? ಐತಿಹಾಸಿಕ ಸ್ಮಾರಕಗಳು, ದೀಪಾವಳಿಯ ಸೌಂದರ್ಯ, ಮತ್ತು ಇನ್ನೂ ಏನೇನೋ...

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ನಾವಂದುಕೊಂಡ್ವಿ, ಎಲ್ಲ ನೋಡಿದೆವು ಅಂತ. ದೀಪಾವಳಿ. ದೀಪಾವಳಿ ವೇಳೆಯಲ್ಲಿ ಪುಣೆ. ದೀಪಾವಳಿಯ ನಿಜವಾದ ಅನುಭವವನ್ನು ಅನುಭವಿಸುವ ಹಾದಿಯಲ್ಲಿದ್ದೆವಾ, ಅದಿನ್ನೂ ನಮಗೆ ಗೊತ್ತಾಗಬೇಕು-ಇನ್ನೂ ಮುಂದುವರಿಯಲಿದೆ.

Most Read Articles

Kannada
Read more on ಟಿವಿಎಸ್
English summary
Meta Description : After an uplifting #WegoKolkata experience during the Durga Puja festivities, we bid farewell to the City of Joy and set our sights on the next fascinating city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X