ಭಾರತದಲ್ಲಿ ಎಪ್ರಿಲಿಯಾ ಎಸ್ಆರ್ 150 ರೇಸ್ ಆವೃತ್ತಿ ಬಿಡುಗಡೆಗೆ ಕ್ಷಣಗಣನೆ

Written By:

ಇಟಾಲಿಯನ್ ಮೂಲದ ಪ್ರತಿಷ್ಠಿತ ವಾಹನ ಉತ್ಪಾದನಾ ಸಂಸ್ಥೆ ಎಪ್ರಿಲಿಯಾ, ಎಸ್‌ಆರ್ 150 ಸಿರೀಸ್‌ನ ರೇಸ್ ಆವೃತ್ತಿಯ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಗ್ಲ್ಯಾಮರಸ್ ಲುಕ್ ಹೊಂದಿರುವ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್, ಸಾಹಸಿ ಬೈಕ್ ಸವಾರರಿಗೆ ಹೊಸ ಅನುಭೂತಿ ನೀಡಲಿದೆ.

ಸ್ಟಂಟ್ ಮಾಡುವವರಿಗೆ ಎಪ್ರಿಲಿಯಾ ಎಸ್ಆರ್ 150 ರೇಸ್ ಬೈಕ್ ಥ್ರೀಲ್

ಈಗಾಗಲೇ ಭಾರತದಲ್ಲಿ ಟೆಸ್ಟ್ ಡ್ರೈವ್ ನಡೆಸಿರುವ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್‌ನಲ್ಲಿ ಹಿಂದಿನ ಸರಣಿಗಿಂತಲೂ ಉತ್ತಮ ರೀತಿಯ ತಂತ್ರಜ್ಞಾನ ಅಳವಡಿಸಲಾಗಿದೆ. ಸದ್ಯ ಬಿಡುಗಡೆಗೆ ಕಾಯ್ದಿರುವ ಹೊಸ ಸೀರಿಸ್ ಈ ಹಿಂದೆ ಎರಡು ಬಾರಿ ಅತ್ಯುತ್ತಮ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಸ್ಟಂಟ್ ಮಾಡುವವರಿಗೆ ಎಪ್ರಿಲಿಯಾ ಎಸ್ಆರ್ 150 ರೇಸ್ ಬೈಕ್ ಥ್ರೀಲ್

ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್ ಮೋಟೋ ಜಿಪಿಯಿಂದ ಸ್ಪೂರ್ತಿ ಪಡೆದುಕೊಂಡಿದ್ದು, ಬಣ್ಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಗೋಲ್ಡ್ ಬ್ರೇಕ್ ಕ್ಯಾಲಿಪರ್ ಹಾಗೂ 14-ಇಂಚುಗಳ ಫೈವ್ ಸ್ಪೋಕ್ ಅಲಾಯ್ ಚಕ್ರಗಳು ಬೈಕ್ ಅಂದವನ್ನು ಹೆಚ್ಚಿಸಿವೆ.

ಸ್ಟಂಟ್ ಮಾಡುವವರಿಗೆ ಎಪ್ರಿಲಿಯಾ ಎಸ್ಆರ್ 150 ರೇಸ್ ಬೈಕ್ ಥ್ರೀಲ್

ಅಕ್ರಮಣಕಾರಿ ಲುಕ್ ಹೊಂದಿರುವ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್, 154.4 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಅಲ್ಲದೇ ಏರ್ ಕೂಲರ್ ಕೂಡಾ ಹೊಂದಿದ್ದು, 10.4ಬಿಎಚ್‌ಪಿ ಹಾಗೂ 11.4 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಸ್ಟಂಟ್ ಮಾಡುವವರಿಗೆ ಎಪ್ರಿಲಿಯಾ ಎಸ್ಆರ್ 150 ರೇಸ್ ಬೈಕ್ ಥ್ರೀಲ್

ನೂತನ ಮಾದರಿಯ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್‌ನಲ್ಲಿ ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಗಮನಹರಿಸಲಾಗಿದ್ದು, ಟೆಲಿಸ್ಕೊಪಿಕ್ ಸೌಲಭ್ಯ ಅಳವಡಿಸಲಾಗಿದೆ. ಇನ್ನೂ ಬೈಕ್ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಹಾಗೂ ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್ ವ್ಯವಸ್ಥೆ ಹೊಂದಿದೆ.

ಸ್ಟಂಟ್ ಮಾಡುವವರಿಗೆ ಎಪ್ರಿಲಿಯಾ ಎಸ್ಆರ್ 150 ರೇಸ್ ಬೈಕ್ ಥ್ರೀಲ್

ಇನ್ನೂ ಬೆಲೆ ವಿಚಾರವಾಗಿ ರಾಜಿ ಮಾಡಿಕೊಳ್ಳದ ಎಪ್ರಿಲಿಯಾ ಬೈಕ್ ಉತ್ವಾದನಾ ಕಂಪನಿ, ಆರಂಭಿಕ ಬೆಲೆಯನ್ನು ಇದುವರೆಗೂ ನಿಗದಿಗೊಳಿಸಿಲ್ಲ. ಆದ್ರೆ ಈ ಹಿಂದಿನ ಸರಣಿ ಪ್ರಕಾರ ರೂ.65,000/- ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಾರೆ ರೇಸ್ ಸ್ಕೂಟರ್ಇಷ್ಟಪಡುವವರಿಗೆ ಎಪ್ರಿಲಿಯಾ ಎಸ್ಆರ್ 150 ರೇಸ್ ಬೈಕ್ ಉತ್ತಮವಾಗಿದೆ.

ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್‌ನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Italian two-wheeler manufacturer is planning to launch another scooter under the SR series, the SR 150 Race edition in India.
Please Wait while comments are loading...

Latest Photos