ಸ್ಕೂಟರ್ ಪ್ರಿಯರನ್ನು ಸೆಳೆದ ಎಪ್ರಿಲಿಯಾ ಎಸ್ಆರ್ 150 "ವಾಟ್ ದ ಫನ್" ಜಾಹೀರಾತು

Written By:

ಸದ್ಯ ಸ್ಕೂಟರ್ ವಿಭಾಗದಲ್ಲೇ ವಿಶೇಷ ಸೌಲಭ್ಯಗಳನ್ನು ಹೊಂದುವ ಮೂಲಕ ಭರ್ಜರಿ ಮಾರಾಟಗೊಳ್ಳುತ್ತಿರುವ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್‌ಗಳಿಗೆ ಸಂಬಂಧಿಸಿದ ಹೊಸದೊಂದು ಜಾಹೀರಾತು ಬಿಡುಗಡೆಗೊಂಡಿದ್ದು, ಆಟೋ ಉದ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸ್ಕೂಟರ್ ಪ್ರಿಯರನ್ನು ಸೆಳೆದ ಎಪ್ರಿಲಿಯಾ

ಎಸ್ಆರ್ 150 ಸ್ಕೂಟರ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆಯುತ್ತಿರುವ ಎಪ್ರಿಲಿಯಾ ಸಂಸ್ಥೆಯು ಮುಂಬರುವ ಡಿಸೆಂಬರ್‌‌ನಲ್ಲಿ ಎಸ್ಆರ್ 150 ಹೊಸ ಸ್ಕೂಟರ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದು, ಈ ಹಿನ್ನೆಲೆ 'ವಾಟ್ ದ ಫನ್' ಎನ್ನುವ ಜಾಹೀರಾತು ಬಿಡುಗಡೆಗೊಳಿಸಿದೆ.

ಸ್ಕೂಟರ್ ಪ್ರಿಯರನ್ನು ಸೆಳೆದ ಎಪ್ರಿಲಿಯಾ

ಗ್ಲ್ಯಾಮರಸ್ ಲುಕ್‌ನೊಂದಿಗೆ ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಸೃಷ್ಠಿಸುತ್ತಿರುವ ಎಪ್ರಿಲಿಯಾ ಎಸ್ಆರ್ 150 ಸ್ಕೂಟರ್‌ಗಳು ಪ್ರಸ್ತುತ ಗ್ರಾಹಕರ ಬೇಡಿಕೆಗೆ ತಕ್ಕಂತೆ ಬದಲಾದಣೆ ಹೊಂದುತ್ತಿದ್ದು, ಡಿಸೆಂಬರ್ ಅಂತ್ಯಕ್ಕೆ ಖರೀದಿಗೆ ಲಭ್ಯವಿರಲಿವೆ.

ಸ್ಕೂಟರ್ ಪ್ರಿಯರನ್ನು ಸೆಳೆದ ಎಪ್ರಿಲಿಯಾ

ಹೊಸ ಮಾದರಿಯ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.65 ಸಾವಿರಕ್ಕೆ ನಿಗದಿ ಮಾಡಲಾಗಿದ್ದು, ಈ ಹಿಂದಿನ ಮಾದರಿಯಲ್ಲಿದ್ದ ಸ್ಟಿಫ್ ಸಸ್ಪೆಷನ್ ಸೆಟ್ ಅಪ್ ವ್ಯವಸ್ಥೆಯಲ್ಲಿನ ದೋಷವನ್ನು ಹೊಸ ಆವೃತ್ತಿಯಲ್ಲಿ ನಿವಾರಣೆ ಮಾಡಲಾಗಿದೆ.

ಸ್ಕೂಟರ್ ಪ್ರಿಯರನ್ನು ಸೆಳೆದ ಎಪ್ರಿಲಿಯಾ

ಎಂಜಿನ್ ಸಾಮರ್ಥ್ಯ

ಹೊಸ ಆವೃತ್ತಿಯಲ್ಲಿ ಮೇಲ್ನೋಟದ ವಿನ್ಯಾಸಗಳಲ್ಲಿ ಮಾತ್ರ ಬದಲಾವಣೆ ತರಲಾಗಿದ್ದು, ಈ ಹಿಂದಿನ 154.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಒದಗಿಸಲಾಗಿದೆ. ಇದು 10. 4-ಬಿಎಚ್‌ಪಿ ಮತ್ತು 11.4-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, ಮುಂಭಾಗದ ಚಕ್ರದಲ್ಲಿ 220ಎಂಎಂ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಚಕ್ರದಲ್ಲಿ 140ಎಂಎಂ ಡ್ರಮ್ ಬ್ರೇಕ್ ಜೋಡಣೆ ಮಾಡಲಾಗಿದೆ.

ಸ್ಕೂಟರ್ ಪ್ರಿಯರನ್ನು ಸೆಳೆದ ಎಪ್ರಿಲಿಯಾ

ಇದಲ್ಲದೇ ರೇಸ್ ಮಾದರಿಯಲ್ಲಿ ಕೆಲವು ಹೊಸ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಟ್ಯೂಬ್‌ಲೆಸ್ ಟಯರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿರುವುದು ಸ್ಕೂಟರ್ ರೇಸ್ ಪ್ರಿಯರಿಗೆ ಅನುಕೂಲಕರವಾಗಲಿವೆ.

ಎಪ್ರಿಲಿಯಾ ಸಂಸ್ಥೆಯು ಬಿಡುಗಡೆ ಮಾಡಿರುವ ಎಸ್ಆರ್ 150 ಸ್ಕೂಟರ್ ಜಾಹೀರಾತು ಇಲ್ಲಿದೆ ನೋಡಿ.

English summary
Read in Kannada about Aprilia Launches ‘What the Fun’ Campaign For The SR 150.
Story first published: Saturday, September 23, 2017, 13:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark