ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

Written By:

ತನ್ನ ಏಳು ಮಾದರಿಗಳಲ್ಲಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲು ಭಾರತೀಯ ದ್ವಿಚಕ್ರ ಉತ್ಪಾದಕ ಬಜಾಜ್ ಆಟೊ ಮುಂದಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

To Follow DriveSpark On Facebook, Click The Like Button
ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

ಪ್ರಸಿದ್ಧ ದ್ವಿಚಕ್ರ ತಯಾರಕ ಸಂಸ್ಥೆಯಾದ ಬಜಾಜ್ ಆಟೊ ತನ್ನ ನವೀನ ಮಾದರಿಗಳ ಪುನರುಜ್ಜೀವನಕ್ಕೆ ಯೋಜನೆ ರೂಪಿಸಿದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ತನ್ನ ಏಳು ಆವೃತ್ತಿಯ ಮಾದರಿಗಳಲ್ಲಿ ಹೊಸ ಬೈಕುಗಳನ್ನು ಬಿಡುಗಡೆಗೊಳಿಸಲು ಸಂಸ್ಥೆ ಮುಂದಾಗಿದೆ.

ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಬಜಾಜ್ ಅವರು ದೇಶೀಯ ಮೋಟಾರ್ ಸೈಕಲ್ ಮಾರುಕಟ್ಟೆಯನ್ನು ವಿಸ್ತರಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

ಕಂಪನಿಯು ಮುಂದಿನ ವರ್ಷ ಏಪ್ರಿಲ್ 2018ರಲ್ಲಿ ಭಾರತದ ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ಶೇಕಡಾ 26% ರಷ್ಟು ಪಾಲು ಹೊಂದುವ ಆಶಾಭಾವನೆ ಹೊಂದಿದ್ದು, ಸದ್ಯ ಭಾರತದಲ್ಲಿ 20% ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

"ಸಿಟಿ, ಪ್ಲಾಟಿನಾ, ಡಿಸ್ಕವರ್, ವಿ ಅವೆಂಜರ್, ಪಲ್ಸರ್ ಹಾಗೂ ಡೊಮಿನರ್ ಮಾದರಿಗಳಲ್ಲಿ ಹೊಸ ವಾಹನಗಳನ್ನು ಬಿಡುಗಡೆಗೊಳಿಸಲು ನಾವು ತೀರ್ಮಾನಿಸಿದ್ದು, ಮುಂಬರುವ ಹಣಕಾಸು ವರ್ಷದಲ್ಲಿ ಶೇಕಡಾ 6% ರಷ್ಟು ಬೆಳೆವಣಿಗೆ ದಾಖಲಿಸಲಿದ್ದೇವೆ" ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಾಜೀವ್ ಬಜಾಜ್ ತಿಳಿಸಿದ್ದಾರೆ.

ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

ಆಪನಗದೀಕರಣ, BS-IV ಪರಿವರ್ತನೆ ಮತ್ತು ಜಿಎಸ್‌ಟಿ ಅನುಷ್ಠಾನಗಳಂತಹ ನಾನಾಬಗೆಯ ಬೆಳವಣಿಗೆಗಳಿಂದಾಗಿ ಬಜಾಜ್ ಆಟೊ ಕಂಪನಿ ತನ್ನ ವಾಹನಗಳ ಮಾರಾಟ ವಿಚಾರದಲ್ಲಿ ಹಿಂದುಳಿಯಿತು ಎನ್ನಬಹುದು.

ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

ಸದ್ಯ, ಕಂಪನಿಯು ಹೊಸ ಉತ್ಪನ್ನಗಳು ಪರಿಚಯಿಸುವ ಮೂಲಕ ಮಾರುಕಟ್ಟೆ ಪಾಲನ್ನು ಮರಳಿ ಪಡೆಯುವ ಆಶಯ ಹೊಂದಿದ್ದು, ಹೊಸ ಉತ್ಪನ್ನಗಳು ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.

ಈ ವರ್ಷ ಬಿಡುಗಡೆಗೊಳ್ಳಲಿರುವ ಬಜಾಜ್ ಕಂಪನಿಯ ಬೈಕುಗಳ ಬಗ್ಗೆ ಮಾಹಿತಿ ಇಲ್ಲಿದೆ

ಬಜಾಜ್ ಸಂಸ್ಥೆ 150ಸಿಸಿ ವಿಭಾಗದ ಕಡೆ ಮತ್ತೆ ಗಮನಹರಿಸಿದ್ದು, ಭಾರತಕ್ಕೆ ಪಲ್ಸರ್ ಎನ್ಎಸ್150 ತರುವ ನೆಡೆಸುತ್ತಿದೆ ಎಂಬ ವರದಿ ಬಹಿರಂಗವಾಗಿದೆ. ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗುತ್ತಿರುವ ಬಜಾಜ್ ಪಲ್ಸರ್ ಎನ್ಎಸ್ 200FI ಬೈಕ್ ಬಿಡುಗಡೆಗೊಳಿಸುವ ಸಾಧ್ಯತೆಯಿದೆ.

Read more on ಬಜಾಜ್ bajaj
English summary
Read in Kannada about Bajaj auto will launch new products across its seven-model product portfolio in the country.
Story first published: Monday, July 24, 2017, 15:11 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark