ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡಿದ ಬಜಾಜ್ ಡೋಮಿನಾರ್ 400

Written By:

ಮಧ್ಯಮ ಗಾತ್ರದ ಸೂಪರ್ ಬೈಕ್ ಮಾದರಿಗಳಲ್ಲಿ ಉತ್ತಮ ಬೇಡಕೆ ಹೊಂದಿರುವ ಬಜಾಜ್ ಡೋಮಿನಾರ್ 400 ಮಾದರಿಗಳನ್ನು ಇದೀಗ ಜಾಗತಿಕ ಮಾರುಕಟ್ಟೆಗೂ ಪರಿಚಯಿಸಲಾಗುತ್ತಿದ್ದು, ಆಸ್ಟ್ರೇಲಿಯಾದಲ್ಲಿ ಡೋಮಿನಾರ್ 400 ಆವೃತ್ತಿಗಳಿಗೆ ಬೇಡಿಕೆ ಬಂದಿರುವುದೇ ಇದಕ್ಕೆ ಕಾರಣ.

ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡಿದ ಬಜಾಜ್ ಡೋಮಿನಾರ್ 400

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಡೋಮಿನಾರ್ 400 ಬೈಕ್ ಮಾರಾಟ ಪ್ರಕ್ರಿಯೆ ಜೋರಾಗಿದ್ದು, ಉತ್ತಮ ಕಾರ್ಯಕ್ಷಮತೆ ಹಾಗೂ ವಿಭಿನ್ನ ವೈಶಿಷ್ಟ್ಯತೆಗಳಿಂದಾಗಿ ಆಸ್ಟ್ರೇಲಿಯಾದಲ್ಲೂ ತನ್ನ ಕಮಾಲ್ ಪ್ರದರ್ಶನ ಮಾಡುವ ಮೂಲಕ ಬೇಡಿಕೆ ಗಿಟ್ಟಿಸಿಕೊಂಡಿದೆ.

ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡಿದ ಬಜಾಜ್ ಡೋಮಿನಾರ್ 400

ಆಪ್ ರೋಡಿಂಗ್ ಹಾಗೂ ದಿನನಿತ್ಯದ ಬಳಕೆಗೂ ಡೋಮಿನಾರ್ 400 ಉತ್ತಮ ಬೈಕ್ ಆವೃತ್ತಿಯಾಗಿದ್ದು, ಆಸ್ಟ್ರೇಲಿಯಾದಲ್ಲಿ ನಡೆದ ಕಸರತ್ತು ಪ್ರದರ್ಶನದಿಂದಾಗಿ ಆಪ್ ರೋಡಿಂಗ್ ಪ್ರಿಯರು ಡೋಮಿನಾರ್ 400 ಆಯ್ಕೆಗೆ ಮುಂದಾಗಿದ್ದಾರೆ.

Recommended Video - Watch Now!
Aprilia RS-GP MotoGP Bike Showcased At Auto Expo 2016 - DriveSpark
ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡಿದ ಬಜಾಜ್ ಡೋಮಿನಾರ್ 400

ಸದ್ಯ ಭಾರತೀಯ ಮಾರುಕಟ್ಟೆಯಲ್ಲೇ ಪ್ರತಿ ತಿಂಗಳು ಸರಾಸರಿ 1500 ಡೋಮಿನಾರ್ 400 ಬೈಕ್‌ಗಳು ಮಾರಾಟವಾಗುತ್ತಿದ್ದು, ಇದು ಉತ್ಸವ ದಿನಗಳಲ್ಲಿ ಇದು 2 ಸಾವಿರ ದಾಟಲಿದೆ. ಹೀಗಾಗಿ ಜಾಗತಿಕ ಮಾರಾಕಟ್ಟೆಗಾಗಿ ಉತ್ಪಾದನಾ ಕಾರ್ಯ ಆರಂಭಿಸಿದರೆ 3 ಸಾವಿರ ಬೈಕ್ ಉತ್ಪಾದನೆ ಮಾಡುವ ಉದ್ದೇಶ ಹೊಂದಲಾಗಿದೆ.

ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡಿದ ಬಜಾಜ್ ಡೋಮಿನಾರ್ 400

ಕೇವಲ ಆಸ್ಟೇಲಿಯಾ ಅಷ್ಟೇ ಅಲ್ಲದೇ ನೇಪಾಳ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ದ್ವಿಪ ರಾಷ್ಟ್ರಗಳಲ್ಲೂ ಡೋಮಿನಾರ್ 400ಗೆ ಬೇಡಿಕೆ ಇದ್ದು, ಮುಂಬರುವ ದಿನಗಳಲ್ಲಿ ಇದು ಹೆಚ್ಚಾಗುವ ಸಾಧ್ಯತೆಗಳಿವೆ.

ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡಿದ ಬಜಾಜ್ ಡೋಮಿನಾರ್ 400

ಇನ್ನು 373 ಸಿಸಿ ಫ್ಯೂಲ್ ಇಂಜೆಕ್ಡೆಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 34.05-ಬಿಎಚ್‌ಪಿ ಮತ್ತು 35-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಒದಗಿಸುವ ಮೂಲಕ ಆಪ್ ರೋಡಿಂಗ್ ಪ್ರಿಯರ ಗಮನಸೆಳೆದಿದೆ ಎನ್ನಬಹುದು.

ಜಾಗತಿಕ ಮಾರುಕಟ್ಟೆಯತ್ತ ಮುಖ ಮಾಡಿದ ಬಜಾಜ್ ಡೋಮಿನಾರ್ 400

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ದೇಶಿಯ ಮಾರುಕಟ್ಟೆಯಲ್ಲಿ ಸಾಕಷ್ಟು ನೀರಿಕ್ಷೆಯೊಂದಿಗೆ ಲಗ್ಗೆಯಿಟ್ಟಿದ್ದ ಡೋಮಿನಾರ್ 400 ನಿಗದಿತ ತಲಪುವಲ್ಲಿ ಯಶಸ್ವಿಯಾಗಿದೆ. ಹೀಗಾಗಿಯೇ ಇದೇ ಯಶಸ್ವಿಯೊಂದಿಗೆ ಜಾಗತಿಕ ಮಾರುಕಟ್ಟೆಯತ್ತ ಮುನ್ನುಗ್ಗುತ್ತಿರುವುದು ಗಮನಾರ್ಹ.

Read more on ಬಜಾಜ್ bajaj
English summary
Read in Kannada about Bajaj Plans To Export Dominar 400 To Australia.
Story first published: Friday, September 29, 2017, 15:41 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark