ಡುಕಾಟಿ ಪಾಲುದಾರಿಕೆ ಸಂಸ್ಥೆಯಾದ ಬಜಾಜ್ ಮತ್ತು ಕೆಟಿಎಂ?

ದುಬಾರಿ ಬೆಲೆಯ ಐಷಾರಾಮಿ ದ್ವಿಚಕ್ರಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ ಸಂಸ್ಥೆಯ ಪಾಲುದಾರಿಕೆ ಸಂಸ್ಥೆಯಾಗಲು ಹಲವು ಸಂಸ್ಥೆಗಳು ತುದಿಗಾಲಿನಲ್ಲಿ ನಿಂತಿದ್ದು, ಇದೀಗ ಹೊಸ ಹೆಸರುಗಳು ಕೇಳಿಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

By Praveen

ಈ ಹಿಂದೆ ಪ್ರತಿಷ್ಠಿತ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಡುಕಾಟಿ ಸಂಸ್ಥೆಯ ಪಾಲುದಾರಿಕೆಯಾಗಿರುವ ಬಗ್ಗೆ ವರದಿಯಾಗಿತ್ತು. ಆದ್ರೆ ಇದೀಗ ಬಂದ ಕೆಲವು ವರದಿಗಳ ಪ್ರಕಾರ ಬಜಾಜ್ ಮತ್ತು ಕೆಟಿಎಂ ಸಂಸ್ಥೆಗಳು ಜೊತೆಗೂಡಿ ಡುಕಾಟಿ ಪಾಲುದಾರಿಕೆಯನ್ನು ಹೊಂದಲಿವೆ ಎನ್ನಲಾಗುತ್ತಿದೆ.

ಡುಕಾಟಿ ಪಾಲುದಾರಿಕೆ ಸಂಸ್ಥೆಯಾದ ಬಜಾಜ್ ಮತ್ತು ಕೆಟಿಎಂ?

ಈ ಬಗ್ಗೆ ಬಜಾಜ್ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿರುವ ಎಂಡಿ ರಾಜೀವ್ ಬಜಾಜ್, "ಡುಕಾಟಿ ಸಂಸ್ಥೆಯು ಬಜಾಜ್ ಸಂಸ್ಥೆಯ ಪಾಲುದಾರಿಕೆ ಸಂಸ್ಥೆಯಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಮಹತ್ವದ ಮಾತುಕತೆ ನಡೆಸಲಾಗುತ್ತಿದೆ' ಎಂದಿದ್ದಾರೆ.

ಡುಕಾಟಿ ಪಾಲುದಾರಿಕೆ ಸಂಸ್ಥೆಯಾದ ಬಜಾಜ್ ಮತ್ತು ಕೆಟಿಎಂ?

ಆದ್ರೆ ಬಜಾಜ್‌ಗೆ ಪೈಪೋಟಿ ನೀಡುತ್ತಿರುವ ಆಸ್ಪ್ರಿಯನ್ ಬೈಕ್ ಸಂಸ್ಥೆ ಕೆಟಿಎಂ ಕೂಡಾ ಡುಕಾಟಿ ಪಾಲುದಾರಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದು, ಅಂತಿಮವಾಗಿ ಯಾವ ಸಂಸ್ಥೆಯ ಪಾಲಾಗುತ್ತದೆ ಎಂಬುವುದು ಕುತೂಹಲ ಹುಟ್ಟುಹಾಕಿದೆ.

ಡುಕಾಟಿ ಪಾಲುದಾರಿಕೆ ಸಂಸ್ಥೆಯಾದ ಬಜಾಜ್ ಮತ್ತು ಕೆಟಿಎಂ?

ಇನ್ನು ಹಾರ್ಲೆ ಡೇವಿಡ್ಸನ್, ರಾಯಲ್ ಎನ್‌ಫೀಲ್ಡ್ ಮತ್ತು ಹಿರೋ ಮೋಟೋಕಾರ್ಪ್ ಸಂಸ್ಥೆಗಳು ಕೂಡಾ ಡುಕಾಟಿ ಪಾಲುದಾರಿಕೆ ಹೊಂದುವ ಪೈಪೋಟಿಯಲ್ಲಿದ್ದು, ರಾಜೀವ್ ಬಜಾಜ್ ಹೇಳಿಕೆ ಪ್ರಕಾರ ಅಂತಿಮವಾಗಿ ಡುಕಾಟಿಯೂ ಬಜಾಜ್ ಸಂಸ್ಥೆಯ ಪಾಲಾಗಲಿದೆ ಎಂಬ ಸುಳಿವು ನೀಡಿದ್ದಾರೆ.

ಡುಕಾಟಿ ಪಾಲುದಾರಿಕೆ ಸಂಸ್ಥೆಯಾದ ಬಜಾಜ್ ಮತ್ತು ಕೆಟಿಎಂ?

ಒಂದು ವೇಳೆ ಡುಕಾಟಿ ಸಂಸ್ಥೆಯ ಪಾಲುದಾರಿಕೆಯನ್ನು ಬಜಾಜ್ ಪಡೆದುಕೊಂಡಿದ್ದೆ ಆದಲ್ಲಿ ದ್ವಿಚಕ್ರ ಉತ್ಪಾದನೆಯಲ್ಲಿ ಬಹುದೊಡ್ಡ ಬದಲಾವಣೆಗಳಾಲಿದ್ದು, ದುಬಾರಿಯ ಬೆಲೆಯ ಡುಕಾಟಿ ಬೈಕ್ ಮಾದರಿಗಳು ಕೈಗೆಟುಕುವ ದರಗಳಲ್ಲಿ ಲಭ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಡುಕಾಟಿ ಪಾಲುದಾರಿಕೆ ಸಂಸ್ಥೆಯಾದ ಬಜಾಜ್ ಮತ್ತು ಕೆಟಿಎಂ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಡುಕಾಟಿ ಸಂಸ್ಥೆಯ ಪಾಲುದಾರಿಕೆಯನ್ನು ಬಜಾಜ್ ಪಡೆಯುವುದು ಬಹುತೇಕ ಖಚಿತವಾಗಿದ್ದರೂ ಅಂತಿಮವಾಗಿ ಯಾರ ಪಾಲಾಗುತ್ತೆ ಎಂಬುವುದೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಬಜಾಜ್ ಪಾಲಾದಲ್ಲಿ ದೇಶಿಯವಾಗಿ

ಸೂಪರ್ ಬೈಕ್‌ಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಹೊಸ ಯುಗ ಆರಂಭವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

Most Read Articles

Kannada
English summary
Read in Kannada about Bajaj and KTM Closing In On Acquisition Of Ducati?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X