ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

Written By:

ದೇಶಿಯವಾಗಿ ವಾಹನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಸಂಸ್ಥೆಯು ಪ್ರತಿಷ್ಠಿತ ಬಿಎಂಡಬ್ಲ್ಯು ಮೋಟಾರ್ಡ್ ವಿಭಾಗದ ಜೊತೆ ಕೈಜೊಡಿಸಿದ್ದು, ಮೊದಲ ಬಾರಿಗೆ ಸ್ವದೇಶಿ ನಿರ್ಮಿತ ಜಿ 310 ಆರ್ ಬೈಕ್ ಅನ್ನು ನಿರ್ಮಾಣ ಮಾಡಿ ಖರೀದಿಗೆ ಸಿದ್ಧಗೊಳಿಸಿದೆ.

ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

ಈ ಹಿಂದೆ ಹಲವು ವಿಶೇಷತೆಗಳೊಂದಿಗೆ ಬೈಕ್ ರೇಸ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಬಿಎಂಡಬ್ಲ್ಯು ಮೋಟಾರ್ಡ್ ಸಂಸ್ಥೆಯು ಇದೀಗ ಭಾರತೀಯ ಮಾರುಕಟ್ಟೆಗಾಗಿ ಜಿ 310 ಆರ್ ನಿರ್ಮಾಣ ಮಾಡಿದ್ದು, ಇದೀಗ ಬಿಡುಗಡೆ ನಿಟ್ಟಿನಲ್ಲಿ ಸ್ಪಾಟ್ ಟೆಸ್ಟಿಂಗ್ ಕಾರ್ಯವನ್ನು ಕೈಗೊಂಡಿದೆ.

ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

ಟಿವಿಎಸ್ ನಿರ್ಮಾಣ ಮಾಡಿರುವ ಜಿ 310 ಬೈಕ್ ಮಾದರಿಯ ಕೆಲವು ಸ್ಪೈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿದ್ದು, ಮುಂಬರುವ ಫೆಬ್ರುವರಿ ಅಥವಾ ಮಾರ್ಚ್ ಮೊದಲಾರ್ಧದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

Recommended Video - Watch Now!
TVS Akula 310
ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

ಇದಕ್ಕೂ ಮುನ್ನ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಜಿ 310 ಆರ್ ಹೊಸ ಬೈಕಿನ ಕಾರ್ಯಕ್ಷಮತೆ ಕುರಿತು ಪರೀಕ್ಷೆ ಕೈಗೊಂಡಿರುವ ಟಿವಿಎಸ್ ಸಂಸ್ಥೆಯು ವಿದೇಶಿ ಮಾರುಕಟ್ಟೆಯಲ್ಲಿ ಸದ್ಯ ಮಾರಾಟಕ್ಕೆ ಲಭ್ಯವಿರುವ ಜಿ 310 ಆರ್ ಮಾದರಿಯ ಹೊಲಿಕೆಯನ್ನೇ ಪಡೆದಿರುವುದು ಸ್ಪಷ್ಟವಾಗಿದೆ.

ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

ಇನ್ನು ಬಿಎಂಡಬ್ಲ್ಯು ಮೋಟಾರ್ಡ್ ತಂತ್ರಜ್ಞಾನದೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಟಿವಿಎಸ್ ಬಹುನೀರಿಕ್ಷಿತ ಅಪಾಚಿ ಆರ್‌ಆರ್ 310 ಮಾದರಿ ಕೂಡಾ ಜಿ 310 ಆರ್ ಮಾದರಿಯ ಹೊಲಿಕೆ ಇದ್ದು, ಅಕುಲಾ 310 ರೇಸಿಂಗ್‌ ಬೈಕ್‌ ಪರಿಕಲ್ಪನೆಯಡಿಯಲ್ಲಿ ಹೊಸ ಬೈಕ್‌ಗಳನ್ನು ಪರಿಚಯಿಸಲಾಗುತ್ತಿದೆ.

ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

ಎಂಜಿನ್ ಸಾಮರ್ಥ್ಯ

ಅಪಾಚಿ ಆರ್‌ಆರ್ 310 ಮಾದರಿಯಲ್ಲೇ ಸಿದ್ಧಗೊಂಡಿರುವ ಬಿಎಂಡಬ್ಲ್ಯು ಜಿ 310 ಎಂಜಿನ್ ಕೂಡಾ 313 ಸಿಸಿ ಸಿಂಗಲ್ ಸಿಲಿಂಡರ್ ಯೂನಿಟ್ ಹೊಂದಿದ್ದು, 33.5-ಬಿಎಚ್‌ಪಿ ಮತ್ತು 28-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದೆ.

ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿರುವ ಅಪಾಚಿ ಆರ್‌ಆರ್310 ಮಾದರಿಯು ಬಿಎಂಡಬ್ಲ್ಯು ಮೋಟಾರ್ಡ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಹಿನ್ನೆಲೆ ರೇಸಿಂಗ್ ಪ್ರಿಯರಿಗೆ ಹೇಳಿಮಾಡಿಸಿದಂತಿದೆ.

ಖರೀದಿಗೆ ಸಿದ್ಧವಾಗಿವೆ ಟಿವಿಎಸ್ ನಿರ್ಮಾಣದ ಬಿಎಂಡಬ್ಲ್ಯು ಜಿ 310 ಆರ್

ಒಟ್ಟಿನಲ್ಲಿ ಬಿಎಂಡಬ್ಲ್ಯು ಮೋಟಾರ್ಡ್ ಜೊತೆ ಕೈಜೊಡಿಸಿರುವ ಟಿವಿಎಸ್ ಸಂಸ್ಥೆಯು ಮೊದಲ ಬಾರಿಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಬೈಕ್ ಮಾದರಿಯೊಂದನ್ನು ಹೊರತರುತ್ತಿದ್ದು, ಮುಂಬರುವ ದಿನಗಳಲ್ಲಿ ಜಿ 310 ಆರ್ ಸಾಕಷ್ಟು ಜನಪ್ರಿಯತೆ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಪ್ಪದೇ ಓದಿ-ಒಂದು ಲಕ್ಷದ ಒಳಗೆ ಖರೀದಿಸಬಹುದಾದ ಟಾಪ್ 5 ಬೈಕುಗಳ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

English summary
Read in Kannada about BMW G 310 R Fully Revealed In India For The First Time.
Story first published: Thursday, November 23, 2017, 17:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark