ಕ್ರೀಡಾ ಮಾದರಿಯ ಬೈಕುಗಳ ಬಗ್ಗೆ ಮಾಹಿತಿ ನೀಡಿದ ಬಿಎಂಡಬ್ಲ್ಯೂ

2018ರ ದ್ವಿತೀಯಾರ್ಧದಲ್ಲಿ ಜಿ310 ಆರ್ ಸ್ಟ್ರೀಟ್ ಫೈಟರ್ ಮತ್ತು ಜಿ 310 ಜಿಎಸ್ ಸಾಹಸ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಪರಿಚಯಿಸಲಾಗುವುದು ಎಂದು ಬಿಎಂಡಬ್ಲ್ಯೂ ಮೊಟ್ರಾಡ್ ಬಹಿರಂಗಪಡಿಸಿದೆ.

By Girish

ಜರ್ಮನ್ ಮೋಟಾರ್ ಸೈಕಲ್ ತಯಾರಕ ಸಂಸ್ಥೆಯಾದ ಪ್ರತಿಷ್ಠಿತ ಬಿಎಂಡಬ್ಲ್ಯೂ, ಕಳೆದ 2016ರಲ್ಲಿ ನೆಡೆದ ಆಟೋ ಎಕ್ಸ್‌ಪೋದಲ್ಲಿ ಜಿ 310 ಆರ್ ಪ್ರದರ್ಶಿಸಿತ್ತು. 2017ರಲ್ಲಿ ಈ ಮೋಟಾರ್ ಸೈಕಲ್ ಅನ್ನು ಕಂಪೆನಿಯು ಪ್ರಾರಂಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಈ ವಾಹನ ಒಂದು ವರ್ಷ ವಿಳಂಬವಾಗಿದ್ದು, 2018ರಲ್ಲಿ ಬಿಡುಗಡೆಯಾಗಲಿದೆ.

ಕ್ರೀಡಾ ಮಾದರಿಯ ಬೈಕುಗಳ ಬಗ್ಗೆ ಮಾಹಿತಿ ನೀಡಿದ ಬಿಎಂಡಬ್ಲ್ಯೂ

ಸಾಹಸಮಯ ಸವಾರಿಗೆ ಹೇಳಿ ಮಾಡಿಸಿದಂತಿರುವ ಈ ಜಿ 310 ಆರ್ ಮೋಟಾರ್ ಸೈಕಲ್ ಅನ್ನು ಭಾರತದಲ್ಲಿ ಟಿವಿಎಸ್ ಮೋಟಾರ್ ಕಂಪನಿಯ ಹೊಸೂರು ಘಟಕದಲ್ಲಿ ಉತ್ಪಾದಿಸಲಾಗುತ್ತಿದ್ದು, ಇಲ್ಲಿಂದಲೇ ಹಲವಾರು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಸಹ ಮಾಡಲಾಗುತ್ತದೆ.

ಕ್ರೀಡಾ ಮಾದರಿಯ ಬೈಕುಗಳ ಬಗ್ಗೆ ಮಾಹಿತಿ ನೀಡಿದ ಬಿಎಂಡಬ್ಲ್ಯೂ

ಬಿಎಂಡಬ್ಲ್ಯೂಜಿ 310 ಆರ್ ಮೋಟಾರ್ ಸೈಕಲ್ 313 ಸಿಸಿ ಫ್ಯುಯೆಲ್ ಇಂಜೆಕ್ಟ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದ್ದು, 28 ಎನ್‌ಎಂ ತಿರುಗುಬಲದಲ್ಲಿ 34 ಬಿಎಚ್‌ಪಿ ಗರಿಷ್ಠ ಟರ್ಕನ್ನು ಉತ್ಪಾದಿಸುತ್ತದೆ ಮತ್ತು 6-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಪಡೆದುಕೊಂಡಿದೆ.

ಕ್ರೀಡಾ ಮಾದರಿಯ ಬೈಕುಗಳ ಬಗ್ಗೆ ಮಾಹಿತಿ ನೀಡಿದ ಬಿಎಂಡಬ್ಲ್ಯೂ

ಅಪ್‌ಸೈಡ್ ಡೌನ್ ಮುಂಭಾಗದ ಫೋರ್ಕ್ಸ್, ಮುಂಭಾಗದಲ್ಲಿ ರೇಡಿಯಲ್ ಬ್ರೇಕ್ ಕ್ಯಾಲಿಪರ್ ಮತ್ತು ಎಲ್‌ಸಿಡಿ ಇನ್ಸ್ಟ್ರು‌ಮೆಂಟ್ ಕ್ಲಸ್ಟರ್‌ನಂತಹ ಮೋಟಾರ್ ಸೈಕಲ್ ವೈಶಿಷ್ಟ್ಯಗಳನ್ನು ಈ ಪ್ರೀಮಿಯಂ ಮೋಟಾರ್ ಸೈಕಲ್ ಒಳಗೊಂಡಿದೆ. ಎಬಿಎಸ್(ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಸ್ಟ್ಯಾಂಡರ್ಡ್ ಆಯ್ಕೆಯಾಗಿ ನೀಡಲಾಗುತ್ತದೆ.

ಕ್ರೀಡಾ ಮಾದರಿಯ ಬೈಕುಗಳ ಬಗ್ಗೆ ಮಾಹಿತಿ ನೀಡಿದ ಬಿಎಂಡಬ್ಲ್ಯೂ

ಜಿ 310 ಜಿಎಸ್ ಮೋಟಾರ್ ಸೈಕಲ್, ಜಿ 310 ಆರ್ ಬೈಕಿನ ಕ್ರೀಡಾ ಆವೃತಿಯಾಗಿದ್ದು, ಎರಡೂ ಮಾದರಿಗಳೂ ಸಹ ಒಂದೇ ರೀತಿಯ ಎಂಜಿನ್ ಆಯ್ಕೆ ಹೊಂದಿವೆ. ಆದರೆ ಜಿ 310 ಜಿಎಸ್ ಮೋಟಾರ್ ಸೈಕಲ್, ದೀರ್ಘ ಪ್ರಯಾಣಕ್ಕೆ ಅನುಕೂಲವಾಗುವಂತಹ ಸೂಸ್ಪೆನ್‌ಷನ್ ಸೆಟ್‌ಅಪ್, ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಮತ್ತು ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ.

ಕ್ರೀಡಾ ಮಾದರಿಯ ಬೈಕುಗಳ ಬಗ್ಗೆ ಮಾಹಿತಿ ನೀಡಿದ ಬಿಎಂಡಬ್ಲ್ಯೂ

ಹಿಂಬದಿಯಲ್ಲಿ ಲಗೇಜ್ ಬಾಕ್ಸ್ ಮತ್ತು ಬಾಡಿ ಪ್ಯಾನೆಲ್‌ಗಳಂತಹ ಹೆಚ್ಚುವರಿ ಅಂಶಗಳಿಂದಾಗಿ ಜಿ310 ಜಿಎಸ್ ಬೈಕ್ ಜಿ 310 ಆರ್ ಗಿಂತ ಹೆಚ್ಚು ಭಾರವಾಗಿದೆ ಹಾಗು ಈ ಜಿ 310 ಜಿಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಪ್ರವೇಶ ಮಟ್ಟದ ಸಾಹಸ ಮೋಟಾರ್ ಸೈಕಲ್ ಆಗಿದೆ.

ಕ್ರೀಡಾ ಮಾದರಿಯ ಬೈಕುಗಳ ಬಗ್ಗೆ ಮಾಹಿತಿ ನೀಡಿದ ಬಿಎಂಡಬ್ಲ್ಯೂ

ಜಿ 310 ಆರ್ ಮತ್ತು ಜಿ 310 ಜಿಎಸ್ ಮೋಟಾರ್ ಸೈಕಲ್‌ಗಳ ಬಿಡುಗಡೆಗೆ ಮುಂಚಿತವಾಗಿ ಬಿಎಂಡಬ್ಲ್ಯು ಮೊಟ್ರಾಡ್, ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ಬಲಪಡಿಸಲು ಬಯಸಿದೆ. ಈ ಜಿ 310 ಜಿಎಸ್ ಬೈಕ್, ಕೆಟಿಎಂ ಡ್ಯೂಕ್ 390, ಬೆನೆಲ್ಲಿ ಟಿಎನ್‌ಟಿ 300 ಮತ್ತು ಕವಾಸಕಿ ಝಡ್ 250 ಮೋಟಾರ್ ಸೈಕಲ್‌ಗಳಂತಹ ಪ್ರತಿಸ್ಪರ್ಧಿಗಳನ್ನು ಎದುರಿಸಲಿದೆ. ಜಿ 310 ಜಿಎಸ್‌ಗೆ ಮುಖ್ಯ ಪ್ರತಿಸ್ಪರ್ಧಿ ರಾಯಲ್ ಎನ್ಫೀಲ್ಡ್ ಹಿಮಾಲಯನ್ ಎಂಬುದನ್ನು ಮರೆಯಬಾರದು.

Most Read Articles

Kannada
English summary
German motorcycle manufacturer BMW Motorrad has finally revealed that the G 310 R street fighter and G 310 GS adventure motorcycle will be introduced in India by the second half of 2018.
Story first published: Tuesday, October 10, 2017, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X