ಡುಕಾಟಿ ಸೂಪರ್‌ಸ್ಪೋರ್ಟ್ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೈಕುಗಳು ಭಾರತದಲ್ಲಿ ಬಿಡುಗಡೆ

Written By:

ನಗರ ಪ್ರದೇಶದ ರಸ್ತೆ, ಹೆದ್ದಾರಿಗಳಲ್ಲಿ ಆರಾಮದಾಯಕ ಪ್ರಯಾಣಕ್ಕಾಗಿ ಪ್ರತಿಷ್ಠಿತ ಸೂಪರ್ ಬೈಕ್ ತಯಾರಕ ಸಂಸ್ಥೆಯಾದ ಡುಕಾಟಿ ತನ್ನ ಎರಡು ಮಾದರಿಯ ಬೈಕುಗಳನ್ನು ಅನಾವರಣಗೊಳಿಸಿದೆ.

ಡುಕಾಟಿ ಸೂಪರ್‌ಸ್ಪೋರ್ಟ್ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೈಕುಗಳು ಭಾರತದಲ್ಲಿ ಬಿಡುಗಡೆ

ಇಟಾಲಿಯನ್ ಸೂಪರ್ ಬೈಕ್ ಉತ್ಪಾದಕ ಕಂಪನಿ ಡುಕಾಟಿ, ಭಾರತದಲ್ಲಿ ಸೂಪರ್ ಸ್ಪೋರ್ಟ್ ಮತ್ತು ಸೂಪರ್ ಸ್ಪೋರ್ಟ್ ಎಸ್ ಬೈಕುಗಳನ್ನು ಬಿಡುಗಡೆಗೊಳಿಸಿದ್ದು, ಈ ಬೈಕುಗಳು ಕ್ರಮವಾಗಿ ರೂ.12.08 ಲಕ್ಷ ಮತ್ತು ರೂ.13.39 ಲಕ್ಷ ಬೆಲೆಯೊಂದಿಗೆ ಬಿಡುಗಡೆಯಾಗಿವೆ.

ಡುಕಾಟಿ ಸೂಪರ್‌ಸ್ಪೋರ್ಟ್ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೈಕುಗಳು ಭಾರತದಲ್ಲಿ ಬಿಡುಗಡೆ

ಡುಕಾಟಿ ಸೂಪರ್ ಸ್ಪೋರ್ಟ್ ಬೈಕ್ 937 ಸಿಸಿ ಟೆಸ್ಟ್‌ಸ್ಟ್ರೆಟ್ಟ 11 ಎಲ್-ಟ್ವಿನ್ ಲಿಕ್ವಿಡ್-ಕೋಲ್ಡ್ ಎಂಜಿನ್ ಹೊಂದಿದ್ದು, ಈ ಬೈಕ್ 93 ಎನ್‌ಎಂ ತಿರುಗುಬಲದಲ್ಲಿ 110 ಬಿಎಚ್‌ಪಿ ಶಕ್ತಿ ಉತ್ಪಾದನೆ ಮಾಡುತ್ತದೆ.

ಡುಕಾಟಿ ಸೂಪರ್‌ಸ್ಪೋರ್ಟ್ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೈಕುಗಳು ಭಾರತದಲ್ಲಿ ಬಿಡುಗಡೆ

ಹೈಪರ್‌ಮೋಟರರ್ಡ್ 939 ಮತ್ತು ಮಲ್ಟಿಸ್ಟ್ರಾಡಾ 950ನಲ್ಲಿ ಸಹ ಡುಕಾಟಿ ಸಂಸ್ಥೆಯು ಇದೇ ಎಂಜಿನ್ ಅಳವಡಿಸಿದ್ದು, ಈ ಎಂಜಿನ್‌ನಲ್ಲಿ 6 ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಡುಕಾಟಿ ಸೂಪರ್‌ಸ್ಪೋರ್ಟ್ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೈಕುಗಳು ಭಾರತದಲ್ಲಿ ಬಿಡುಗಡೆ

ಈ ಮೋಟಾರ್ ಸೈಕಲ್ ಡಕ್ಯಾಟಿ ಸೇಫ್ಟಿ ಪ್ಯಾಕ್ (ಡಿಎಸ್‌ಪಿ) ಒಳಗೊಂಡಿದೆ, ಇದರಲ್ಲಿ ಬಾಷ್ 9 ಎಂಪಿ ಎಬಿಎಸ್ ಮತ್ತು ಡುಕಾಟಿ ಟ್ರಾಕ್ಷನ್ ಕಂಟ್ರೋಲ್ ಆಯ್ಕೆ ನೀಡಲಾಗಿದೆ ಮತ್ತು ಇದರಿಂದಾಗಿ ಬೈಕಿನ ಕಾರ್ಯಕ್ಷಮತೆ ಹೆಚ್ಚಿಗೆಯಾಗಲಿದೆ.

ಡುಕಾಟಿ ಸೂಪರ್‌ಸ್ಪೋರ್ಟ್ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೈಕುಗಳು ಭಾರತದಲ್ಲಿ ಬಿಡುಗಡೆ

ಮೋಟಾರು ಸೈಕಲ್ ನಡವಳಿಕೆಯನ್ನು ಮಾರ್ಪಡಿಸಲು ರೈಡ್-ಬೈ-ವೈರ್ ಥ್ರೊಟಲ್, ಎಬಿಎಸ್ ಮತ್ತು ಡಿಟಿಸಿ ಆಯ್ಕೆಗಳಲ್ಲಿ ಈ ಸೂಪರ್ ಬೈಕ್ ಅನಾವರಣಗೊಂಡಿದ್ದು, ಸ್ಪೋರ್ಟ್, ಟೂರಿಂಗ್ ಮತ್ತು ಅರ್ಬನ್ ಎಂಬ ಮೂರು ಸವಾರಿ ವಿಧಾನಗಳನ್ನು ಈ ಮೋಟಾರ್ ಸೈಕಲ್ ಒಳಗೊಂಡಿರಲಿದೆ.

ಡುಕಾಟಿ ಸೂಪರ್‌ಸ್ಪೋರ್ಟ್ ಮತ್ತು ಸೂಪರ್‌ಸ್ಪೋರ್ಟ್ ಎಸ್ ಬೈಕುಗಳು ಭಾರತದಲ್ಲಿ ಬಿಡುಗಡೆ

ಸೂಪರ್ ಸ್ಪೋರ್ಟ್ ಮತ್ತು ಸೂಪರ್ ಸ್ಪೋರ್ಟ್ ಎಸ್ ಎರಡೂ ಬೈಕುಗಳು ಒಂದೇ-ಬದಿಯ ಅಲ್ಯುಮಿನಿಯಂ ಸ್ವಿಂಗ್ಆರ್ಮ್ ಹೊಂದಿವೆ. ಬ್ರೇಕ್ ವಿಚಾರದ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 245 ಎಂಎಂ ಡಿಸ್ಕ್ ಕಾರ್ಯ ನಿರ್ವಹಿಸಲಿವೆ.

Read more on ಡುಕಾಟಿ ducati
English summary
Italian superbike manufacturer Ducati has launched the SuperSport and SuperSport S in India with a price tag of Rs 12.08 lakh and 13.39 lakh respectively. All prices are ex-showroom (India).
Story first published: Friday, September 22, 2017, 15:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark