ಜಿಎಸ್‌ಟಿಯಿಂದಾಗಿ 'ಡೊಮಿನರ್ 4೦೦' ಮೋಟಾರ್‌ಸೈಕಲ್ ಬೆಲೆ ಏರಿಕೆ

Written By:

ಹೊಸ ಸರಕು ಮತ್ತು ಸೇವಾ ತೆರಿಗೆ ಪದ್ಧತಿ (ಜಿಎಸ್‌ಟಿ) ಜುಲೈ 1, 2017 ರಿಂದ ಈಗಾಗಲೇ ಜಾರಿಗೆ ಬಂದಿದ್ದು, ಡೊಮಿನರ್ ಬೈಕ್‌ಗಳ ಬೆಲೆಗಳು ಏರಿಕೆ ಕಂಡಿವೆ.

ಜಿಎಸ್‌ಟಿ ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಗಮನಾರ್ಹ ಪರಿಣಾಮ ಬೀರಲಿದ್ದು, ಹೊಸ ತೆರಿಗೆ ಹಲವಾರು ತಯಾರಕರ ಉತ್ಪನ್ನಗಳ ಬೆಲೆಯನ್ನು ಪರಿಷ್ಕರಿಸಿದೆ. ಬಜಾಜ್ ಆಟೊ ತನ್ನ ಪ್ರಮುಖ ಡೊಮಿನರ್ 400 ಮಾದರಿಯ ಬೆಲೆಯನ್ನು ಹೆಚ್ಚಿಸಿದೆ.

ಬಜಾಜ್ ಆಟೋ ಡೊಮಿನರ್ 400 ಬೈಕಿನ ಬೆಲೆ ಹೆಚ್ಚು ಕಡಿಮೆ ರೂ. 2,000ಗಳಷ್ಟು ಹೆಚ್ಚಾಗಲಿದೆ ಎಂದು ಇಂಡಿಯಾ.ಕಾಂ ವರದಿ ಮಾಡಿದೆ.

ಡೊಮಿನರ್ 400 ಬೈಕಿನ ಎಬಿಎಸ್ ರೂಪಾಂತರವು ಸದ್ಯ ರೂ. 1,55,215 ಎಕ್ಸ್ ಷೋ ರೂಂ(ದೆಹಲಿ) ದರ ಇರಲಿದ್ದು, ಎಬಿಎಸ್ ಹೊಂದಿರದ ವೆರಿಯಂಟ್ ನಿಮಗೆ 1.41,054 ಎಕ್ಸ್ ಷೋ ರೂಂ (ದೆಹಲಿ) ಬೆಲೆ ಹೊಂದಿರಲಿದೆ.

350 ಗಿಂತ ಹೆಚ್ಚಿನ ಸಿಸಿ ದ್ವಿಚಕ್ರ ವಾಹನಗಳು ಹೆಚ್ಚುವರಿಯಾಗಿ ಶೇಕಡಾ 3% ರಷ್ಟು ತೆರಿಗೆ ಸೆಳೆಯುತ್ತವೆ ಮತ್ತು ಒಟ್ಟಾರೆ 31% ತೆರಿಗೆ ಹೊರೆ ಹೊಂದಿರಲಿವೆ.

ಬಜಾಜ್ ಡೊಮಿನರ್ 400 ಬೈಕ್ 373 ಸಿಸಿ ಲಿಕ್ವಿಡ್ ಕೋಲ್ಡ್ ಫ್ಯೂಯೆಲ್ ಇಂಜೆಕ್ಷನ್ ಎಂಜಿನ್ ಹೊಂದಿದ್ದು,35 ಏನ್‌ಎಂ ತಿರುಗುಬಲದಲ್ಲಿ 35ರಷ್ಟು ಅಶ್ವಶಕ್ತಿ ಉತ್ಪಾಧಿಸಲಿದೆ.

6-ಸ್ಪೀಡ್ ಗೇರ್ ಬಾಕ್ಸ್ ಎಂಜಿನ್ ಹೊಂದಿರುವ ಈ ಮೋಟಾರ್‌ಸೈಕಲ್ ಸ್ಲಿಪ್ಪರ್ ಕ್ಲಚ್ ಪಡೆಯುತ್ತದೆ ಹೆಚ್ಚು ಬಲಿಷ್ಠವಾದ ಆಕ್ರಮಣಕಾರಿ ಸ್ವಭಾವ ಹೊಂದಿದೆ.

English summary
Read in Kannada about Bajaj Auto has also increased the price of its flagship model, the Dominar 400. KNow more about this GST
Story first published: Monday, July 3, 2017, 13:30 [IST]
Please Wait while comments are loading...

Latest Photos