2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

Written By:

ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ತನ್ನ ಪ್ರಮುಖ ಬೈಕ್ ಸರಣಿ ಸಾಫ್ಟೈಲ್ ರೇಂಜ್ 2018ರ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ವೈಶಿಷ್ಟ್ಯತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

ಈ ಹಿಂದೆ ಸಾಫ್ಟೈಲ್ ರೇಂಜ್ ಬೈಕ್ ಮಾರಾಟದಲ್ಲಿ ಯಶಸ್ಸು ಗಳಿಸಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಇದೀಗ ಹೊಸ ತಂತ್ರಜ್ಞಾನಗಳೊಂದಿಗೆ 2018ರ ಆೃವೃತ್ತಿಯನ್ನು ಬಿಡುಗಡೆ ಮಾಡಿದ್ದು, ಬೈಕ್ ಬೆಲೆಯನ್ನು ರೂ.11.99 ಲಕ್ಷಕ್ಕೆ ನಿಗದಿ ಮಾಡಿದೆ.

2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

ಕೇವಲ ಸಾಫ್ಟೈಲ್ ರೇಂಜ್ ಬೈಕ್ ಮಾದರಿ ಅಷ್ಟೇ ಅಲ್ಲದೇ 2018ರ ವಿನೂತನ ಆವೃತ್ತಿಗಳಾದ ಫ್ಯಾಟ್ ಬಾಯ್, ಫ್ಯಾಟ್ ಬಾಬ್, ಸ್ಟ್ರೀಟ್ ಬಾಬ್ ಮತ್ತು ಹೆರಿಟೆಜ್ ಸಾಫ್ಟೈಲ್ ಕ್ಲಾಸಿಕ್ ಬೈಕ್‌ಗಳನ್ನು ಕೂಡಾ ಬಿಡುಗಡೆ ಮಾಡಲಾಗಿದ್ದು, ದರ ಪಟ್ಟಿ ಕೆಳಗಿನಂತಿದೆ.

2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

ಬೈಕ್ ಮಾದರಿಗಳು ಬೆಲೆಗಳು (ಎಕ್ಸ್‌ಶೋರಂ ಪ್ರಕಾರ)

ಸ್ಟ್ರೀಟ್ ಬಾಬ್ ರೂ. 11.99 ಲಕ್ಷ

ಫ್ಯಾಟ್ ಬಾಬ್ ರೂ. 13.99 ಲಕ್ಷ

ಫ್ಯಾಟ್ ಬಾಯ್ ರೂ. 17.49 ಲಕ್ಷ

ಹೆರಿಟೆಜ್ ಸಾಫ್ಟೈಲ್ ಕ್ಲಾಸಿಕ್ ರೂ. 18.99 ಲಕ್ಷ

2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

ಇನ್ನು ನ್ಯೂ ಸಾಫ್ಟೈಲ್ ರೇಂಜ್ ಆವೃತ್ತಿಯು ಕಳೆದ ಆವೃತ್ತಿಗಿಂತ ಹತ್ತು ಹಲವು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಎಲ್‌ಇಡಿ ಹೆಡ್‌ಲ್ಯಾಂಪ್ ಹಾಗೂ ಹ್ಯಾಂಡಲ್ ಬಾರ್ ವಿಭಾಗದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ.

Recommended Video - Watch Now!
TVS Jupiter Classic Launched In India | In Kannada - DriveSpark ಕನ್ನಡ
2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

ಜೊತೆಗೆ ಫ್ಯಾಟ್ ಬಾಬ್ ಮತ್ತು ಸ್ಟ್ರೀಟ್ ಬಾಬ್ ಬೈಕ್ ಆವೃತ್ತಿಗಳು ಮಿಲ್ವಾಕೀ 8 107 ಎಂಜಿನ್ ಹೊಂದಿದ್ದು, ಹೆರಿಟೆಜ್ ಸಾಫ್ಟೈಲ್ ರೇಂಜ್ ಆವೃತ್ತಿಯೂ ಮಿಲ್ವಾಕೀ 8 114 ಎಂಜಿನ್ ಪಡೆದುಕೊಂಡಿರುವುದು ಮತ್ತಷ್ಟು ಎಂಜಿನ್ ಸಾಮರ್ಥ್ಯವನ್ನು ಹೆಚ್ಚಿಸಿದೆ.

2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

ಹಾರ್ಲೆ ಡೇವಿಡ್ಸನ್ ಬಿಡುಗಡೆಗೊಳಿಸಿರುವ ಎಲ್ಲಾ ಹೊಸ ಬೈಕ್ ಮಾದರಿಗಳಲ್ಲೂ ಡಿಜಿಟಲ್ ಇನ್ಟ್ರುಮೆಟೆಷನ್ ಸೌಲಭ್ಯವನ್ನು ಒದಗಿಸಲಾಗಿದ್ದು, ಡ್ಯುಯಲ್ ಎಕ್ಸಾಸ್ಟ್, ನ್ಯೂ ಚೆಸ್ಸಿ ಹೊಂದಿರುವುದು ಹೊಸ ಬೈಕುಗಳ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.

2018ರ ಹಾರ್ಲೆ ಡೇವಿಡ್ಸನ್ ಸಾಫ್ಟೈಲ್ ರೇಂಜ್ ಐಷಾರಾಮಿ ಬೈಕ್ ಬಿಡುಗಡೆ

ಅದರಲ್ಲೂ 1750 ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ವಿಶೇಷ ವಿನ್ಯಾಸಗಳನ್ನು ಪಡೆದುಕೊಂಡಿರುವ ಸಾಫ್ಟೈಲ್ ರೇಂಜ್ ಆವೃತ್ತಿಯಂತಲೂ ಉಳಿದ ಮಾದರಿಗಳಿಂತ ಹೆಚ್ಚು ಆಕರ್ಷಣೆ ಹೊಂದಿದ್ದು, ಕೇವಲ 6 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮಿ ವೇಗವನ್ನು ಪಡೆದುಕೊಳ್ಳಬಲ್ಲವು.

English summary
Read in Kannada about 2018 Harley Davidson Softail Range Launched In India.
Story first published: Thursday, October 12, 2017, 17:10 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark