ಹಾರ್ಲೆ ಡೇವಿಡ್ಸನ್‌ ಬೈಕ್ ಬೆಲೆಗಳಲ್ಲಿ 2 ಲಕ್ಷಗಿಂತಲೂ ಹೆಚ್ಚು ಕಡಿತ..!!

Written By:

ಅಮೆರಿಕದ ಐಕಾನಿಕ್ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಯಾದ ಹಾರ್ಲೆ ಡೇವಿಡ್ಸನ್ ತನ್ನ ಪ್ರಮುಖ ಬೈಕ್ ಸರಣಿಗಳ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಪ್ರತಿ ಬೈಕ್ ಮೇಲೆ 1.50 ಲಕ್ಷದಿಂದ 2 ಲಕ್ಷದವರೆಗೆ ರಿಯಾಯ್ತಿ ದೊರೆಯಲಿದೆ.

ಹಾರ್ಲೆ ಡೇವಿಡ್ಸನ್‌ ಬೈಕ್ ಬೆಲೆಗಳಲ್ಲಿ 2 ಲಕ್ಷಗಿಂತಲೂ ಹೆಚ್ಚು ಕಡಿತ

ಪ್ರಮುಖವಾಗಿ 2017ರ ಫಾಟ್ ಬಾಯ್ ಮತ್ತು ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್ ಬೈಕ್ ಮಾದರಿಗಳಿಗೆ ಮೇಲೆ ಅತಿ ಹೆಚ್ಚು ಬೆಲೆ ಕಡಿತ ಘೋಷಿಸಲಾಗಿದ್ದು, ಈ ಮೂಲಕ ಸ್ಟಾಕ್ ಕ್ಲಿಯರನ್ಸ್ ಮಾಡುವ ಉದ್ದೇಶವನ್ನಿರಿಸಿಕೊಳ್ಳಲಾಗಿದೆ.

ಹಾರ್ಲೆ ಡೇವಿಡ್ಸನ್‌ ಬೈಕ್ ಬೆಲೆಗಳಲ್ಲಿ 2 ಲಕ್ಷಗಿಂತಲೂ ಹೆಚ್ಚು ಕಡಿತ

ಆಫರ್ ನೀಡುತ್ತಿರುವ ಹಿನ್ನೆಲೆ 17,01,000 ರೂ.ಗಳಷ್ಟು ದೆಹಲಿ ಎಕ್ಸ್ ಶೋ ರೂಂ ಬೆಲೆಯಿದ್ದ 2017ರ ಹಾರ್ಲೆ ಡೇವಿಡ್ಸನ್ ಫಾಟ್ ಬಾಯ್ ಬೈಕ್ ಇದೀಗ 14,99,990 ರೂ.ಗಳಿಗೆ ಗ್ರಾಹಕರನ್ನು ತಲುಪಲಿದೆ ಎನ್ನಲಾಗಿದೆ.

ಹಾರ್ಲೆ ಡೇವಿಡ್ಸನ್‌ ಬೈಕ್ ಬೆಲೆಗಳಲ್ಲಿ 2 ಲಕ್ಷಗಿಂತಲೂ ಹೆಚ್ಚು ಕಡಿತ

ಇನ್ನು ಆಫರ್ ನೀಡಲಾಗುತ್ತಿರುವ ಫಾಟ್ ಬಾಯ್ ಬೈಕ್ ಮಾದರಿಗಳು ಟ್ವಿನ್ ಕ್ಯಾಮ್ 103ಬಿ ಏರ್ ಕೂಲ್ಡ್ ವಿ ಟ್ವಿನ್ 1690 ಸಿಸಿ ಎಂಜಿನ್‌ನಿಂದ ನಿಯಂತ್ರಣ ಹೊಂದಿದ್ದು, 125-ಎನ್‌ಎಂ (3500rpm)ತಿರುಗುಬಲ ಉತ್ಪಾದಿಸಲಿದೆ.

Recommended Video - Watch Now!
Yamaha Launches Dark Night Variants - DriveSpark
ಹಾರ್ಲೆ ಡೇವಿಡ್ಸನ್‌ ಬೈಕ್ ಬೆಲೆಗಳಲ್ಲಿ 2 ಲಕ್ಷಗಿಂತಲೂ ಹೆಚ್ಚು ಕಡಿತ

ಹಾಗೆಯೇ ದೆಹಲಿ ಎಕ್ಸ್ ಶೋ ರೂಂ ಪ್ರಕಾರ 18,50,000 ರೂ.ಗಳಷ್ಟು ಬೆಲೆ ಬಾಳುವ 2017 ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್ 15,99,990 ರೂ.ಗಳಿಗೆ ಲಭ್ಯವಾಗಲಿದ್ದು, ಇದರಲ್ಲಿರುವ 1690 ಸಿಸಿ ಟ್ವಿ ಕ್ಯಾಮ್ 103ಬಿ ಏರ್ ಕೂಲ್ಡ್ ವಿ ಟ್ವಿನ್ ಎಂಜಿನ್ 124 ಎನ್ಎಂ (2500rpm) ತಿರುಗುಬಲವನ್ನು ಉತ್ಪಾದಿಸುತ್ತದೆ.

ಹಾರ್ಲೆ ಡೇವಿಡ್ಸನ್‌ ಬೈಕ್ ಬೆಲೆಗಳಲ್ಲಿ 2 ಲಕ್ಷಗಿಂತಲೂ ಹೆಚ್ಚು ಕಡಿತ

ಇದಲ್ಲದೇ ಈ ಎರಡು ಬೈಕ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಅಷ್ಟೇ ಅಲ್ಲದೇ ಇಎಂಐ ಸೇವೆಯನ್ನು ಕೂಡಾ ಹಾರ್ಲೆ ಒದಗಿಸುತ್ತಿದ್ದು, ಫಾಟ್ ಬಾಯ್‌ಗೆ ಪ್ರತಿ ಮಾಸಿಕ 14,999 ರೂ. ಮತ್ತು ಹೆರಿಟೇಜ್ ಸಾಫ್ಟೈಲ್ ಕ್ಲಾಸಿಕ್ ಮಾಸಿಕ 15,999 ರೂ.ಗಳಿಗೆ ನೀಡಲಾಗುತ್ತದೆ.

ಹಾರ್ಲೆ ಡೇವಿಡ್ಸನ್‌ ಬೈಕ್ ಬೆಲೆಗಳಲ್ಲಿ 2 ಲಕ್ಷಗಿಂತಲೂ ಹೆಚ್ಚು ಕಡಿತ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಐಷಾರಾಮಿ ಬೈಕ್ ಮಾದರಿಗಳಲ್ಲೇ ಅತಿಹೆಚ್ಚು ಬೇಡಿಕೆ ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯಲು ಮುಂದಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಮತ್ತೊಂದು ದಾಖಲೆ ನಿರ್ಮಾಣ ಮಾಡಲಿದೆ.

English summary
Read in Kannada Harley Davidson Fat Boy And Heritage Softail Classic Prices Slashed In India.
Story first published: Monday, September 11, 2017, 15:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark