ಬೆಂಗಳೂರಿನಲ್ಲಿ ಉದ್ಘಾಟನೆಗೊಂಡ ಹಾರ್ಲೆ ಡೇವಿಡ್ಸನ್ ಅತಿದೊಡ್ಡ ಮಾರಾಟ ಮಳಿಗೆ..!!

Written By:

ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಐಷಾರಾಮಿ ಬೈಕ್‌ಗಳಿಗೆ ಬೇಡಿಕೆ ಹೆಚ್ಚಿತ್ತಿದೆ. ಈ ನಿಟ್ಟಿನಲ್ಲಿ ಹಾರ್ಲೆ ಡೇವಿಡ್ಸನ್ ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಗ್ರಾಹಕನ್ನು ಸೆಳೆಯಲು ಉದ್ದೇಶದೊಂದಿಗೆ ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಹೊಸ ಮಾದರಿ ಮಾರಾಟ ಮಳಿಗೆ ಆರಂಭಿಸಿದೆ.

ಬೆಂಗಳೂರಿನಲ್ಲಿ ಹಾರ್ಲೆ ಡೇವಿಡ್ಸನ್ ಅತಿದೊಡ್ಡ ಮಾರಾಟ ಮಳಿಗೆ ಆರಂಭ

ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ 2 ಪ್ರಮುಖ ಮಾರಾಟ ಮಳಿಗೆಗಳನ್ನು ಹೊಂದಿರುವ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಹಾರ್ಲೆ ಡೇವಿಡ್ಸನ್, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮತ್ತೊಂದು ವಿನೂತನ ಮಾರಾಟ ಮಳಿಗೆಯನ್ನು ಉದ್ಘಾಟನೆ ಮಾಡಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಹಾರ್ಲೆ ಡೇವಿಡ್ಸನ್ ಅತಿದೊಡ್ಡ ಮಾರಾಟ ಮಳಿಗೆ ಆರಂಭ

ಬೆಂಗಳೂರಿನ 80 ಫೀಟ್, ಕೋರಮಂಗಲ ರಸ್ತೆಯಲ್ಲಿ ಬಿಸನ್ ಹೆಸರಿನ ಹೊಸ ಹಾರ್ಲೆ ಡೇವಿಡ್ಸನ್ ಮಾರಾಟ ಮಳಿಗೆ ಆರಂಭಗೊಂಡಿದ್ದು, ಬರೋಬ್ಬರಿ 7 ಸಾವಿರ ಚದರ ಅಡಿ ವಿಸ್ತಾರವನ್ನು ಹೊಂದಿದೆ.

ಬೆಂಗಳೂರಿನಲ್ಲಿ ಹಾರ್ಲೆ ಡೇವಿಡ್ಸನ್ ಅತಿದೊಡ್ಡ ಮಾರಾಟ ಮಳಿಗೆ ಆರಂಭ

ಹೀಗಾಗಿ ಹಾರ್ಲೆ ಡೇವಿಡ್ಸನ್ ಹೊಸ ಮಾರಾಟ ಮಳಿಗೆಯು ಕರ್ನಾಟಕದ ಅತಿದೊಡ್ಡ ಐಷಾರಾಮಿ ಬೈಕ್ ಮಾರಾಟ ಮಳಿಗೆ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದು, ಒಂದೇ ಬಾರಿಗೆ 14 ವಿವಿಧ ಮಾದರಿಯ ಬೈಕ್‌ಗಳನ್ನು ಪ್ರದರ್ಶನ ಮಾಡಬಹುದಾದ ಸೌಲಭ್ಯವನ್ನು ಹೊಂದಿದೆ.

ಬೆಂಗಳೂರಿನಲ್ಲಿ ಹಾರ್ಲೆ ಡೇವಿಡ್ಸನ್ ಅತಿದೊಡ್ಡ ಮಾರಾಟ ಮಳಿಗೆ ಆರಂಭ

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಾರ್ಲೆ ಡೇವಿಡ್ಸನ್ ಎಂಡಿ ಪೀಟರ್ ಮೆಕೆಂಜಿ ಹಾಗೂ ಬಿಸನ್ ಮಾರಾಟ ಮಳಿಗೆ ಎಂಡಿ ವಿಶೇಷ್ ಜಯವಂತ್, "ಐಷಾರಾಮಿ ಬೈಕ್ ಮಾರಾಟಕ್ಕೆ ಬೆಂಗಳೂರು ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದಲೇ 3 ನೇ ಮಾರಾಟ ಮಳಿಗೆಯನ್ನು ತೆರೆಯಲಾಗಿದೆ" ಎಂದಿದ್ದಾರೆ.

ಬೆಂಗಳೂರಿನಲ್ಲಿ ಹಾರ್ಲೆ ಡೇವಿಡ್ಸನ್ ಅತಿದೊಡ್ಡ ಮಾರಾಟ ಮಳಿಗೆ ಆರಂಭ

ಇನ್ನು ಹೊಸ ಮಾರಾಟ ಮಳಿಗೆಯಿಂದಾಗಿ ಹಾರ್ಲೆ ಡೇವಿಡ್ಸನ್ ಬೈಕ್ ಮಾರಾಟಕ್ಕೆ ಮತ್ತಷ್ಟು ಅನುಕೂಲಕರವಾಗಲಿದ್ದು, ಗ್ರಾಹಕರು ಹೊಸ ಬೈಕ್ ಕಾಯುವಿಕೆ ಅವಧಿಯು ತಪ್ಪಲಿದೆ. ಜೊತೆಗೆ ಕಡಿಮೆ ಅವಧಿಯಲ್ಲೇ ಬಿಡಿಭಾಗಗಳ ಸೇವೆಯು ಲಭ್ಯವಾಗಲಿದೆ.

ಬೆಂಗಳೂರಿನಲ್ಲಿ ಹಾರ್ಲೆ ಡೇವಿಡ್ಸನ್ ಅತಿದೊಡ್ಡ ಮಾರಾಟ ಮಳಿಗೆ ಆರಂಭ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ಬೆಂಗಳೂರಿನಲ್ಲಿ ಬಿಸನ್ ಮಾರಾಟ ಮಳಿಗೆಯನ್ನು ಹೊರತು ಪಡಿಸಿ ಎರಡು ಪ್ರಮುಖ ಹಾರ್ಲೆ ಡೇವಿಡ್ಸನ್ ಮಾರಾಟ ಮಳಿಗೆಗಳು ಕೂಡಾ ಕಾರ್ಯನಿರ್ವಹಿಸುತ್ತಿದ್ದು, ಬೈಕ್ ಮಾರಾಟ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಮಳಿಗೆಯನ್ನು ಆರಂಭಿಸಲಾಗಿದೆ.

English summary
Read in Kannada about Harley Davidson Inaugurates Third Dealership In Bangalore.
Story first published: Saturday, September 23, 2017, 18:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark