TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಬರಲಿದೆ ಹಿರೋ ಮೋಟೋಕಾರ್ಪ್ ಕರಿಜ್ಮಾ ಹೊಸ ಅವತರಣಿಕೆ
ಸೂಪರ್ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಕರಿಜ್ಮಾ ಸದ್ಯದಲ್ಲೇ ಹೊಸ ಅವತರಣಿಕೆಯೊಂದಿಗೆ ಎಂಟ್ರಿ ನೀಡಲಿದ್ದು, ಈ ಬಗ್ಗೆ ಹಿರೋ ಮೋಟೋಕಾರ್ಪ್ ಅಧಿಕೃತ ಮಾಹಿತಿ ಹೊರಹಾಕಿದೆ.
ಈ ಹಿಂದೆ ಕರಿಜ್ಮಾ ಬೈಕ್ ಆವೃತ್ತಿಗಳ ಮಾರಾಟ ಪ್ರಕ್ರಿಯೆಯನ್ನು ನಿಲ್ಲಿಸಿದ್ದ ಹಿರೋ ಸಂಸ್ಥೆಯು ಇದೀಗ ನೆಕ್ಸ್ಟ್ ಜನರೇಷನ್ ಕರಿಜ್ಮಾ ಬಿಡುಗಡೆಯ ತವಕದಲ್ಲಿದ್ದು, ಬಹುನೀರಿಕ್ಷಿತ ಎಕ್ಸ್‌ಟ್ರಿಮ್ 200ಎಸ್ ಬಿಡುಗಡೆ ನಂತರವಷ್ಟೇ ಹೊಸ ಕರಿಜ್ಮಾ ಪರಿಚಯಿಸಲಿದೆ.
ಹೀಗಾಗಿ ಹೊಸ ಬೈಕ್ ಬಿಡುಗಡೆ ಬಗ್ಗೆ ಉತ್ಸುಕವಾಗಿರುವ ಹಿರೋ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದ್ದು, 2018ರ ಮೂರನೇ ತ್ರೈಮಾಸಿಕ ವೇಳೆಗೆ ಪರಿಚಯಿಸುವ ಇರಾದೆಯಲ್ಲಿದೆ.


ಇನ್ನು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಹಿನ್ನೆಲೆ ಬಿಎಸ್ 6 ಸೌಲಭ್ಯಗಳನ್ನು ಪಡೆದುಕೊಳ್ಳಲಿರುವ ಹೊಸ ಕರಿಷ್ಮಾ ಬೈಕ್, ಝೆಡ್‌ಎಂಆರ್ ಅಡಿಬರಹ ಹೊಂದಿದೆ.
ಕೆಲ ವರದಿಗಳ ಪ್ರಕಾರ ಹಿರೋ ನಿರ್ಮಾಣ ಮಾಡುತ್ತಿರುವ ನೆಕ್ಸ್ಟ್ ಜನರೇಷನ್ ಕರಿಜ್ಮಾ ಆವೃತ್ತಿಯು ಕೇವಲ ಭಾರತೀಯ ಮಾರುಕಟ್ಟೆಗೆ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುವ ಉದ್ದೇಶದಿಂದ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ.
ತಪ್ಪದೇ ಓದಿ- 60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...
ಆದರೂ ಕರಿಜ್ಮಾ ಹೊಸ ಸರಣಿ ನಿರ್ಮಾಣದ ಬಗ್ಗೆ ಪ್ರಕಟಿಸಿರುವ ಹಿರೋ ನಿರ್ಧಾರವು ಸೂಪರ್ ಬೈಕ್ ಪ್ರಿಯರಿಗೆ ಖುಷಿ ನೀಡಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ಗ್ರಾಹಕ ಸ್ನೇಹಿ ಬಣ್ಣದ ಆಯ್ಕೆ ನೀಡಿರುವ ಹೊಸ ಬೈಕ್ ಬೇಡಿಕೆ ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.
ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಮಾರಾಟ ಕುಸಿತ ಮತ್ತು ಎಲ್ಲ ವರ್ಗದ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದ ಹಿನ್ನೆಲೆ ಈ ಹಿಂದೆ ಕರಿಜ್ಮಾ ಮಾರಾಟಕ್ಕೆ ಬ್ರೇಕ್ ಹಾಕಿದ್ದ ಹಿರೋ ಸಂಸ್ಥೆಯು ಬದಲಾದ ಮಾರುಕಟ್ಟೆಯ ಸನ್ನಿವೇಶಗಳಿಗೆ ಅನುಗುಣವಾಗಿ ಕರಿಜ್ಮಾ ಹೊಸ ಬೈಕ್ ನಿರ್ಮಾಣ ಮಾಡಿದೆ ಎನ್ನಬಹುದು.
ತಪ್ಪದೇ ಓದಿ- ಈ ಟಾಪ್ 5 ಬೈಕ್‌ಗಳ ಬೆಲೆ ಐಫೋನ್ ಎಕ್ಸ್ ಬೆಲೆಗಿಂತಲೂ ಅಗ್ಗ ಕಣ್ರಿ..!!
ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ನೆಕ್ಸ್ಟ್ ಬೈಕ್ ಯಾವುದು ಗೊತ್ತಾ?
Trending DriveSpark YouTube Videos
Subscribe To DriveSpark Kannada YouTube Channel - Click Here