ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ನೆಕ್ಸ್ಟ್ ಬೈಕ್ ಯಾವುದು ಗೊತ್ತಾ?

Written By:

ಈ ಹಿಂದೆ ರೈಡರ್ ಮೆನಿಯಾ ಕಾರ್ಯಕ್ರಮದಲ್ಲಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳನ್ನು ಪ್ರದರ್ಶನ ಮಾಡಿ ಸದ್ಯದಲ್ಲೇ ಬಿಡುಗಡೆ ಮಾಡುವ ಬಗ್ಗೆ ಸುಳಿವು ನೀಡಿದ್ದ ರಾಯಲ್ ಎನ್‌ಫೀಲ್ಡ್ ಅದಕ್ಕೂ ಮೊದಲೇ ಮತ್ತೊಂದು ಜನಪ್ರಿಯ ಮಾದರಿಯ ಮುಂದುವರಿದ ಭಾಗವನ್ನು ತನ್ನ ನೆಚ್ಚಿನ ಗ್ರಾಹಕರಿಗೆ ಪರಿಚಯಿಸುತ್ತಿದೆ.

ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ನೆಕ್ಸ್ಟ್ ಬೈಕ್ ಯಾವುದು ಗೊತ್ತಾ?

ಕ್ಲಾಸಿಕ್ ಮೋಟಾರ್ ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಿರುವ ಹಿನ್ನೆಲೆ ತನ್ನ ವ್ಯಾಪರ ಮತ್ತು ವಹಿವಾಟಿನಲ್ಲಿ ಮಹತ್ವದ ಬದಲಾವಣೆ ತಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಟಂಡರ್ ಬರ್ಡ್ 500 ಎಕ್ಸ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ.

ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ನೆಕ್ಸ್ಟ್ ಬೈಕ್ ಯಾವುದು ಗೊತ್ತಾ?

ಬಿಡುಗಡೆ ಉದ್ದೇಶದಿಂದ ಟಂಡರ್‌ಬರ್ಡ್ 500ಎಕ್ಸ್ ಬೈಕ್ ಆವೃತ್ತಿಗಳನ್ನು ಪ್ರಮುಖ ಡೀಲರ್ ಯಾರ್ಡ್‌ಗಳಿಗೆ ಸಾಗಿಸಲಾಗುತ್ತಿದ್ದು, 2018ರ ಆಟೋ ಮೇಳ ನಂತರ ಹೊಸ ಬೈಕ್ ಬಿಡುಗಡೆ ಮಾಡುವ ಬಗ್ಗೆ ರಾಯಲ್ ಎನ್‌ಫೀಲ್ಡ್ ಎದುರು ನೋಡುತ್ತಿದೆ.

Recommended Video - Watch Now!
Bangalore City Police Use A Road Roller To Crush Loud Exhausts
ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ನೆಕ್ಸ್ಟ್ ಬೈಕ್ ಯಾವುದು ಗೊತ್ತಾ?

ಡೀಲರ್ ಯಾರ್ಡ್‌ಗಳಲ್ಲಿ ಸೆರೆ ಸಿಕ್ಕ ಟಂಡರ್‌ಬರ್ಡ್ 500ಎಕ್ಸ್ ಚಿತ್ರಗಳ ಪ್ರಕಾರ ಹೊಸ ಬೈಕ್ ಮಹತ್ವದ ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಬೈಕ್ ವಿನ್ಯಾಸಗಳನ್ನು ಸ್ಪೋರ್ಟ್ ಬೈಕ್‌ನಂತೆ ಸಿದ್ದಪಡಿಸಲಾಗಿದೆ.

ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಲಿರುವ ನೆಕ್ಸ್ಟ್ ಬೈಕ್ ಯಾವುದು ಗೊತ್ತಾ?

ಜೊತೆಗೆ ಟಂಡರ್‌ಬರ್ಡ್ 500ಎಕ್ಸ್ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ವಿಭಾಗದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದ್ದು, ಈ ಮೂಲಕ ಫ್ಯೂಲ್ ಟ್ಯಾಂಕ್ ವಿನ್ಯಾಸವು ಹೊಸ ಬೈಕಿಗೆ ಮತ್ತಷ್ಟು ಮೆರಗು ತಂದಿದೆ ತಪ್ಪಾಗಲಾರದು.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಹೀಗಾಗಿ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ಬೈಕ್ ಮಾದರಿಯನ್ನು ಪ್ರಮುಖ ಮೂರು ಬಣ್ಣಗಳಲ್ಲಿ ಪರಿಚಯಿಸಲಾಗುತ್ತಿದ್ದು, ಫ್ರಂಟ್ ಹಾಗೂ ಬ್ಯಾಕ್ ವೀಲ್ಹ್‌ಗಳಿಗೆ ಡಿಸ್ಕ್ ಬ್ರೇಕ್ ವ್ಯವಸ್ಥೆಯನ್ನು ಕಲ್ಪಿಸಿದೆ.

ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಇನ್ನು ಎಂಜಿನ್ ಸಾಮರ್ಥ್ಯವನ್ನು ಈ ಹಿಂದಿನಂತಯೇ ಮುಂದುವರಿಸಲಾಗಿದ್ದು, 500-ಸಿಸಿ ಸಿಂಗಲ್ ಸಿಲಿಂಡರ್ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ನೀಡಲಾಗಿದೆ. ಹೀಗಾಗಿ ಹಳೆಯ ಆವೃತ್ತಿಯಂತೆ ಹೊಸ ಬೈಕಿನಲ್ಲಿ ಯಾವುದೇ ತಾಂತ್ರಿಕ ಅಂಶಗಳನ್ನು ಬದಲಾವಣೆ ಮಾಡಿಲ್ಲ ಎಂಬುವುದು ಸ್ಪಷ್ಟವಾಗಿದೆ.

ರಾಯಲ್ ಎನ್‌ಫೀಲ್ಡ್ ಟಂಡರ್ ಬರ್ಡ್ ಹಿಂದಿಕ್ಕುತ್ತಾ ಬಜಾಜ್ ಅವೆಂಜರ್ 400 ಕ್ರೂಜರ್?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕ್ಲಾಸಿಕ್ ಬೈಕ್ ನಿರ್ಮಾಣ ಮತ್ತು ಮಾರಾಟ ತನ್ನದೇ ಆದ ಮುನ್ನಡೆ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬದಲಾದ ಮಾರುಕಟ್ಟೆ ಸನ್ನಿವೇಶಗಳಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಹೀಗಾಗಿ ಎಲ್ಲ ವರ್ಗಗಳನ್ನು ಸೆಳೆಯಬಹುದಾದ ಬೈಕ್‌ಗಳ ಅಭಿವೃದ್ಧಿ ಹೆಚ್ಚಿನ ಗಮನಹರಿಸುತ್ತಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Read in Kannada about Royal Enfield Thunderbird 500X Spotted At Dealership.
Story first published: Monday, December 25, 2017, 14:01 [IST]

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark