'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ದ್ವಿಚಕ್ರ ವಾಹನ : ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

Written By:

ಭಾರತದ ಹೆಮ್ಮೆಯ ದ್ವಿಚಕ್ರ ತಯಾರಕ ಕಂಪನಿ ಹೀರೋ ಮೂರನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಸ್ಪ್ಲೆಂಡರ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಜನತೆಯ ಅತಿ ಹೆಚ್ಚು ವಿಶ್ವಾಸ ಕಾಯ್ದುಕೊಂಡ ಬೈಕ್ ಎನ್ನುವ ಖ್ಯಾತಿ ಹೀರೋ ಕಂಪನಿ ಪಡೆದುಕೊಂಡಿದೆ.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಮಾರಾಟದ ಲೆಕ್ಕದಲ್ಲಿ ಹೋಂಡಾ ಆಕ್ಟಿವಾ ಸ್ಕೂಟರನ್ನು ಹಿಂದಿಕ್ಕುವ ಮೂಲಕ ಹೀರೋ ಕಂಪನಿಯು ಮೊದಲ ಸ್ಥಾನಕ್ಕೇರಿದ್ದು, ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಅತಿ ಹೆಚ್ಚು ಮಾರಾಟಗೊಂಡು ಎಲ್ಲರ ಮನ ಗೆದ್ದ ದ್ವಿಚಕ್ರ ವಾಹನ ಎಂಬ ಪ್ರಖ್ಯಾತಿಗೆ ಪಾತ್ರವಾಗಿದೆ. ಕಳೆದ ಬಾರಿ ಈ ಸ್ಥಾನವನ್ನು ಹೋಂಡಾ ಆಕ್ಟಿವಾ ತನ್ನದಾಗಿಸಿಕೊಂಡಿತ್ತು.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಹೀರೋ ಕಂಪನಿ ಸರಿ ಸುಮಾರು 5.9 ಲಕ್ಷ ಸ್ಪ್ಲೆಂಡರ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಂಡು ಮಾಡುವ ಮೂಲಕ ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡು ಗೆಲುವಿನ ನಗೆ ಬೀರುತ್ತಿದೆ.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಸ್ಪ್ಲೆಂಡರ್ ವಾಹನಕ್ಕೆ ಪೈಪೋಟಿ ನೀಡುವ ಲೆಕ್ಕದಲ್ಲಿ ಕೊಂಚ ಮಟ್ಟಿಗೆ ಹಿಂದುಳಿದ ಹೋಂಡಾ ಆಕ್ಟಿವಾ 5.7 ಲಕ್ಷ ಸ್ಕೂಟರ್ ಗಳ ಮಾರಾಟವಾಗುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಎಂದಿನಂತೆ ಅಫನಗಧೀಕರಣದ ಕಾರಣದಿಂದಾಗಿ ಎರಡೂ ವಾಹನಗಳಾದ ಸ್ಪ್ಲೆಂಡರ್ ಮತ್ತು ಹೋಂಡಾ ಆಕ್ಟಿವಾ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಕ್ರಮವಾಗಿ ಶೇಕಡ 9.4 ಮತ್ತು 4.3 ರಷ್ಟು ಮಾರಾಟ ಇಳಿಕೆ ದಾಖಲಿಸಿವೆ.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಹೀರೋ ಮೋಟೋ ಕಾರ್ಪಿನ ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ಮುಖ್ಯಸ್ಥರಾದ ಅಶೋಕ್ ಬಾಸಿನ್ ಮಾತನಾಡಿ " ಅಫನಗಧೀಕರಣದ ಪ್ರಯುಕ್ತ ಕಂಪನಿಯ ಸ್ಪ್ಲೆಂಡರ್ ಬೈಕ್ ಕಡಿಮೆ ಪ್ರಮಾಣದ ಮಾರಾಟ ಧಾಖಲಿಸಿದ್ದು, ಕೆಳ ಮಟ್ಟದವರೆಗೂ ತಲುಪಲು ವಿಫಲವಾಗಿದೆ, ಮುಂದಿನ ತ್ರೈಮಾಸಿಕದಲ್ಲಿ ಈ ರೀತಿಯ ತೊಂದರೆ ಪುನರಾವರ್ತನೆ ಆಗುವುದಿಲ್ಲ ಎಂದು ನಾವು ನಂಬಿದ್ದೇವೆ" ಎಂದರು.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ಮಾತು ಮುಂದುವರೆಸಿ " ಅಫನಗಧೀಕರಣದ ಸಂದರ್ಭದಲ್ಲಿ ಕಂಪನಿಯು ದೇಶವ್ಯಾಪಿ ಇರುವ ರಿಟೇಲ್ ಷೋ ರೂಂ ಗಳಲ್ಲಿ ಪಿಓಎಸ್ ಯಂತ್ರಗಳನ್ನು ಇರಿಸಿ ಮಾರಾಟ ಮಾಡಿದ್ದೂ ಮತ್ತು ಹಲವು ಪರಿಣಮಕಾರಿ ಉದ್ಯಮಶೀಲ ನಿರ್ಧಾರಗಳನ್ನು ಕೈಗೊಂಡು ಗ್ರಾಹಕ ಸ್ನೇಹಿ ವಹಿವಾಟು ನೆಡೆಸಿತ್ತು" ಎಂಬ ವಿಚಾರವನ್ನು ತಿಳಿಸಿದರು.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

"ಈ ಎಲ್ಲಾ ನಿರ್ಧಾರಗಳಿಂದ ಕಂಪನಿಯ ಗಾತ್ರ ಮತ್ತಷ್ಟು ಹೆಚ್ಚಾಗುತ್ತಿದ್ದು, ಗ್ರಾಹಕರ ವಿಶ್ವಾಸ ಮುಂದೆಯೂ ಉಳಿಸಿಕೊಳ್ಳಲಾಗುವುದು" ಅಶೋಕ್ ಬಾಸಿನ್ ಹೇಳಿದರು.

'ಸ್ಪ್ಲೆಂಡರ್' ಅತಿ ಹೆಚ್ಚು ಮಾರಾಟಗೊಂಡ ಬೈಕ್: ಎರಡನೇ ಸ್ಥಾನದಲ್ಲಿ ಹೋಂಡಾ ಆಕ್ಟಿವಾ

ನಮಗೆಲ್ಲರಿಗೂ ತಿಳಿದಿರುವ ಹಾಗೆ ಸ್ಪ್ಲೆಂಡರ್ ಬೈಕ್ ಭಾರತದ ನೆಚ್ಚಿನ ದೇಸಿ ಬೈಕ್ ಆಗಿದ್ದು, ಸರ್ವಿಸ್ ಲೆಕ್ಕದಲ್ಲಿ ಉತ್ಕೃಷ್ಟ ಸೇವೆ ಒದಗಿಸುವ ಬೈಕ್ ಆಗಿದೆ.

English summary
In the third quarter of the current financial year, Hero MotoCorp sold a total of 5,91,017 two-wheelers.
Story first published: Wednesday, March 1, 2017, 18:58 [IST]
Please Wait while comments are loading...

Latest Photos