ಸ್ಮಾರ್ಟ್, ಸ್ಟೈಲಿಷ್ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಚಾಲನಾ ವಿಮರ್ಶೆ

Written By:

'ಸ್ಪ್ಲೆಂಡರ್' ಭಾರತದ ಸರ್ವಕಾಲಿಕ ಶ್ರೇಷ್ಠ ಬೈಕ್ ಗಳಲ್ಲಿ ಒಂದಾಗಿದೆ. ಮೈಲೇಜ್ ಗೆ ಹೆಸರು ಮಾಡಿರುವ ಸ್ಪ್ಲೆಂಡರ್ ಹೀರೊ ಹೋಂಡಾ ಸಾರಥ್ಯದಲ್ಲಿ 1994ನೇ ಇಸವಿಯಲ್ಲಿ ಮೊದಲ ಬಾರಿಗೆ ದೇಶದ ರಸ್ತೆಗೆ ಪ್ರವೇಶಿಸಿತ್ತು. ತದಾ ಬಳಿಕ ದಶಕಗಳಿಂದ ಜನಮೆಚ್ಚುಗೆಗೆ ಪಾತ್ರವಾಗಿರುವ ಸ್ಪ್ಲೆಂಡರ್, ಜನ ಸಾಮಾನ್ಯರ ನೈಜ ಸಾರಥಿ ಎನಿಸಿಕೊಂಡಿದೆ.

2011ರಲ್ಲಿ ಹೋಂಡಾ ಜೊತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ಸ್ಪ್ಲೆಂಡರ್ ಬ್ರಾಂಡ್ ಅಧಿಪತ್ಯವನ್ನು ಸಂಪೂರ್ಣವಾಗಿ ಹೀರೊ ತೆಕ್ಕೆಗೆ ಬಂದಿತ್ತು. ಅಲ್ಲದೆ 2013ರಲ್ಲಿ 'ಐ3ಎಸ್' ಎಂಬ ನೂತನ ಎಂಜಿನ್ ಸ್ಟ್ಯಾರ್ಟ್-ಸ್ಟಾಪ್ ತಂತ್ರಜ್ಞಾನದೊಂದಿಗೆ ಸ್ಪ್ಲೆಂಡರ್ ಮರು ಬಿಡುಗಡೆಗೊಳಿಸಿತ್ತು. ಈಗ ಇನ್ನು ಒಂದು ಹೆಜ್ಜೆ ಮುಂದಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯು ತನ್ನದೇ ಘಟಕದಲ್ಲಿ ಸಂಪೂರ್ಣವಾಗಿ ವಿನ್ಯಾಸ ಹಾಗೂ ಅಭಿವೃದ್ಧಿಗೊಳಿಸಿರುವ ಮೊತ್ತ ಮೊದಲ ಸ್ಪ್ಲೆಂಡರ್ ಐಸ್ಮಾರ್ಟ್ 100 ಸಿಸಿ ಪ್ರಯಾಣಿಕ ಬೈಕನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಸಂಪೂರ್ಣ ಚಾಲನಾ ವಿಮರ್ಶೆಯನ್ನು ಓದುಗರ ಮುಂದಿಡಲಾಗುವುದು.

ವಿನ್ಯಾಸ

ಸ್ಪ್ಲೆಂಡರ್ ಪರಂಪರೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿರುವ 110 ಸಿಸಿ ಐಸ್ಮಾರ್ಟ್ ಬೈಕ್ ನಲ್ಲಿ ಯುವ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸುವ ನಿಟ್ಟಿನಲ್ಲಿ ಸ್ಮಾರ್ಟ್, ಆಧುನಿಕ ಮತ್ತು ನಾವೀನ್ಯತೆ ವಿನ್ಯಾಸ ಶೈಲಿಯ ನೀತಿಯನ್ನು ಅನುಸರಿಸಲಾಗಿದೆ. ನುಣುಪಾಗಿಯೂ ಹೊಳಪಾಗಿರುವ ವಿನ್ಯಾಸ ಮತ್ತು ಸ್ಟೈಲಿಷ್ ಗ್ರಾಫಿಕ್ಸ್ ಪ್ರಮುಖ ಆಕರ್ಷಣೆಯಾಗಿದೆ.

ಮುಂಭಾಗದಲ್ಲಿ ಸಮಕಾಲೀನ ಹೆಡ್ ಲ್ಯಾಂಪ್, ಜೋಡಿ ಬಣ್ಣ ಹಾಗೂ ಹಿಂಭಾಗದಲ್ಲಿ ವಿಭಜಿತ ಸ್ಟೈಲಿಷ್ ಗ್ರಾಬ್ ರೈಲ್ ಕಂಡುಬರಲಿದೆ. ಇನ್ನು ಬದಿಯಲ್ಲಿ ಇಂಧನ ಟ್ಯಾಂಕ್ ಮತ್ತು ಎಂಜಿನ್ ಕೆಳಗಡೆ ಪ್ಲಾಸ್ಟಿಕ್ ಹೋದಿಕೆ ಮತ್ತು ಎಕ್ಸಾಸ್ಟ್ ಗೂ ಕಪ್ಪು ರಕ್ಷಣಾ ಕವಚವನ್ನು ಕೊಡಲಾಗಿದೆ. ಕ್ರೀಡಾತ್ಮಕತೆಗೆ ತಕ್ಕಂತೆ ಎಕ್ಸಾಸ್ಟ್ ಅಂಚಿನಲ್ಲಿ ಕ್ರೋಮ್ ಟಿಪ್ ಕೊಡಲಾಗಿದೆ.

ಎಂಜಿನ್

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿರುವ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ನಲ್ಲಿ ನೂತನ ಬಿಎಸ್ IV, 110 ಸಿಸಿ ಟಾರ್ಕ್ ಆನ್ ಡಿಮ್ಯಾಂಡ್ (ಟಿಒಡಿ) ಎಂಜಿನ್ ಆಳವಡಿಸಲಾಗಿದೆ. ಇದರ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್ 9 ಎನ್ ಎಂ ತಿರುಗುಬಲದಲ್ಲಿ (5500 ಆರ್‌ಪಿಎಂ) 9.4 ಅಶ್ವಶಕ್ತಿಯನ್ನು (7500 ಆರ್‌ಪಿಎಂ) ಉತ್ಪಾದಿಸಲಿದೆ.

ಗೇರ್ ಬಾಕ್ಸ್: ನಾಲ್ಕು ಸ್ಪೀಡ್

ಗೇರ್ ಬದಲಾವಣೆ: N-1-2-3-4

ಮೈಲೇಜ್

ನೂತನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕ್ ಪ್ರತಿ ಲೀಟರ್ ಗೆ 68 ಕೀ.ಮೀ. ಮೈಲೇಜ್ ನೀಡುವಷ್ಟು ಸಮರ್ಥವಾಗಿರಲಿದೆ. ಪ್ರಾರಂಭಿಕ ನಿರ್ವಹಣೆ ಅತ್ಯುತ್ತಮ ಎನಿಸಿದರೂ ಮಿಡ್ ರೇಂಜ್ ನಲ್ಲಿ ಆವೇಗ ಕಳೆದುಕೊಂಡಂತೆ ಭಾಸವಾಗುತ್ತಿದೆ. ಇದಕ್ಕಾಗಿ ವರ್ಧಿತ ಆರ್‌ಪಿಎಂನ ಮೊರೆ ಹೋಗಬೇಕಿದೆ.

ವೇಗವರ್ಧನೆ: 7.45 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ.

ಐಡಲ್-ಸ್ಟ್ಯಾರ್ಟ್-ಸ್ಟಾಪ್ ಸಿಸ್ಟಂ (i3S)

ನೂತನ ಸ್ಪ್ಲೆಂಡರ್ ಐಸ್ಮಾರ್ಟ್ ನಲ್ಲಿ ಐಡಲ್ ಸ್ಟ್ಯಾರ್ಟ್ ಸ್ಟಾಪ್ ಸಿಸ್ಟಂ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಟ್ರಾಫಿಕ್ ಮುಂತಾದ ಪ್ರದೇಶಗಳಲ್ಲಿ ಇಂಧನ ಉಳಿತಾಯ ನಿಟ್ಟಿನಲ್ಲಿ ಐಡಲ್ ಸ್ಟಾರ್ಟ್-ಸ್ಟಾಪ್ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?

ಚಾಲಕ ನ್ಯೂಟ್ರಲ್ ಗೆ ಗೇರ್ ಹಾಕಿದಾಗ ಐದು ಸೆಕೆಂಡುಗಳ ಬಳಿಕ ಎಂಜಿನ್ ಸ್ವಯಂಚಾಲಿತವಾಗಿ ಆಫ್ ಆಗಲಿದೆ. ಬಳಿಕ ಕ್ಲಚ್ ಅದುಮಿದರೆ ವಾಹನದ ಎಂಜಿನ್ ನಿಧಾನವಾಗಿ ಚಲಿಸಲು ಬಿಡಲಿದೆ. ಇದರಿಂದ ಎಂಜಿನ್ ಉಳಿತಾಯವಾಗಲಿದ್ದು, ಹೆಚ್ಚಿನ ಇಂಧನ ಕ್ಷಮತೆ ಕಾಪಾಡಿಕೊಳ್ಳಲು ನೆರವಾಗಲಿದೆ. ಬಲಬದಿಯ ಹ್ಯಾಂಡಲ್ ಬಾರ್ ನಲ್ಲಿ ಕೊಟ್ಟಿರುವ ಸ್ವಿಚ್ ಗೇರ್ ಮುಖಾಂತರ ಇದನ್ನು ನಿಯಂತ್ರಿಸಬಹುದಾಗಿದೆ.

ಹ್ಯಾಂಡ್ಲಿಂಗ್

ನೂತನ ಸ್ಪ್ಲೆಂಡರ್ ಐಸ್ಮಾರ್ಟ್ ನಲ್ಲಿರುವ ನಯವಾದ ಎಂಜಿನ್ ಮತ್ತು ಮೃದುವಾದ ಗೇರ್ ಬದಲಾವಣೆಗಳು ಹೆಚ್ಚಿನ ಪ್ರಶಂಸೆಗೆ ಪಾತ್ರವಾಗುತ್ತಿದೆ. ದಶಕಗಳಿಂದಲೂ ಅತ್ಯುತ್ತಮ ಎಂಜಿನ್ ದಕ್ಷತೆಗಾಗಿ ಹೆಸರು ಮಾಡಿರುವ ಸ್ಪ್ಲೆಂಡರ್ ಹೊಸ ಆವೃತ್ತಿಯಲ್ಲೂ ಇದು ಮುಂದುವರಿದಿದೆ. ಕಡಿಮೆ ಆರ್ ಪಿಎಂನಲ್ಲಿ ವೈಬ್ರೇಷನ್ ಭಾಸವಾಗುದಿಲ್ಲವಾದರೂ ವೇಗ ಹೆಚ್ಚಿಸುವಾಗ ಅನುಭವಕ್ಕೆ ಬರಲಿದೆ.

ಚಾಲಕ ಸೀಟು ಆರಾಮದಾಯಕವೆನಿಸಿದ್ದು, ಅತ್ಯುತ್ತಮ ಸಸ್ಪೆನ್ಷನ್ ವ್ಯವಸ್ಥೆಯನ್ನು ಜೋಡಣೆ ಮಾಡಲಾಗಿದೆ. ತಿರುವುನಲ್ಲೂ ಸಾಮಾನ್ಯ ಉತ್ತಮ ಹ್ಯಾಂಡ್ಲಿಂಗ್ ಇದು ಪ್ರದಾನ ಮಾಡುತ್ತದೆ. ಜೋಡಿ ವರ್ಣದೊಂದಿಗೆ ಮಿರರ್ ಗೋಚರತೆಯು ಪರಿಣಾಮಕಾರಿಯೆನಿಸಿಕೊಂಡಿದೆ. ಸ್ಪರ್ದಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಡ್ರಮ್ ಬ್ರೇಕ್ ಆಳವಡಿಸಿರುವುದರಿಂದ ಡಿಸ್ಕ್ ಬ್ರೇಕ್ ಕೊರತೆ ಕಾಡಲಿದೆ.

ವೈಶಿಷ್ಟ್ಯಗಳು

ಪ್ರಯಾಣಿಕ ಬೈಕ್ ಆಗಿರುವ ಹೊರತಾಗಿಯೂ ಗರಿಷ್ಠ ವೈಶಿಷ್ಟ್ಯಗಳಿಗೆ ಆದ್ಯತೆ ಕೊಡಲಾಗಿದೆ. ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ (ಎಎಚ್ ಒ), ಟಾರ್ಕ್ ಆನ್ ಡಿಮ್ಯಾಂಡ್ ಎಂಜಿನ್ (ಬಿಎಸ್ IV), ಹೊಸ ಚಾಸೀ ಮತ್ತು ಫ್ರೇಮ್, ನೂತನ ಐ3ಎಸ್ ತಂತ್ರಜ್ಞಾನ, ಬೆಸ್ಟ್ ಇನ್ ಕ್ಲಾಸ್ ಮೈಲೇಜ್, ಪವರ್, ಆಕ್ಸಿಲೇಟರ್, ಹೊಸ ಮಫ್ಲರ್ ಮತ್ತು ಉದ್ದವಾದ ಸೀಟು ಮುಂತಾದ ವೈಶಿಷ್ಟ್ಯಗಳು ಕಂಡುಬರಲಿದೆ.

ತಾಂತ್ರಿಕತೆಗಳು

ಎಂಜಿನ್

ವಿಧ: ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್, ಒಎಚ್‌ಸಿ

ಸಾಮರ್ಥ್ಯ: 109.15 ಸಿಸಿ

ಗರಿಷ್ಠ ಪವರ್: 7 Kw @ 7500 RPM

ಗರಿಷ್ಠ ಟಾರ್ಕ್: 9 Nm @ 5500 RPM

ಚಾಸೀ ಫ್ರೇಮ್: ಟ್ಯೂಬಲರ್ ಡಬಲ್ ಕ್ರಾಡಲ್

ಸಸ್ಪೆನ್ಷನ್

ಮುಂಭಾಗ: ಟೆಲಿಸ್ಕಾಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್

ಹಿಂಭಾಗ: ಸ್ವಿಂಗ್ ಆರ್ಮ್ ಜೊತೆ ಹೊಂದಾಣಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್

ಬ್ರೇಕ್

ಮುಂಭಾಗ: ಡ್ರಮ್, 130 ಎಂಎಂ

ಹಿಂಭಾಗ: ಡ್ರಮ್, 110 ಎಂಎಂ

ಚಕ್ರಗಳು

ಮುಂಭಾಗ: ಟ್ಯೂಬ್ ಲೆಸ್

ಹಿಂಭಾಗ: ಟ್ಯೂಬ್ ಲೆಸ್

ಆಯಾಮ (ಎಂಎಂ)

ಉದ್ದ: 2015

ಅಗಲ: 770

ಎತ್ತರ: 1055

ಚಕ್ರಾಂತರ: 1245

ಗ್ರೌಂಡ್ ಕ್ಲಿಯರನ್ಸ್: 165

ಇಂಧನ ಟ್ಯಾಂಕ್ ಸಾಮರ್ಥ್ಯ: 8.5 ಲೀಟರ್

ರಿಸರ್ವ್: 2 ಲೀಟರ್

ಭಾರ: 115 ಕೆ.ಜಿ

ಪೇಲೋಡ್: 130 ಕೆ.ಜಿ

ಬಣ್ಣಗಳು

ಸಿಲ್ವರ್ ಆಂಡ್ ಬ್ಲ್ಯಾಕ್, ರೆಡ್ ಆಂಡ್ ಬ್ಲ್ಯಾಕ್, ಬ್ಲೂ ಆಂಡ್ ಬ್ಲ್ಯಾಕ್, ಸ್ಪೋರ್ಟ್ಸ್ ರೆಡ್.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೊಂದಿಗೆ ಲಭ್ಯವಿರುವ ನೂತನ ಸ್ಪ್ಲೆಂಡರ್ ಐಸ್ಮಾರ್ಟ್, ಎಡಭಾಗದಲ್ಲಿ ಸ್ಪೀಡೋಮೀಟರ್ ಮತ್ತು ಫ್ಯೂಯಲ್ ಗೇಜ್ ಇರಲಿದೆ. ಅಂತೆಯೇ ಬಲಬದಿಯಲ್ಲಿ ವೇಗಮಾಪಕ ಸೂಚಿಸುವ ಡಿಜಿಟಲ್ ಕನ್ಸಾಲ್ ವ್ಯವಸ್ಥೆಯನ್ನು ಕೊಡಲಾಗಿದೆ. ಇದರ ಜೊತೆಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ನಿಮ್ಮನ್ನು ಎಚ್ಚರಿಸಲಿದ್ದು, ಸುರಕ್ಷಿತ ಚಾಲನೆಯನ್ನು ಖಾತ್ರಿಪಡಿಸಲಿದೆ.

ಸ್ವಿಚ್ ಗಳು

ಎಡಬದಿಯಲ್ಲಿ ಹೆಡ್ ಲೈಟ್ ಹೈ ಮತ್ತು ಲೊ ಬೀಮ್, ಹೆಡ್ ಲೈಟ್ ಪಾಸ್ ಸ್ವಿಚ್, ಇಂಡಿಕೇಟರ್ ಮತ್ತು ಹಾರ್ನ್ ಸ್ವಿಚ್ ಗಳಿವೆ. ಹಾಗೆಯೇ ಬಲಬದಿಯಲ್ಲಿ ಎಂಜಿನ್ ಸ್ಟ್ಯಾರ್ಟರ್, ಐ3ಎಸ್ ಸ್ವಿಚ್ ಗಳನ್ನು ಜೋಡಣೆ ಮಾಡಲಾಗಿದೆ.

ಮುನ್ನಡೆಗಳು

ನಯವಾದ ಎಂಜಿನ್,

ಮೃದುವಾದ ಗೇರ್ ಬಾಕ್ಸ್,

ಆಕರ್ಷಕ ವಿನ್ಯಾಸ,

ಆರಾಮ ಮತ್ತು ಅನುಕೂಲ,

ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,

ಸಸ್ಪೆನ್ಷನ್,

ಸೈಡ್ ಸ್ಟ್ಯಾಂಡ್ ಎಚ್ಚರಿಕೆ,

ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್,

ಐ3ಎಸ್ ತಂತ್ರಜ್ಞಾನ

ಹಿನ್ನಡೆಗಳು

ಗೇರ್ ಬದಲಾವಣೆ ಗುಣಮಟ್ಟತೆ,

ವೇಗವರ್ಧನೆ,

ಡಿಸ್ಕ್ ಬ್ರೇಕ್ ಅಭಾವ

ಅಂತಿಮ ತೀರ್ಪು

ಪ್ರಯಾಣಿಕ ಬೈಕ್ ವಿಭಾಗದಲ್ಲಿ ಅತಿ ಹೆಚ್ಚು ಹೆಸರು ಮಾಡಿರುವ ಸ್ಪ್ಲೆಂಡರ್ ಹೀರೊ ಜೈತ್ರಯಾತ್ರೆಯನ್ನು ಮುಂದುವರಿಸಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 53,800 ರು.ಗಳಲ್ಲಿ ಮಾರುಕಟ್ಟೆ ತಲುಪಿರುವ ಹೀರೊ ಸ್ಪ್ಲೆಂಡರ್, ಭಾರತ್ ಸ್ಟೇಜ್ IV ಎಮಿಷನ್ ಗುಣಮಟ್ಟವನ್ನು ಕಾಪಾಡಿಕೊಂಡಿರುವ ಮೊದಲ ಬೈಕೆಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಜೈಪುರದಲ್ಲಿರುವ ಹೀರೊ ಸೆಂಟರ್ ಇನ್ನೋವೇಷನ್ ಆಂಡ್ ಟೆಕ್ನಾಲಜಿ (ಸಿಐಟಿ) ಅಧ್ಯಯನ ಮತ್ತು ಅಭಿವೃದ್ಧಿ ಘಟಕದಲ್ಲಿ ನೂತನ ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ 110 ಸಿಸಿ ಬೈಕನ್ನು ನಿರ್ಮಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಬೈಕ್ ಪ್ರೇಮಿಗಳ ಮನ ಸೊರೆಗೈಯಲಿದೆ.

English summary
Hero Splendor iSmart 110 Road Test Review — The Smartest Commuter Yet?
Please Wait while comments are loading...

Latest Photos

X