ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

Written By:

ಜುಲೈ 1ರಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಯಾಗಿದ್ದು, ಪ್ರಮುಖ ವಾಹನ ಉತ್ಪಾದನಾ ಸಂಸ್ಥೆಯಾದ ಹೋಂಡಾ ತನ್ನ ಸ್ಕೂಟರ್‌ಗಳ ಮೇಲಿನ ಬೆಲೆಗಳನ್ನು ಕಡಿಗೊಳಿಸಿದೆ.

To Follow DriveSpark On Facebook, Click The Like Button
ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

ದೇಶಾದ್ಯಂತ ಏಕರೂಪದ ಸರಕು ಮತ್ತು ಸೇವಾ ತೆರಿಗೆ ನೀತಿ ಜಾರಿಯಾಗಿದ್ದು, ಸಣ್ಣ ವಾಹನಗಳ ಉತ್ಪಾದನೆ ಮತ್ತು ಮಾರಾಟದ ಮೇಲೆ ಪ್ರತಿಕೂಲಕರ ಪರಿಣಾಮ ಬೀರಿದೆ. ಹೀಗಾಗಿ ಹೋಂಡಾ ತನ್ನ ಪ್ರಮುಖ ಸ್ಕೂಟರ್ ಮಾದರಿಗಳ ಮೇಲಿನ ಬೆಲೆಗಳನ್ನು ಕಡಿತ ಮಾಡಿದೆ.

ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

ಜಿಎಸ್‌ಟಿ ಪ್ರಕಾರ 350ಸಿಸಿ ಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕ್ ಮತ್ತು ಸ್ಕೂಟರ್‌ಗಳ ಬೆಲೆ ಹೆಚ್ಚಳಗೊಂಡಿದ್ದು, 350 ಸಿಸಿ ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕ್‌ಗಳ ಬೆಲೆಗಳು ಅಗ್ಗವಾಗಿವೆ.

ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

ಈ ಹಿನ್ನೆಲೆ ಬೆಲೆ ಕಡಿತ ಮಾಡಿರುವ ಹೋಂಡಾ, ಆಕ್ಟಿವಾ 4ಜಿ ಸ್ಕೂಟರ್ ಬೆಲೆಯಲ್ಲಿ ರೂ. 442 ಮತ್ತು ಆಕ್ಟಿವಾ 125 ಸ್ಕೂಟರ್ ಬೆಲೆಯಲ್ಲಿ ರೂ. 443 ಕಡಿತ ಮಾಡಿದೆ.

ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

ಇದರಿಂದಾಗಿ ದೆಹಲಿ ಎಕ್ಸ್‌ಶೋರಂ ಪ್ರಕಾರ ಆಕ್ಟಿವಾ 4ಜಿ ಸದ್ಯದ ಬೆಲೆ ದೆಹಲಿ ಎಕ್ಸ್‌ಶೋರಂ ರೂ.50,730 ಆಗಿದ್ದು, ಆಕ್ಟಿವಾ 125 ಬೆಲೆ ರೂ.61,361ಕ್ಕೆ ಕಡಿಮೆಯಾಗಿದೆ.

ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

ಅದೇ ರೀತಿಯಾಗಿ ಹೋಂಡಾ ಡಿಯೋ ಬೆಲೆಯಲ್ಲಿ ರೂ.328 ಕಡಿಮೆಯಾಗಿದ್ದು, ಪ್ರಸ್ತುತ ದರ ಪಟ್ಟಿ ಪ್ರಕಾರ ರೂ. 49,239(ದೆಹಲಿ ಎಕ್ಸ್‌ಶೋರಂ) ಗಳಿಗೆ ಲಭ್ಯವಿದೆ.

ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

ಇನ್ನು ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ಹೋಂಡಾ ಆಕ್ಟಿವಾ ಬೆಲೆಗಳಲ್ಲಿ ರೂ.900 ದಿಂದ ರೂ.1 ಸಾವಿರ ವರೆಗೆ ಡಿಸ್ಕೌಂಟ್ ದೊರೆಯಲಿದ್ದು, ಪ್ರಸ್ತುತ ದರಪಟ್ಟಿ ಪ್ರಕಾರ ರೂ.70,200ಗಳಿಗೆ(ಆನ್ ರೋಡ್) ಲಭ್ಯವಿದೆ.

ಜಿಎಸ್‌ಟಿ ಜಾರಿ ನಂತರದ ಹೋಂಡಾ ಸ್ಕೂಟರ್‌ ಬೆಲೆಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಜಿಎಸ್‌ಟಿ ನಂತರ ಇತರೆ ಸ್ಕೂಟರ್ ಮತ್ತು ಬೈಕ್ ಮಾದರಿಗಳ ಬೆಲೆ ಕಡಿತಕ್ಕೆ ಹೋಲಿಕೆ ಮಾಡಿದರೆ ಹೋಂಡಾ ಬೆಲೆಗಳು ಇಳಿಕೆಯಾಗಿರುವ ದೊಡ್ಡ ಮೊತ್ತವಲ್ಲ. ಆದರೂ ಉತ್ತಮ ಕಾರ್ಯಕ್ಷಮತೆ ಹಿನ್ನೆಲೆ ಗ್ರಾಹಕರನ್ನು ಸೆಳೆಯುವಲ್ಲಿ ಹೋಂಡಾ ಉತ್ಪನ್ನಗಳು ಮುಂಚೂಣಿಯಲ್ಲಿರುವುದು ಅದರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.

English summary
Read in Kannada about Honda Activa Prices Drop Post GST.
Please Wait while comments are loading...

Latest Photos