ಕೆಂಗೇರಿಯಲ್ಲಿರುವ ಈ ಹೋಂಡಾ ಷೋ ರೂಂ ಹೇಗೆ ಮೋಸ ಮಾಡ್ತಿದೆ ಗೊತ್ತಾ ?

Written By:

ನಿಮಗೆ ಯಾವಾದರೂ ವ್ಯಕ್ತಿ ಅತ್ವ ಸಂಸ್ಥೆ ಮೋಸ ಮಾಡಿದರೆ ಅಬ್ಬಬ್ಬಾ ಅಂದ್ರೆ ಏನ್ ಮಾಡ್ತೀರಾ ? ಅವರ ಹತ್ರ ಹೋಗಿ ಕೂಗಾಡ್ತೀರಾ, ಇನ್ನು ಹೆಚ್ಚು ಅಂದ್ರೆ ಆಗಿರೋ ಮೋಸಕ್ಕೆ ಪೊಲೀಸ್ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್ ಕೊಡ್ತೀರಾ...

To Follow DriveSpark On Facebook, Click The Like Button
ಬೆಂಗಳೂರಿನ ಷೋ ರೂಂಗೆ ಹೋಗಿ, ಶೂಟ್ ಮಾಡ್ಬೇಕಾ ? ಎಂದ ಮಾಜಿ ಸೈನಿಕ

ಆದ್ರೆ, ಬೆಂಗಳೂರಿನ ಕೆಂಗೇರಿಯ ಹೊರವಲಯದಲ್ಲಿರುವ ಮೋಟಾರ್‌ಸೈಕಲ್ ಷೋ ರೂಂ ಒಂದು ಮೋಸ ಮಾಡಿದೆ ಎಂಬ ಕಾರಣಕ್ಕೆ ಮಾಜಿ ಸೈನಿಕರೊಬ್ಬರು ಷೋರೂಂಗೆ ಗನ್ ತೆಗೆದುಕೊಂಡು ಬಂದು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನೆಡೆದಿದೆ.

ಬೆಂಗಳೂರಿನ ಷೋ ರೂಂಗೆ ಹೋಗಿ, ಶೂಟ್ ಮಾಡ್ಬೇಕಾ ? ಎಂದ ಮಾಜಿ ಸೈನಿಕ

ವಾಹನ ನೋಂದಣಿ ವಿಚಾರದಲ್ಲಿ ಬೈಕ್‌ ಷೋ ರೂಂ ಮಾಲೀಕನೊಂದಿಗೆ ಜಗಳ ಮಾಡಿಕೊಂಡ ಮಾಜಿ ಸೈನಿಕರೊಬ್ಬರು ಗುಂಡು ಹಾರಿಸಿ ಬೆದರಿಸಿದ ಘಟನೆ ಶನಿವಾರ ಸಂಜೆ ಕೆಂಗೇರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ಷೋ ರೂಂಗೆ ಹೋಗಿ, ಶೂಟ್ ಮಾಡ್ಬೇಕಾ ? ಎಂದ ಮಾಜಿ ಸೈನಿಕ

ಕಳೆದ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನೆಡೆದಿದ್ದು, ಜಗದೀಶ್ 32 ಎಂಎಂ ಪಿಸ್ತೂಲ್‌ ಮೂಲಕ ಕೊಠಡಿಯ ಮೇಲ್ಛಾವಣೆಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ.

ಬೆಂಗಳೂರಿನ ಷೋ ರೂಂಗೆ ಹೋಗಿ, ಶೂಟ್ ಮಾಡ್ಬೇಕಾ ? ಎಂದ ಮಾಜಿ ಸೈನಿಕ

ಕೆಂಗೇರಿಯ ಷೋ ರೂಂ ಏಪ್ರಿಲ್ 1ರಿಂದ ನಿಷೇಧಿಸಲ್ಪಟ್ಟ ಬಿಎಸ್ III ಎಂಜಿನ್ ಹೊಂದಿರುವ 48 ಬೈಕುಗಳನ್ನು ಮಾರಾಟ ಮಾಡಿತ್ತು, ಆದರೆ ಸುಪ್ರೀಂ ಕೋರ್ಟ್ ಬಿಎಸ್ III ದ್ವಿಚಕ್ರ ವಾಹನಗಳ ಮಾರಾಟವನ್ನು ನಿಷೇಧಿಸಿದ್ದರೂ ಸಹ ಈ ಷೋ ರೂಂ ಅನಧಿಕೃತವಾಗಿ ಮಾರಾಟ ಮಾಡಿದ್ದೇ ಇಷ್ಟೆಲ್ಲಾ ತೊಂದರೆಗೆ ಕಾರಣ.

ಬೆಂಗಳೂರಿನ ಷೋ ರೂಂಗೆ ಹೋಗಿ, ಶೂಟ್ ಮಾಡ್ಬೇಕಾ ? ಎಂದ ಮಾಜಿ ಸೈನಿಕ

ಸ್ಯಾಟಲೈಟ್ ಮೋಟಾರ್ಸ್ ಎಂಬ ಹೆಸರಿನ ಹೋಂಡಾ ಅಧಿಕೃತ ಮಾರಾಟ ಷೋ ರೂಂ ಒಂದು ಬಿಎಸ್ III ದ್ವಿಚಕ್ರದ ವಾಹನಗಳನ್ನು ತಾತ್ಕಾಲಿಕ ನೋಂದಣಿ ಮಾಡಿ ಗ್ರಾಹಕರನ್ನು ವಂಚಿಸುತ್ತಿತ್ತು ಎಂದು ಗ್ರಾಹಕರು ಆರೋಪಿಸಿದ್ದಾರೆ.

ಬೆಂಗಳೂರಿನ ಷೋ ರೂಂಗೆ ಹೋಗಿ, ಶೂಟ್ ಮಾಡ್ಬೇಕಾ ? ಎಂದ ಮಾಜಿ ಸೈನಿಕ

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರ ಬಳಿ ಈ ಬಗ್ಗೆ ವಿಚಾರಿಸಿದ್ದು, ಈ ದ್ವಿಚಕ್ರ ವಾಹನಗಳು ಇಲ್ಲಿಯವರೆಗೂ ನೋಂದಾಯಿಸಲ್ಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಷೋ ರೂಂಗೆ ಹೋಗಿ, ಶೂಟ್ ಮಾಡ್ಬೇಕಾ ? ಎಂದ ಮಾಜಿ ಸೈನಿಕ

ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಮಾಜಿ ಸೈನಿಕ ಜಗದೀಶ್‌ (35) ರನ್ನು ಗಸ್ತಿನಲ್ಲಿದ್ದ ಮುಖ್ಯಪೇದೆ ಚಂದ್ರಪ್ಪ ಬಂಧಿಸಿದ್ದಾರೆ. ಜತೆಗೆ ಜಗದೀಶ್‌ ಬಳಿಯಿದ್ದ ಪರವಾನಿಗೆ ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.

English summary
an ex-serviceman walked up to a motorcycle dealer in Kengeri, on the outskirts of Bangalore, Karnataka, pulled out a gun and opened fire.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark