ಹೆಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

Written By:

ನಮ್ಮ ಜನಕ್ಕೆ ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ರೂಲ್ಸ್‌ಗಳನ್ನು ಬ್ರೇಕ್ ಮಾಡ್ತಾನೆ ಇರುತ್ತಾರೆ. ವರ್ಷದ ಹಿಂದಷ್ಟೇ ಬೈಕ್ ಸವಾರರು ಮತ್ತು ಹಿಂಬದಿ ಸವಾರರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದ್ದ ಉನ್ನತ ನ್ಯಾಯಾಲಯ, ಕಾಯ್ದೆ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸಿಸು ಆದೇಶ ನೀಡಿತ್ತು. ಆದ್ರೆ ಬಹುತೇಕ ಜನ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡೋದನ್ನು ನಾವು ನಿತ್ಯವೂ ನೋಡುತ್ತಲೇ ಇರುತ್ತೇವೆ. ಇದಕ್ಕಾಗಿ ಮೈಸೂರು ಪೊಲೀಸರು ಹೊಸದೊಂದು ರೂಲ್ಸ್ ತಂದಿದ್ದಾರೆ.

ಹಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

ಇಷ್ಟು ದಿನಗಳ ಕಾಲ ಹೆಲ್ಮೆಟ್ ಧರಿಸದ ಬೈಕ್ ಸವಾರಿಗೆ ಸರಿಯಾಗಿಯೇ ಬಿಸಿ ಮುಟ್ಟಿಸಿರುವ ರಾಜ್ಯ ಪೊಲೀಸರು, ಭಾರೀ ಪ್ರಮಾಣದ ದಂಡ ವಸೂಲಿ ಮಾಡಿದ್ದರು. ಆದ್ರೆ ಮೈಸೂರು ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ,ದಂಡದ ಜೊತೆ ಹೆಲ್ಮೆಟ್ ಧರಿಸದೇ ಸವಾರಿ ಮಾಡುವ ಬೈಕ್‌ಗಳನ್ನು ಸೀಜ್ ಮಾಡುತ್ತಿದ್ದಾರೆ.

ಹಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

ಫೆಬ್ರವರಿ 26ರಿಂದಲೇ ಈ ಹೊಸ ಕಾನೂನು ಕಾರ್ಯರೂಪಕ್ಕೆ ತಂದಿರುವ ಮೈಸೂರು ಪೊಲೀಸರು, ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುವರಿಗೆ ಸರಿಯಾಗಿಯೇ ಬುದ್ದಿಕಲಿಸುತ್ತಿದ್ದಾರೆ. ಇದುವರೆಗೆ ಸುಮಾರು 400 ಬೈಕ್‌ಗಳನ್ನು ಸೀಜ್

ಮಾಡಿರುವ ಪೊಲೀಸರು, ಈ ಹಿಂದಿನ ಮೊತ್ತಕ್ಕಿಂತ ದುಬಾರಿ ಮೊತ್ತದ ದಂಡವನ್ನು ವಸೂಲಿ ಮಾಡುತ್ತಿದ್ದಾರೆ.

ಹಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

ಹೊಸ ನಿಯಮದ ಕುರಿತು ಮಾತನಾಡಿರುವ ಮೈಸೂರು ಪೊಲೀಸ್ ಆಯುಕ್ತ ಎ.ಎಸ್.ರಾವ್, "ಹೆಲ್ಮೆಟ್ ಧರಿಸದೇ ಕಾನೂನು ಉಲ್ಲಂಘನೆ ಮಾಡಿದರೆ ಅಂತಹ ಬೈಕ್‌ಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ಜೊತೆಗೆ ಬೈಕ್ ಸವಾರರಿಗೆ ಕಾನೂನು ಪಾಲನೆ ಅರಿವು ಮೂಡಿಸಲಾಗುತ್ತಿದ್ದು, ನಿಯಮ ಅನುಸಾರವಾಗಿ ದಂಡವಿಧಿಸಲಾಗುತ್ತಿದೆ" ಎಂದಿದ್ದಾರೆ.

ಹಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

ಇನ್ನು ಹೊಸ ಕಾನೂನು ಜಾರಿ ಕುರಿತು ಸಮರ್ಥನೆ ಮಾಡಿಕೊಂಡಿರುವ ಪೊಲೀಸ್ ಆಯುಕ್ತರು, ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಯಾವುದೇ ಮಾಲಾಜಿಲ್ಲದೇ ದಂಡ ವಿಧಿಸುವಂತೆ ಆದೇಶಿಸಿದ್ದಾರೆ. ಇದರಿಂದಾಗಿ ಹೆಲ್ಮೆಟ್ ಇಲ್ಲದೇ ಬೈಕ್ ಸವಾರಿ ಮಾಡುವವರಿಗೆ ಭಾರೀ ಪ್ರಮಾಣದ ದಂಡ ಕಾದಿದೆ.

ಹಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

ಇದಲ್ಲದೇ ಮೈಸೂರು ಪೊಲೀಸರು ಇನ್ನೂ ಕೆಲವು ಹೊಸ ಹೊಸ ರೂಲ್ಸ್‌ಗಳನ್ನು ಕಟ್ಟುನಿಟ್ಟಾಗಿ ಜಾರಿ ತಂದಿದ್ದಾರೆ. ಬೈಕ್ ವಿಮೆ ಮಾಡಿಸದೇ ಇದ್ದರೂ ಕೂಡಾ ನೀವು ದಂಡ ತೆರಬೇಕಾಗಿದ್ದು, ಇಲ್ಲವಾದಲ್ಲಿ ನಿಮ್ಮ ಬೈಕ್ ಸೀಜ್ ಆಗಲಿದೆ.

ಹಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

ಕೇವಲ ಹೆಲ್ಮೆಟ್ ಧರಿಸದೇ ಇರುವ ಬೈಕ್ ಸವಾರರಿಗೆ ಅಷ್ಟೇ ದಂಡ ವಿಧಿಸದೇ, ಬೈಕ್ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡುವುದು ಮತ್ತು ಸಿಗ್ನಲ್ ಜಂಪ್ ಮಾಡುವುದು ಕಂಡುಬಂದಲ್ಲಿ ಭಾರೀ ಮೊತ್ತದ ದಂಡ ವಿಧಿಸಲಾಗುತ್ತಿದೆ.

ಹಲ್ಮೆಟ್ ಇಲ್ಲದ ಪ್ರಯಾಣ ದಂಡಕ್ಕೆ ಆಹ್ವಾನ: ಮೈಸೂರಿನಲ್ಲಿ ಅದು ಇನ್ನೂ ದುಬಾರಿ..!!

ಆದ್ರೆ ಅದೇನೇ ಇರಲಿ, ಹೆಲ್ಮೆಟ್ ಧರಿಸಿ ಬೈಕ್ ಸವಾರಿ ಮಾಡುವುದು ನಮ್ಮ ಸುರಕ್ಷತೆಗಾಗಿಯೇ ಹೊರತು ಬೇರೆಯವರಿಗಾಗಿ ಅಲ್ಲ. ಹೀಗಾಗಿ ಕೇವಲ ದಂಡ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸದೇ, ನಿಮ್ಮ ಸುರಕ್ಷಾ ದೃಷ್ಠಿಯಿಂದ ಕಾನೂನು ಪಾಲನೆ ಮಾಡುವುದು ಒಳಿತು.

ಹೊಚ್ಚ ಹೊಸ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Mysore Police are implementing a new rule to stop the violation of helmet rule. The two-wheeler will be detained if the rider or pillion is not wearing a helmet.
Please Wait while comments are loading...

Latest Photos