ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

Written By:

ಭಾರತೀಯ ದ್ವಿಚಕ್ರ ವಾಹನ ತಯಾರಕ ಟಿವಿಎಸ್‌ ಸಂಸ್ಥೆಯ ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳು ಸೋರಿಕೆಯಾಗಿವೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ಅಪಾಚೆ ಆರ್‌ಟಿಆರ್ 160 ಬೈಕ್ ಭಾರತೀಯ ರಸ್ತೆಗಳಲ್ಲಿ ಈಗಾಗಲೇ ಪರೀಕ್ಷೆಗೆ ಒಳಪಟ್ಟಿದ್ದು, ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿ ಟಿವಿಎಸ್‌ನ ಈ ಜನಪ್ರಿಯ ಬೈಕ್ ರಹಸ್ಯ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಸೋರಿಕೆಯಾಗಿವೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ಟಿವಿಎಸ್ ಕಂಪನಿ, ಭಾರತದಲ್ಲಿ ತನ್ನ ಅಪಾಚೆ ಆರ್‌ಟಿಆರ್ 160 ಬೈಕಿನ ನವೀಕರಿಸಿದ ಮಾದರಿಯನ್ನು ಬಿಡುಗಡೆಗೊಳಿಸಲು ಈಗಾಗಲೇ ಸಕಲ ತಯಾರಿ ನೆಡೆಸಲಾಗುತ್ತಿದೆ ಎನ್ನಲಾಗಿದೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ಸದ್ಯ ಹೊಸ ಅಪಾಚೆ ಆರ್‌ಟಿಆರ್ 160 ಬೈಕ್ ಚಿತ್ರಗಳನ್ನು Xbhp ಪೋಸ್ಟ್ ಮಾಡಿದ್ದು, ಈ ಮೋಟಾರ್ ಸೈಕಲ್ ಅಪಾಚೆ ಬೈಕಿನ 200 ಮಾದರಿಯ 4Vನ ಡಿಟ್ಯೂನ್ಡ್ ಆವೃತ್ತಿಯನ್ನು ಅವಲಂಬಿತವಾಗಿದೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ನವೀನ ಮಾದರಿಯ ಅಪಾಚೆ ಆರ್‌ಟಿಆರ್ 160 ಬೈಕ್ ತನ್ನ ಹಿರಿಯ ಸಹೋದರ ಎಂದೇ ಕರೆಸಿಕೊಳ್ಳುವ ಅಪಾಚೆ 200 4V ಬೈಕಿನಿಂದ ಹೆಚ್ಚಿನ ಸ್ಟೈಲಿಶ್, ತಂತ್ರಜ್ಞಾನ ಮತ್ತು ಇನ್ನೂ ಹೆಚ್ಚಿನ ಅಂಶಗಳನ್ನು ಎರವಲು ಪಡೆದುಕೊಂಡಿದೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ಟಿವಿಎಸ್ ಆರ್‌ಟಿಆರ್ 160 ಬೈಕ್ ಮೊನೊ ಶಾಕ್ ಸೂಸ್ಪೆನ್‌ಷನ್, ಎಲ್ಇಡಿ ಟೈಲ್ ಲೈಟ್, ಡಿಜಿಟಲ್ ಸಲಕರಣೆ ಕ್ಲಸ್ಟರ್, ಸಿಂಗಲ್ ಪೀಸ್ ಸೀಟ್ ಮತ್ತು ಸ್ಕಿನ್ನಿಯರ್ ಟೈರ್‌ಗಳನ್ನು ಒಳಗೊಂಡಿದೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ಬಿಡುಗಡೆಗೆ ಸಿದ್ದವಾಗಿರುವ ಟಿವಿಎಸ್ ಆರ್‌ಟಿಆರ್ 160 ಬೈಕ್ ಏರ್ ಕೋಲ್ಡ್ ಎಂಜಿನ್ ವಿರುದ್ಧವಾಗಿ ಎಣ್ಣೆ ತಂಪಾಗುವ ಎಂಜಿನ್ ಹೊಂದಿದೆ. ಈ ಬೈಕಿನ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳನ್ನು ತೆಗೆದುಹಾಕಿ ಸಿಂಗಲ್ ಪೀಸ್ ಸೆಟ್‌ಅಪ್ ಅಳವಡಿಸಲಾಗಿದೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ಈ ಮೋಟಾರ್‌ಸೈಕಲ್ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂಭಾಗದಲ್ಲಿ ಡ್ರಮ್ ಪಡೆದುಕೊಳ್ಳುತ್ತದೆ ಹಾಗು ಟಿವಿಎಸ್ ಸಂಸ್ಥೆ ಹಿಂಭಾಗದ ಡಿಸ್ಕ್ ಬ್ರೇಕ್ ಆಯ್ಕೆಯಾಗಿ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಅಪಾಚೆ ಆರ್‌ಟಿಆರ್ 160 ಬೈಕಿನ ಸ್ಪೈ ಚಿತ್ರಗಳ ಸೋರಿಕೆ

ಹೊಸ ಅಪಾಚೆ ಆರ್‌ಟಿಆರ್ 160 ಬೈಕ್ ಬಿಡುಗಡೆಯಾದ ನಂತರ ಟಿವಿಎಸ್ ಅಪಾಚೆ ಆರ್‌ಟಿಆರ್ 180 ಬೈಕ್ ಸ್ಥಗಿತಗೊಳಿಸಬಹುದೆಂಬ ವರದಿ ಇದ್ದು, ಟಿವಿಎಸ್ ಈ ಬಗ್ಗೆ ಯಾವುದೇ ರೀತಿಯ ದೃಢೀಕರಣ ನೀಡಿಲ್ಲ.

English summary
Indian two-wheeler maker TVS is all set to update the Apache RTR 160 in India. The motorcycle was already spotted testing on the Indian roads.
Story first published: Wednesday, July 12, 2017, 14:50 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark