ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650..!!

Written By:

ಕ್ಲಾಸಿಕ್ ಮಾದರಿಯ ಬೈಕ್‌ಗಳನ್ನು ಉತ್ಪಾದನೆ ಮಾಡುವಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕಾಲಕ್ಕೆ ತಕ್ಕಂತೆ ವಿವಿಧ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡುತ್ತಿದ್ದು, ಇದೀಗ ಮಾರ್ಡನ್ ಕ್ಲಾಸಿಕ್ ಮಾದರಿಯಾದ ಕಾಂಟಿನೆಂಟಲ್ ಜಿಟಿ 650 ಹೊಸ ಆವೃತ್ತಿಯನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿದೆ.

ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ಕಾಂಟಿನೆಂಟಲ್ ಜಿಟಿ 650..!!

ಇದಕ್ಕೂ ಮೊದಲು ಇಟಾಲಿಯ ಮಿಲಾನ್‌ನಲ್ಲಿ ನಡೆಯುತ್ತಿರುವ ಇಐಸಿಎಂಎ ಆಟೋ ಮೇಳದಲ್ಲಿ ಕಾಂಟಿನೆಂಟಲ್ ಜಿಟಿ 650 ಪ್ರದರ್ಶನ ಮಾಡಿರುವ ರಾಯಲ್ ಎನ್‌ಫೀಲ್ಡ್, ಹೊಸ ಬೈಕಿನಲ್ಲಿ ನ್ಯೂ ಪ್ಯಾರಾಲೆಲ್ ಟ್ವಿನ್ ಎಂಜಿನ್ ಅಳವಡಿಕೆ ಮಾಡಿರುವ ಮತ್ತೊಂದು ವಿಶೇಷ ಎನ್ನಬಹುದು.

ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ಕಾಂಟಿನೆಂಟಲ್ ಜಿಟಿ 650..!!

ಕಾಂಟಿನೆಂಟಲ್ ಜಿಟಿ 650 ಮಾದರಿಯು ರಾಯಲ್ ಎನ್‌ಫೀಲ್ಡ್ ಉತ್ಪಾದಿತ ಈ ಹಿಂದಿನ ಮಾದರಿಗಳಿಂತ ಶೇ.95ರಷ್ಟು ಹೊಸತನದಿಂದ ಕೂಡಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಬಣ್ಣಗಳಲ್ಲಿ ಹೊಸ ಬೈಕ್ ಖರೀದಿಗೆ ಲಭ್ಯವಾಗಲಿವೆ.

Recommended Video - Watch Now!
Bajaj Pulsar NS200 ABS Launched In India - DriveSpark
ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ಕಾಂಟಿನೆಂಟಲ್ ಜಿಟಿ 650..!!

ಎಂಜಿನ್ ಸಾಮರ್ಥ್ಯ

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಹೊಸ ಆವೃತ್ತಿಯು 648 ಸಿಸಿ ಎಂಜಿನ್ ಹೊಂದಿದ್ದು, 46.3-ಬಿಎಚ್‌ಪಿ ಮತ್ತು 52-ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದನೆ ಮಾಡಬಲ್ಲ ಸಾಮರ್ಥ್ಯ ಹೊಂದಿವೆ.

ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ಕಾಂಟಿನೆಂಟಲ್ ಜಿಟಿ 650..!!

ಜೊತೆಗೆ ಪ್ರತಿ ಗಂಟೆಗೆ 112 ಕಿಮಿ ವೇಗದ ಮೀತಿಯನ್ನು ಪಡೆದುಕೊಂಡಿದ್ದು, ಕೆಫೆ ರೇಸರ್ ಮಾದರಿಯಲ್ಲೇ ಹೊಸ ವಿನ್ಯಾಸಗಳನ್ನು ಅಳವಡಿಕೆ ಮಾಡಿರುವುದು ಐಷಾರಾಮಿ ಕ್ಲಾಸಿಕ್ ಬೈಕ್‌ಗಳ ಸಾಲಿನಲ್ಲಿ ಕಾಂಟಿನೆಂಟಲ್ ಜಿಟಿ 650 ಬೈಕಿಗೆ ಹೊಸ ಇಮೇಜ್ ನೀಡಿದೆ.

ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ಕಾಂಟಿನೆಂಟಲ್ ಜಿಟಿ 650..!!

ಲಭ್ಯವಿರುವ ಬಣ್ಣಗಳು

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಮೂರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಮೊದಲನೆಯದು ಸಿ ನಿಮ್ಫ್ ಎಂದು ಕರೆಯಲ್ಪಡುವ ಹೊಳೆಯುವ ನೀಲಿ ಛಾಯೆಯನ್ನು ಹೊಂದಿದೆ.

ತಪ್ಪದೇ ಓದಿ-ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!

ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ಕಾಂಟಿನೆಂಟಲ್ ಜಿಟಿ 650..!!

ಇನ್ನು ಎರಡನೇ ಆಯ್ಕಯಲ್ಲಿ ಹೊಸ ಕೆಫೆ ರೇಸರ್‌ನ ಬ್ಲ್ಯಾಕ್ ಮ್ಯಾಜಿಕ್ ಛಾಯೆಯಲ್ಲಿ ಆಯ್ಕೆ ಮಾಡಬಹುದಾಗಿದ್ದು, ಮೂರನೇಯದಾಗಿ ಐಸ್ ಕ್ವಿನ್ ಬಣ್ಣದಲ್ಲಿ ಲಭ್ಯವಿರಲಿದೆ. ಇದು ಘನೀಕೃತ ಬಿಳಿ ಬಣ್ಣದ ವಿನ್ಯಾಸ ಪಡೆದಿದೆ.

ಇಐಸಿಎಂಎ ಆಟೋ ಮೇಳದಲ್ಲಿ ಅನಾವರಣಗೊಂಡ ಕಾಂಟಿನೆಂಟಲ್ ಜಿಟಿ 650..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸದ್ಯ ಯುರೋಪ್ ಮಾರುಕಟ್ಟೆಗಳಲ್ಲಿ ಕೆಫೆ ರೇಸರ್‌ಗಳ ಜನಪ್ರಿಯತೆಯಿಂದ ಪ್ರೇರಣೆ ಹೊಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಸುಧಾರಿತ ತಂತ್ರಜ್ಞಾನ ಸೌಲಭ್ಯವನ್ನ ಹೊಂದಿರುವ ಕಾಂಟಿನೆಂಟಲ್ ಜಿಟಿ 650 ಸರಣಿಗಳನ್ನು ಪರಿಚಯಿಸುತ್ತಿದೆ ಎನ್ನಬಹುದು.

Trending On DriveSpark Kannada:

ಬಜಾಜ್ ಅವೆಂಜರ್ 150 ಬೈಕಿಗೆ ಸ್ಪರ್ಧೆ ನೀಡುವ ಸುಜುಕಿ ಇಂಟ್ರುಡರ್ 150 ಬೈಕ್ ಬಿಡುಗಡೆ

ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

English summary
Read in Kannada about Royal Enfield Continental GT 650 Revealed.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark