ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

Written By:

ಅವರೆಲ್ಲಾ ಜಮ್ಮು ಕಾಶ್ಮೀರದ ಮನಾಲಿಗೆ ಟ್ರೆಕ್ಕಿಂಗ್‌ಗೆ ಅಂತಾ ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ಗಳೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಅಂದುಕೊಂಡತೆ ಪ್ರವಾಸ ಮುಗಿಸಿ ಇದೀಗ ತಮ್ಮ ಊರಿಗೂ ವಾಪಸ್ ಕೂಡಾ ಬಂದಿದ್ದಾರೆ. ಆದ್ರೆ ತಮ್ಮ ನೆಚ್ಚಿನ ಬೈಕ್‌ಗಳನ್ನು ವಾಪಸ್ ತರಲು ಲಾಜಿಸ್ಟಿಕ್ ಸಂಸ್ಥೆಯೊಂದನ್ನು ನೆಚ್ಚಿಕೊಂಡಿದ್ದೆ ಅವಾಂತರಕ್ಕೆ ಕಾರಣವಾಗಿದೆ.

To Follow DriveSpark On Facebook, Click The Like Button
ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

ಹೌದು.. ಆ ಯುವಕರು ಮೂಲತಃ ಕೇರಳದ ಕೊಚ್ಚಿಯವರು. ಕಳೆದ ವಾರ ಪ್ರವಾಸಕ್ಕೆಂದು ಮನಾಲಿಗೆ ತೆರಳಿದ್ದರು. ಹೋಗುವಾಗ ಬೈಕ್‌ನಲ್ಲೇ ಪ್ರವಾಸ ಬೆಳೆಸಿದ್ದ ಯುವಕರ ತಂಡ. ಪ್ರವಾಸ ಮುಗಿಸಿ ವಾಪಸ್ ಬರುವಾಗ ತಮ್ಮ ಬೈಕ್‌ಗಳೊಂದಿಗೆ ಪ್ರಯಾಣ ಬೆಳೆಸಲು ಸಾಧ್ಯವಾಗಿಲ್ಲ. ಹೀಗಾಗಿ ತಮ್ಮ ಬೈಕ್‌ಗಳನ್ನು ಕೇರಳಕ್ಕೆ ತಲುಪಿಸಲು ಲಾಜಿಸ್ಟಿಕ್ ಕಂಪನಿಯೊಂದನ್ನು ಸಂಪರ್ಕಿಸಿದ್ದರು.

ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

ಅಂದುಕೊಂಡಂತೆ ನಿಗದಿ ಅವಧಿಯಲ್ಲಿ ತಮ್ಮ ಊರುಗಳಿಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ತಲುಪಿಸಿರುವ ಗಾಟಿ-ಕೆವಿ ಎನ್ನುವ ಲಾಜಿಸ್ಟಿಕ್ ಸಂಸ್ಥೆಯು ಬೈಕ್ ಮಾಲೀಕರಿಗೆ ಶಾಕ್ ನೀಡಿದೆ.

ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

ಯಾಕೇಂದ್ರೆ ಮನಾಲಿಯಿಂದ ಬಂದ ಲಾಜಿಸ್ಟಿಕ್ ವಾಹನದಲ್ಲಿನ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ಸ್ಥಿತಿಗತಿಗಳನ್ನು ಕಂಡು ಬೈಕ್ ಮಾಲೀಕರಿಗೆ ನಂಬಲು ಸಾಧ್ಯವಾಗಿಲ್ಲ. ಇದು ನಮ್ಮ ಬೈಕ್ ಹೌದು ಅಲ್ವೋ ಅನ್ನುವಷ್ಟು ಬದಲಾಗಿ ಹೋಗಿದ್ದವು.

ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

ಅದ್ಯಾವೋ ಪರಿ ವೇಗವಾಗಿ ಲಾಜಿಸ್ಟಿಕ್ ವಾಹನ ಚಾಲನೆ ಮಾಡಿದ್ದರೋ ಏನೋ ಗೊತ್ತಿಲ್ಲಾ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಸಂಪೂರ್ಣವಾಗಿ ಜಖಂಗೊಂಡು ಗುಜುರಿ ಸೇರೋ ಪರಿಸ್ಥಿತಿಯಲ್ಲಿವೆ.

ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

ಬೈಕ್ ಇಂಡಿಕೇಟರ್, ಹೆಡ್ ಲ್ಯಾಂಪ್, ಬಂಪರ್, ಹ್ಯಾಂಡಲ್, ಪೆಡಲ್, ಫ್ಯೂಲ್ ಟ್ಯಾಂಕ್ ಎಲ್ಲವೂ ಜಖಂಗೊಂಡಿದ್ದು, ಲಕ್ಷಾಂತರ ರೂಪಾಯಿ ಕೊಟ್ಟು ಬೈಕ್ ಖರೀದಿಸಿದ ಮಾಲೀಕರು ರೊಚ್ಚಿಗೆ ಏಳುವಂತೆ ಮಾಡಿದೆ.

ಲಾಜಿಸ್ಟಿಕ್‌ ಕಂಪನಿ ನಂಬಿದ ರಾಯಲ್ ಎನ್‌ಫೀಲ್ಡ್ ಮಾಲೀಕರಿಗೆ ಕಾದಿತ್ತು ಶಾಕ್..!!

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬೈಕ್ ಮಾಲೀಕರೊಬ್ಬರು, ತಮಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ನೀಡಬೇಕು ಇಲ್ಲವಾದ್ರೆ ಕೇಸ್ ದಾಖಲಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

2017 Triumph Tiger Explorer XCx Launched In India | In Tamil - DriveSpark தமிழ்

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡದ ಗಾಟಿ-ಕೆವಿ ಸಂಸ್ಥೆಯು ನಂಬಿದ ಗ್ರಾಹಕರಿಗೆ ಮೋಸ ಮಾಡಿದ್ದು, ಈ ಬಗ್ಗೆ ಹಲವರು ಆಕ್ರೋಶ ಕೂಡಾ ವ್ಯಕ್ತಪಡಿಸಿದ್ದಾರೆ.

English summary
This Happened When Motorcycles Transported To Manali. Read in Kannada
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark