ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

Written By:

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಸುಜುಕಿ, ತನ್ನ ಜನಪ್ರಿಯ ಆಕ್ಸೆಸ್ 125 ಸ್ಕೂಟರ್‌ನ ವಿಶೇಷ ಆವೃತ್ತಿ ಬಿಡುಗಡೆಗೆ ಸಜ್ಜುಗೊಂಡಿದ್ದು, ಪ್ರಮುಖ ಎರಡು ಬಣ್ಣಗಳಲ್ಲಿ ಸಿದ್ದಗೊಂಡಿರುವ ಆಕ್ಸೆಸ್ 125 ಸ್ಕೂಟರ್ ಚಿತ್ರಗಳು ಬಿಡುಗಡೆಗೂ ಮುನ್ನ ಸೋರಿಕೆಯಾಗಿವೆ.

To Follow DriveSpark On Facebook, Click The Like Button
ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

ನೂತನ ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿಯ ಸ್ಕೂಟರ್ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಆದ್ರೆ ಕಾಸ್ಮೆಟಿಕ್ ಬದಲಾವಣೆಗಳು ಕಂಡುಬರಲಿದ್ದು, ಹೆಚ್ಚಿನ ಕ್ಲಾಸಿಕ್ ಶೈಲಿಯನ್ನು ಕಾಪಾಡಿಕೊಂಡಿದೆ.

ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

ಪ್ರಮುಖ ಎರಡು ಹೊಸ ಬಣ್ಣಗಳಲ್ಲಿ ಸಿದ್ದಗೊಂಡಿರುವ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿಯು ಮ್ಯಾಟ್ ಫಿಬ್ರೈನ್ ಗ್ರೇ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್‌ನಲ್ಲಿ ಲಭ್ಯವಿರಲಿದ್ದು, ವಿಶೇಷ ಆವೃತ್ತಿಯ ಸ್ಕೂಟರ್‌ನ ವೈಶಿಷ್ಟ್ಯಗಳು ಪ್ರಸ್ತುತ ಲಭ್ಯವಿರುವ ಮಾದರಿಯನ್ನೇ ಹೋಲುತ್ತವೆ.

ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

ನೂತನ ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿಯಲ್ಲಿ ಕಂಡುಬಂದಿರುವ ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳೆಂದರೆ ಕ್ರೋಮ್ ನಿಂದ ಸುತ್ತುವರಿಯಲ್ಪಟ್ಟ ರಿಯರ್ ವ್ಯೂ ಮಿರರ್, ಕೆಂಗಂದು ಬಣ್ಣದ ಲೆಥರ್ ಸೀಟು ಕವರ್, ವಿಶೇಷ ಎಡಿಷನ್ ಲಾಂಛನಗಳು ಹಾಗೂ ಕಂದು ವರ್ಣದ ಫೂಟ್ ಬೋರ್ಡ್ ಕಂಡುಬರಲಿದೆ.

ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

ಸ್ಟ್ಯಾಂಡರ್ಡ್ ಮಾದರಿಯಂತೆ ಬೆಳ್ಳಿ ಬಣ್ಣದ ಲೋಹಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಕ್ರೋಮ್ ಸ್ಪರ್ಶದ ಹೆಡ್ ಲೈಟ್ ಕ್ಲಸ್ಟರ್ ಹಾಗೂ ಎಕ್ಸಾಸ್ಟ್ ಸಹ ಕ್ರೋಮ್ ಹಾಗೂ ಅಲ್ಯೂಮಿನಿಯಂನಿಂದ ಸುತ್ತುವರಿಯಲ್ಪಡಲಿದೆ.

ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

ಇತರೆಲ್ಲ ವೈಶಿಷ್ಟ್ಯಗಳು ಸಮಾನವಾಗಿರಲಿದ್ದು, ಅನಲಾಗ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಲ್ಪ್ ಸ್ಟ್ಯಾರ್ಟ್, ಸೀಟು ಕೆಳಗಡೆ ಸ್ಟೋರೆಜ್ ಜಾಗ, ಒನ್ ಪ್ರೆಸ್ ಲಾಕ್ ವ್ಯವಸ್ಥೆ ಹಾಗೂ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಗಳು ಇರಲಿದೆ.

ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

ನೂತನ ಸುಜುಕಿ ಆಕ್ಸೆಸ್ 125 ವಿಶೇಷ ಆವೃತ್ತಿಯು 124 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 10.2 ಎನ್ ಎಂ ತಿರುಗುಬಲದಲ್ಲಿ 8.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸೋರಿಕೆಯಾದ ಸುಜುಕಿ ಆಕ್ಸೆಸ್ 125 ಸ್ಪೆಷಲ್ ಆವೃತ್ತಿ ಹೇಗಿದೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಭಾರತದಲ್ಲಿ ಮಾರಾಟ ಮಾಡುತ್ತಿರುವ ಸ್ಕೂಟರ್ ಗಳ ಪೈಕಿ ಅತಿ ಹೆಚ್ಚು ಯಶಸ್ಸು ಪಡೆದಿರುವ ಮಾದರಿಗಳಲ್ಲಿ ಆಕ್ಸೆಸ್ 125 ಒಂದಾಗಿದೆ. ಇದನ್ನೇ ಗಮನದಟ್ಟಿಟ್ಟುಕೊಂಡಿರುವ ಸಂಸ್ಥೆಯು ವಿಶೇಷ ಆವೃತ್ತಿಯನ್ನು ನೆಚ್ಚಿನ ಗ್ರಾಹಕರಿಗಾಗಿ ಒದಗಿಸುತ್ತಿದೆ.

Read more on ಸುಜುಕಿ suzuki
English summary
Read in Kannada about Suzuki Access 125 Special Edition With New Paint Scheme Leaked.
Please Wait while comments are loading...

Latest Photos