ಬಿಡುಗಡೆಗೆ ಹತ್ತು ದಿನ ಮಾತ್ರ ಬಾಕಿ- ಸುಜುಕಿ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು..!!

ಇನ್ನು ಹತ್ತು ದಿನಗಳಲ್ಲಿ ಬಿಡುಗಡೆಗಾಗಿ ಸಿದ್ಧಗೊಂಡಿರುವ ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಬೈಕ್ ಬ್ರೌಷರ್(ಕರಪತ್ರ) ಸೋರಿಕೆಯಾಗಿದ್ದು, ಇದರ ಬೆನ್ನೆಲ್ಲೇ ಇದೀಗ ಸುಜುಕಿ ಬೈಕ್ ವಿತರಕರು ಬುಕ್ಕಿಂಗ್ ಕೂಡಾ ಆರಂಭಿಸಿದ್ದಾರೆ.

By Praveen

ಇನ್ನು ಹತ್ತು ದಿನಗಳಲ್ಲಿ ಬಿಡುಗಡೆಗಾಗಿ ಸಿದ್ಧಗೊಂಡಿರುವ ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಬೈಕ್ ಬ್ರೌಷರ್(ಕರಪತ್ರ) ಸೋರಿಕೆಯಾಗಿದ್ದು, ಇದರ ಬೆನ್ನೆಲ್ಲೇ ಇದೀಗ ಸುಜುಕಿ ಬೈಕ್ ವಿತರಕರು ಬುಕ್ಕಿಂಗ್ ಕೂಡಾ ಆರಂಭಿಸಿದ್ದಾರೆ.

ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು

ಬಿಡುಗಡೆಗಾಗಿ ಸಿದ್ಧಗೊಳ್ಳುತ್ತಿರುವ ಸುಜುಕಿ ಜಿಕ್ಸರ್ ಎಸ್ಎಫ್ ಬೈಕ್ ಬ್ರೌಷರ್ ನಿನ್ನೇಯಷ್ಟೇ ಸೋರಿಕೆಯಾಗಿದ್ದು, ಎಬಿಎಸ್(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ) ನೊಂದಿಗೆ ಅಭಿವೃದ್ಧಿ ಹೊಂದಿರುವ ಹೊಸ ಹಲವು ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ.

ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು

ಈ ಹಿನ್ನೆಲೆ ರೂ.1 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಿರುವ ಸುಜುಕಿ ಅಧಿಕೃತ ಡಿಲರ್ಸ್‌ಗಳು, ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದಾರೆ.

ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು

ಜಿಕ್ಸರ್ ಎಸ್ಎಫ್ ಫ್ಯೂಲ್ ಇಂಜೆಕ್ಟಡ್ ಆವೃತ್ತಿಯಲ್ಲಿ ಮಾತ್ರವೇ ಎಬಿಎಸ್ ಸೌಲಭ್ಯವನ್ನು ಕಲ್ಪಿಸಿರುವ ಸುಜುಕಿ ಸಂಸ್ಥೆಯು, ಜಿಕ್ಸರ್ ಎಫ್ಐ ಎನ್ನುವ ಮತ್ತೊಂದು ಬೈಕ್ ಆವೃತ್ತಿಯನ್ನು ಕೂಡಾ ವಿಶೇಷವಾಗಿ ಅಭಿವೃದ್ಧಿ ಮಾಡಿದೆ.

ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು

ಎಂಜಿನ್ ಸಾಮರ್ಥ್ಯ

154 ಸಿಸಿ ಫ್ಯೂಲ್ ಇಂಜೆಕ್ಟಡ್ ಎಂಜಿನ್ ಹೊಂದಿರುವ ಜಿಕ್ಸರ್ ಆವೃತ್ತಿಗಳು 14.5-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು

ಜೊತೆಗೆ ತ್ರಿ ಕಲರ್ ಪೇಂಟ್ ಸ್ಕಿಮ್, ವಿನೂತನ ಲೊಗೊ ಮಾದರಿ ಮತ್ತು ಅತ್ಯುತ್ತಮ ಗ್ರಾಫಿಕ್ಸ್ ಪಡೆದುಕೊಂಡಿರುವ ಜಿಕ್ಸರ್ ಎಸ್ಎಫ್, ಪ್ರಸ್ತುತ ಮಾರುಕಟ್ಟೆಯಲ್ಲಿನ ಅನುಗುಣವಾಗಿ ಬದಲಾವಣೆ ಪಡೆದುಕೊಂಡಿದೆ.

Recommended Video

Honda Africa Twin: Features And Driving Modes Explained - DriveSpark
ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಕ್ಸರ್ ಆವೃತ್ತಿಯು ರೂ.93,032ಕ್ಕೆ ಲಭ್ಯವಿದ್ದು, ಎಬಿಎಸ್ ಸೇರಿದಂತೆ ವಿವಿಧ ಬದಲಾವಣೆ ಪಡೆದುಕೊಂಡಿರುವ ಜಿಕ್ಸರ್ ಎಸ್ಎಫ್ ಬೆಲೆಗಳು 1.15 ಲಕ್ಷ ದಿಂದ 1.20 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಸುಜುಕಿ ಬಹುನೀರಿಕ್ಷಿತ ಜಿಕ್ಸರ್ ಎಸ್ಎಫ್ ಖರೀದಿಗೆ ಬುಕ್ಕಿಂಗ್ ಶುರು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕೇಂದ್ರ ಸರ್ಕಾರ ಹೊಸ ನಿಯಮಾನುಸಾರ 2018 ಏಪ್ರಿಲ್‌ನಿಂದ 125ಸಿಸಿ ಮೇಲ್ಪಟ್ಟ ಬೈಕ್‌ಗಳಿಗೆ ಎಬಿಎಸ್ ಅಳವಡಿಕೆ ಕಡ್ಡಾಯವಾಗಲಿದ್ದು, ಈ ಹಿನ್ನಲೆ ಸುಜುಕಿ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಜಿಕ್ಸರ್ ಎಲ್ಲಾ ಆವೃತ್ತಿಗಳನ್ನು ಎಬಿಎಸ್‌ನೊಂದಿಗೆ ಬಿಡುಗಡೆ ಮಾಡಬೇಕಿದೆ.

Most Read Articles

Kannada
Read more on ಸುಜುಕಿ suzuki
English summary
Read in Kannada about Suzuki Commence Bookings For Gixxer SF ABS.
Story first published: Friday, August 4, 2017, 10:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X