ಬೈಕ್ ಮಾರಾಟದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ ಸುಜುಕಿ

Written By:

ದೇಶಿಯ ಮಾರುಕಟ್ಟೆಯಲ್ಲಿ ಉತ್ತಮ ಬೈಕ್ ವಹಿವಾಟು ನಡೆಸಿರುವ ಸುಜುಕಿ ಇಂಡಿಯಾ ಸಂಸ್ಥೆಯು ಸೆಪ್ಟೆಂಬರ್ ಅವಧಿಯಲ್ಲಿ ಶೇ. 33 ರಷ್ಟು ಪ್ರಗತಿ ಸಾಧಿಸಿದ್ದು, ಈ ಕುರಿತಾ ರೀಪೋರ್ಟ್ ಕಾರ್ಡ್ ಇಲ್ಲಿದೆ ನೋಡಿ.

ಬೈಕ್ ಮಾರಾಟದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಜಿಎಸ್‌ಟಿ ಜಾರಿ ನಂತರ ಬೈಕ್ ಉತ್ಪನ್ನಗಳ ಮಾರಾಟದಲ್ಲಿ ಪ್ರಗತಿ ಕಾಣುತ್ತಿರುವ ಸುಜುಕಿ ಸಂಸ್ಥೆಯು ಶೇ.33ರಷ್ಟು ಪ್ರಗತಿ ಸಾಧಿಸಿದ್ದು, ಸೆಪ್ಟೆಂಬರ್ ಅವಧಿಯಲ್ಲಿ ಒಟ್ಟು 57,469 ಬೈಕ್ ಮಾದರಿಗಳನ್ನು ಮಾರಾಟ ಮಾಡಿ ಮುಂಚೂಣಿ ಬೈಕ್ ಸಂಸ್ಥೆಗಳಿಗೆ ತೀವ್ರ ಸ್ಪರ್ಧೆ ಒಡ್ಡುತ್ತಿದೆ.

ಬೈಕ್ ಮಾರಾಟದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಇನ್ನು ಕಳೆದ 2016ರ ಸೆಪ್ಟೆಂಬರ್ ಅವಧಿಯಲ್ಲಿ ಕೇವಲ 38, 510 ಬೈಕ್‌ಗಳನ್ನು ಮಾರಾಟ ಮಾತ್ರ ಶಕ್ತವಾಗಿದ್ದ ಸುಜುಕಿ ಮೋಟಾರ್ ಸಂಸ್ಥೆಯು ಈ ಬಾರಿ ಶೇ.33 ರಷ್ಟು ಹೆಚ್ಚುವರಿಯಾಗಿ ಬೈಕ್ ಮಾರಾಟ ಮಾಡಿದೆ.

Recommended Video - Watch Now!
Aprilia SR 150 Race Edition Walkaround Review | DriveSpark
ಬೈಕ್ ಮಾರಾಟದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ ಸುಜುಕಿ

2017ರ ಸೆಪ್ಟೆಂಬರ್ ಅವಧಿಯಲ್ಲಿ ಮಾರಾಟ ಮಾಡಿರುವ ಒಟ್ಟು 57,469 ಬೈಕ್‌ಗಳಲ್ಲಿ 50,785 ಬೈಕ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಭೀಕರಿಯಾಗಿದ್ದು, ಇನ್ನುಳಿದ 6684 ಬೈಕ್‌ಗಳನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡಲಾಗಿದೆ.

ಬೈಕ್ ಮಾರಾಟದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಇದಲ್ಲದೇ ಬೈಕ್ ಮಾರಾಟ ಹೆಚ್ಚಳಕ್ಕಾಗಿ ಸುಜುಕಿ ಕೂಡಾ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ವಿವಿಧಡೆ 13 ಹೊಸ ಡೀಲರ್ಸ್‌ಗಳನ್ನು ತೆರೆಯಲಾಗಿದ್ದು, 467 ತಾತ್ಕಾಲಿಕ ಬೈಕ್ ಮಾರಾಟ ಕೇಂದ್ರಗಳನ್ನು ಪರಿಚಯಿಸಲಾಗಿದೆ.

ಬೈಕ್ ಮಾರಾಟದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಹೀಗಾಗಿ ಸುಜುಕಿ ನಿರ್ಮಾಣದ ಸೂಪರ್ ಬೈಕ್, ಮಧ್ಯಮ ಗಾತ್ರದ ಸೂಪರ್ ಬೈಕ್‌ಗಳು ಮತ್ತು ಸ್ಕೂಟರ್ ಆವೃತ್ತಿಗಳು ಹೆಚ್ಚು ಮಾರಾಟಗೊಂಡಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಅಷ್ಟೇ ಅಲ್ಲದೇ ವಿದೇಶಿ ಮಾರುಕಟ್ಟೆಯಲ್ಲೂ ತನ್ನ ಪ್ರಭಾವ ಬೀರುವ ಮೂಲಕ ರಫ್ತು ಪ್ರಮಾಣದಲ್ಲೂ ಏರಿಕೆ ಕಂಡಿದೆ.

ಬೈಕ್ ಮಾರಾಟದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ ಸುಜುಕಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕಳೆದ 3 ವರ್ಷಗಳ ಅವಧಿಯಲ್ಲಿ ಸುಜುಕಿ ನಿರ್ಮಾಣದ ಬೈಕ್ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಠಿಯಾಗಿದ್ದು, ಉತ್ತಮ ಇಂಧನ ಕಾರ್ಯಕ್ಷಮತೆ ಮತ್ತು ವಿಶ್ವಾಸರ್ಹತೆ ಎಂಜಿನ್ ಬಲಿಷ್ಠತೆಯಿಂದಾಗಿ ಇದು ಮುಂಬರುವ ಹಬ್ಬದ ದಿನಗಳಲ್ಲಿ ಇನ್ನಷ್ಟು ಮಾರಾಟ ಪ್ರಕ್ರಿಯೆ ಹೆಚ್ಚಾಗುವ ಸಾಧ್ಯತೆಗಳಿವೆ.

English summary
Read in Kannada: Suzuki India Two Wheeler Spetember Sales Grew by Almost 33 Percent. Click for Details..
Story first published: Tuesday, October 3, 2017, 18:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark