ಬಿಡುಗಡೆಯ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ ಸುಜುಕಿ ಎಸ್‌ವಿ650ಎಕ್ಸ್

Written By:

2016ರ ಟೋಕಿಯೊ ಆಟೋ ಮೇಳದಲ್ಲಿ ಪ್ರದರ್ಶನಗೊಂಡು ಭಾರೀ ಚರ್ಚೆಗೆ ಕಾರಣವಾಗಿದ್ದು ಸುಜುಕಿ ಎಸ್‌ವಿ650ಎಕ್ಸ್ ಇದೀಗ ಬಿಡುಗಡೆಗೆ ಸಿದ್ಧಗೊಳ್ಳುತ್ತಿದ್ದು, ಹೊಸ ಬೈಕ್ ವಿನ್ಯಾಸದ ಬಗೆಗಿನ ತಾಂತ್ರಿಕ ಅಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಿಡುಗಡೆ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ ಸುಜುಕಿ ಎಸ್‌ವಿ650ಎಕ್ಸ್

ಈ ಹಿಂದೆ ಸೂಪರ್ ಬೈಕ್ ಮಾದರಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿದ್ದ ಸುಜುಕಿ ಎಸ್‌ವಿ650 ಆವೃತ್ತಿಯ ಆಧಾರದಲ್ಲೇ ಎಸ್‌ವಿ650ಎಕ್ಸ್ ವಿನೂತನ ಆವೃತ್ತಿಯನ್ನು ಸಿದ್ಧಗೊಳಿಸಲಾಗಿದ್ದು, ರೆಟ್ರೊ ಲುಕ್ ವಿನ್ಯಾಸದಿಂದಾಗಿ ಸೂಪರ್ ಬೈಕ್ ಪ್ರಿಯರ ನೆಚ್ಚಿನ ಮಾದರಿಯಾಗುವ ತವಕದಲ್ಲಿದೆ.

ಬಿಡುಗಡೆ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ ಸುಜುಕಿ ಎಸ್‌ವಿ650ಎಕ್ಸ್

ಇನ್ನೊಂದು ಪ್ರಮುಖ ವಿಚಾರವೆಂದ್ರೆ ಸುಜುಕಿ ಎಸ್‌ವಿ650ಎಕ್ಸ್ ವಿನ್ಯಾಸಗಳನ್ನು 70ರ ದಶಕದ ಸೂಪರ್ ಬೈಕ್‌ಗಳ ವೈಶಿಷ್ಟ್ಯತೆಗಳಿಗೆ ಹೊಲಿಕೆ ಮಾಡಲಾಗಿದ್ದು, ಬಣ್ಣದ ಗಾಜುಗಳಿಂದ ಶಾಸ್ತ್ರೀಯ ಶೈಲಿಯ ರೆಟ್ರೊ ವಿನ್ಯಾಸದ ಅಂಶಗಳನ್ನು ಸೇರಿಸಲಾಗಿದೆ.

Recommended Video
Aprilia RS-GP MotoGP Bike Showcased At Auto Expo 2016 - DriveSpark
ಬಿಡುಗಡೆ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ ಸುಜುಕಿ ಎಸ್‌ವಿ650ಎಕ್ಸ್

ಇದರ ಜೊತೆಗೆ ಫಾಂಗ್ ಲ್ಯಾಂಪ್, ಕ್ಲಿಕ್ ಆನ್ ಹ್ಯಾಂಡಲ್ ಬಾರ್, ಟ್ರಕ್ ರೂಲ್ ಸೇರಿದಂತೆ ಹಲವು ಹೊಸ ವಿನ್ಯಾಸಗಳು ಎಸ್‌ವಿ650ಎಕ್ಸ್ ಅಂದವನ್ನು ಹೆಚ್ಚಿಸಿದ್ದು, ಗ್ರಾಹಕರ ಆಯ್ಕೆಗೆ ಸಹಕಾರಿಯಾಗಬಲ್ಲ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆಯನ್ನು ಹೊಂದಿದೆ.

ಬಿಡುಗಡೆ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ ಸುಜುಕಿ ಎಸ್‌ವಿ650ಎಕ್ಸ್

ಎಂಜಿನ್

ಎಸ್‌ವಿ650ಎಕ್ಸ್ ಮಾದರಿಯು 645ಸಿಸಿ ವಿ ಟ್ವಿನ್ ಲಿಕ್ವಿಡ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಗೇರ್‌ಬಾಕ್ಸ್, ಎಬಿಎಸ್ ಮತ್ತು ರೆಟ್ರೊ ಮಾದರಿಯ ಸೀಟುಗಳನ್ನು ಪಡೆದಿರುವುದು ಮತ್ತೊಂದು ವಿಶೇಷ ಎನ್ನಬಹುದು.

ಬಿಡುಗಡೆ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ ಸುಜುಕಿ ಎಸ್‌ವಿ650ಎಕ್ಸ್

ಇನ್ನು ಎಸ್‌ವಿ650ಎಕ್ಸ್ ಖರೀದಿಗೆ ಭಾರೀ ಬೇಡಿಕೆ ಸೃಷ್ಠಿಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆ ಹೊಸ ಬೈಕ್ ಉತ್ಪಾದನೆಯನ್ನು ತೀವ್ರಗೊಳಿಸಿರುವ ಸುಜುಕಿ ಸಂಸ್ಥೆಯು ಸದ್ಯದಲ್ಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದೆ.

ಬಿಡುಗಡೆ ನಿಟ್ಟಿನಲ್ಲಿ ಸಜ್ಜುಗೊಳ್ಳುತ್ತಿದೆ ಸುಜುಕಿ ಎಸ್‌ವಿ650ಎಕ್ಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈ ಹಿಂದಿನ ಎಸ್‌ವಿ650 ಸೂಪರ್ ಬೈಕ್ ಮೂಲಕ ಹಲವು ದಾಖಲೆ ಹುಟ್ಟಹಾಕಿರುವ ಸುಜುಕಿ ಸಂಸ್ಥೆಯು ಇದೀಗ ಅದೇ ಮಾದರಿಯ ಮುಂದುವರಿದ ಆವೃತ್ತಿ ಎಸ್‌ವಿ650ಎಕ್ಸ್ ಮಾದರಿಯ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, 2018ರ ಮೊದಲ ತ್ರೈಮಾಸಿಕ ಅವಧಿಯೊಳಗೆ ಮಾರುಕಟ್ಟೆ ಪ್ರವೇಶ ಸಾಧ್ಯತೆಗಳಿವೆ.

Read more on ಸುಜುಕಿ suzuki
English summary
Read in Kannada about Suzuki SV650X Revealed Ahead Of Debut.
Please Wait while comments are loading...

Latest Photos