ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

Written By:

ಉತ್ತಮವಾಗಿ ಮಾರಾಟಗೊಳುತ್ತಿದ್ದ ಹಳೆಯ ಕಾಲದ ಬಜಾಜ್ ಚೇತಕ್ ಮಾಯವಾದ ನಂತರ ಭಾರತೀಯ ಮಾರುಕಟ್ಟೆಯಲ್ಲಿ ಸ್ಕೂಟರ್ ವಿಭಾಗ ನಿಧಾನವಾಗಿ ತನ್ನ ಮಹತ್ವ ಕಳೆದುಕೊಂಡಿತ್ತು, ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ ಸ್ನೇಹಿತರೆ...

ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

ಹೌದು, ಭಾರತೀಯ ಗ್ರಾಹಕರು ಇತ್ತೀಚಿಗೆ ಸ್ಕೂಟರ್ ವಿಭಾಗದ ಕಡೆ ಹೆಚ್ಚು ಒಲವನ್ನು ತೋರುತ್ತಿದ್ದು, ಪರಿಣಾಮಕಾರಿಯಾದ ಮತ್ತು ಸೊಗಸಾದ ಸ್ಕೂಟರ್ ಮಾರುಕಟ್ಟೆಗೆ ಆಗಮನವಾಗಿದ್ದು, ಇದರಿಂದ ಸ್ಕೂಟರ್ ವಿಭಾಗ ಮತ್ತೆ ಜನಪ್ರಿಯತೆ ಮರಳಿ ಪಡೆದುಕೊಂಡಿದೆ.

ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

ಭಾರತದಲ್ಲಿ ದ್ವಿಚಕ್ರ ಮಾರುಕಟ್ಟೆಯಲ್ಲಿ ಮೋಟಾರ್ ಸೈಕಲ್ ವಿಭಾಗ ಹೆಚ್ಚು ಪ್ರಖ್ಯಾತಿ ಹೊಂದಿದ್ದು, ಇತ್ತೀಚಿಗೆ ನಿಧಾನವಾಗಿ ಸ್ಕೂಟರ್ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳುತ್ತಿದೆ.

ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

ಇನ್ನೂ ಜೂನ್ ತಿಂಗಳಿನಲ್ಲಿ ಭಾರತದ ಅಗ್ರ ಹತ್ತು ಸ್ಕೂಟರ್‌ಗಳ ಬಗ್ಗೆ ಹೇಳುವುದಾದರೆ, AutocarPro ಈ ಪಟ್ಟಿಯನ್ನು ತಯಾರಿಸಿದ್ದು, ಇದರ ಪ್ರಕಾರ ಹೆಚ್ಚು ಪ್ರಖ್ಯಾತ ಪಡೆದುಕೊಂಡ ಸ್ಕೂಟರ್ ಬಗ್ಗೆ ಮುಂದೆ ಓದಿ.

ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

2017ರ ಜೂನ್ ತಿಂಗಳಿನಲ್ಲಿ 234767 ಹೋಂಡಾ ಆಕ್ಟಿವಾ ಸ್ಕೂಟರ್‌ಗಳನ್ನು ಮಾರಾಟವಾಗಿದ್ದು ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ಟಿವಿಎಸ್ ಸಂಸ್ಥೆಯ 60,570 ಜುಪಿಟರ್ ಸ್ಕೂಟರ್‌ಗಳು ಮಾರಾಟಗೊಂಡ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

ಮೂರನೇ ಸ್ಥಾನವನ್ನು ಪಡೆದುಕೊಳ್ಳಲು ಹೋಂಡಾ ಡಿಯೊ ಮತ್ತು ಹೀರೊ ಮ್ಯಾಸ್ಟ್ರೋ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತಾದರೂ, ಕೊನೆಗೆ ಹೀರೊ ಮ್ಯಾಸ್ಟ್ರೋ ಮೂರನೇ ಸ್ಥಾನವನ್ನು ಪಡೆದುಕೊಳ್ಳಲು ಸಫಲವಾಯಿತು.

ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

ಹೋಂಡಾ ಡಿಯೊ 26890 ವಾಹನಗಳ ಮಾರಾಟದೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದು, ಸುಜುಕಿ ಆಕ್ಸೆಸ್ 125 ಸ್ಕೂಟರ್ ಡಿಯೊಗೆ ಹೋಲಿಸಿದರೆ ಕೇವಲ 379 ವಾಹನಗಳು ಕಡಿಮೆ ಮಾರಾಟಗೊಂಡು ಐದನೇ ಸ್ಥಾನ ತನ್ನದಾಗಿಸಿಕೊಂಡಿತು.

ಜೂನ್ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ ಬೆಸ್ಟ್ ಸ್ಕೂಟರ್ ಯಾವುದು ಗೊತ್ತಾ?

ಉಳಿದ ಐದು ಸ್ಥಾನಗಳನ್ನು ಕ್ರಮವಾಗಿ, ಹೀರೊ ಡ್ಯುಯೆಟ್, ಹೀರೊ ಪ್ಲೇಜರ್, ಫ್ಯಾಸಿನೊ, ಟಿವಿಎಸ್ Pep+ ಮತ್ತು ಯಮಹ ರೇ ಸ್ಕೂಟರ್‌ಗಳು ಗಳಿಸಿಕೊಂಡಿವೆ.

English summary
Read in Kannada about Here are the top 10 selling scooters in India in the month of June 2017.
Story first published: Thursday, July 20, 2017, 18:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark