ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

By Girish

ಈಗಾಗಲೇ ಯಮಹಾ ಸಂಸ್ಥೆಯ YZF R15 V3.0 ಬೈಕನ್ನು ವಿದೇಶಿ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮುಂಬರುವ ತಿಂಗಳುಗಳಲ್ಲಿ ಈ ಪೂರ್ಣಗೊಂಡ ಮೋಟಾರ್ ಸೈಕಲ್ ಭಾರತ ಪ್ರವೇಶವನ್ನು ಮಾಡುವ ಸೂಚನೆ ನೀಡಿದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಹೌದು, ಭಾರತದಲ್ಲಿ ತನ್ನದೇ ರೀತಿಯ ಪ್ರಸಿದ್ದಿ ಮತ್ತು ಅಭಿಮಾನಿ ಬಳಗವನ್ನು ಹೊಂದಿರುವ ಯಮಹಾ ಸಂಸ್ಥೆಯು YZF R15 V3.0 ಮೋಟಾರ್ ವಾಹನವನ್ನು ಭಾರತದಲ್ಲಿ ಪರೀಕ್ಷೆ ಮಾಡಲಾಗುತ್ತಿದ್ದು, ಈ ಬೈಕ್ ಸದ್ಯದರಲ್ಲಿಯೇ ಭಾರತೀಯ ಮಾರುಕಟ್ಟೆಗೆ ಅದ್ದೂರಿ ಎಂಟ್ರಿ ಕೊಡಲಿದೆ ಎನ್ನಲಾಗಿದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಪ್ರಸ್ತುತ ಮಾದರಿಗೆ ಹೋಲಿಸಿದರೆ ಈ ಮೂರನೇ-ಪೀಳಿಗೆಯ ಆರ್15 ಮೋಟಾರ್ ಸೈಕಲ್ ವಿನ್ಯಾಸ ಹೆಚ್ಚು ವಿಶೇಷತೆ ಪಡೆದುಕೊಂಡಿದ್ದು, ಅನೇಕ ಬದಲಾವಣೆಗಳನ್ನು ಪಡೆದು ನಿಮ್ಮ ಮುಂದೆ ಬರಲಿದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಸ್ಪೈ ಚಿತ್ರಗಳನ್ನು ಗಮನಿಸಿದಂತೆ, ಈ ಹೊಸ ಯಮಹಾ YZF R15 V3.0 ಬೈಕ್, ತನ್ನ ಹಿರಿಯ ಸಹೋದರ YZF R1 ಮೋಟಾರ್ ಸೈಕಲ್‌ನಿಂದ ವಿನ್ಯಾಸ ಸೂಚನೆಗಳನ್ನು ಪಡೆದುಕೊಂಡಿದೆಯೇ ಎಂಬ ಅನುಮಾನಗಳನ್ನು ಹುಟ್ಟು ಹಾಕಿದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಈಗಾಗಲೇ ಇಂಡೋನೇಷಿಯಾದ ಮಾರುಕಟ್ಟೆಯಲ್ಲಿ R15 ವಿ3.0 ಮೋಟಾರ್ ಸೈಕಲ್ ಮಾರಾಟವಾಗುತ್ತಿದೆ ಮತ್ತು ಅಂತರರಾಷ್ಟ್ರೀಯ ಮಾದರಿಗೆ ಹೋಲಿಸಿದರೆ ಈ ವಿ3.0 ಎಂಜಿನ್ ಶ್ರೇಷ್ಠತೆ ಪಡೆದುಕೊಂಡಿರುವ ಭಾರತದ ಮಾದರಿಯ ಬೈಕ್ ಕೆಲವು ಬದಲಾವಣೆಗಳನ್ನು ಪಡೆಯುತ್ತದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

V2.0 ಆವೃತಿಯ ಬೈಕಿನಿಂದ ಎರವಲು ಪಡೆಯಲಾಗಿರುವ ಮುಂಭಾಗವನ್ನು ಈ R15 V3.0 ಸೂಪರ್ ವಾಹನವು ಹೊಂದಿರಲಿದ್ದು, ಅಂತಾರಾಷ್ಟ್ರೀಯ ಮಾದರಿಯಲ್ಲಿ ಕಂಡುಬರುವ ಅಲ್ಯೂಮಿನಿಯಂ ಘಟಕದ ಬದಲಾಗಿ ಪಿಲಿಯನ್ ಅಡಿಪಾಯಗಳನ್ನು ಪಡೆದುಕೊಳ್ಳುತ್ತದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಈ ಮೋಟಾರ್ ಸೈಕಲ್ ಕೂಡ ಎಬಿಎಸ್ ಆಯ್ಕೆಯನ್ನು ಪಡೆಯುವುದಿಲ್ಲ ಎನ್ನಲಾಗಿದ್ದು, ಆದರೆ ಯಮಹಾ ಸಂಸ್ಥೆಯು ಅಂತಿಮವಾಗಿ ಸುರಕ್ಷತಾ ವೈಶಿಷ್ಟ್ಯಗಳ ಕನಿಷ್ಠ ಆಯ್ಕೆಯನ್ನು ನೀಡಲಿದೆ ಎಂಬ ವಿಶ್ವಾಸ ವಾಹನೋದ್ಯಮದಲ್ಲಿ ಮನೆ ಮಾಡಿದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

YZF R15 V3.0 ಬೈಕ್ ಅತ್ಯುತ್ತಮವಾದ ಲಿಕ್ವಿಡ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ 155 ಸಿಸಿ ಇಂಜಿನ್ ತಂತ್ರಜ್ಞಾನ ಪಡೆದುಕೊಳ್ಳಲಿದೆ ಹಾಗು 14.7 ಎನ್ಎಂ ತಿರುಗುಬಲದಲ್ಲಿ 19 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ ಹಾಗು 6-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಯಮಹಾ ಸಂಸ್ಥೆಯ YZF R15 V3.0 ಬೈಕಿನ ಸ್ಪೈ ಚಿತ್ರಗಳು ಸೋರಿಕೆ

ಯಮಹಾ YZF R15 V3.0 ಭಾರತದಲ್ಲಿ ಹೆಚ್ಚು-ನಿರೀಕ್ಷಿತ ಮೋಟಾರ್ ಸೈಕಲ್‌ಗಳಲ್ಲಿ ಒಂದಾಗಿದೆ. ಮುಂಬರುವ ದಿನಗಳಲ್ಲಿ ತನ್ನ ಪೂರ್ಣ ಪ್ರಮಾಣದ 150 ಸಿಸಿ ಹೊಸ ಆವೃತ್ತಿಯನ್ನು ಪರಿಚಯಿಸಲಿದ್ದು, ಈ ವಾಹನದ ಬೆಲೆ ರೂ 1.20 ಲಕ್ಷದಿಂದ ರೂ. 1.30 ಲಕ್ಷದ ಆಸುಪಾಸಿನಲ್ಲಿ ಇರಲಿದೆ.

Most Read Articles

Kannada
English summary
Yamaha has already introduced the YZF R15 V3.0 in several foreign markets. Now it looks like the fully-faired motorcycle will make its India entry in the coming months.
Story first published: Friday, November 3, 2017, 15:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X