3 ಲಕ್ಷದೊಳಗೆ ಖರೀದಿಸಬಹುದಾದ ಅತ್ಯುತ್ತಮ ಪರ್ಫಾಮೆನ್ಸ್ ಬೈಕ್‍‍ಗಳಿವು..

ದೇಶದಲ್ಲಿನ ಯುವ ಸಮುದಾಯವನ್ನು ಸೆಳೆಯಲು ವಾಹನ ತಯಾರಕ ಸಂಸ್ಥೆಗಳು ಮಾರುಕಟ್ಟೆಗೆ ವಾರಕ್ಕೊಂದು ಹೊಸ ಬೈಕ್‍‍ಗಳನ್ನು ಬಿಡುಗಡೆಗೊಳುತ್ತಲೇ ಇದ್ದಾರೆ.

By Rahul Ts

ದೇಶದಲ್ಲಿನ ಯುವ ಸಮುದಾಯವನ್ನು ಸೆಳೆಯಲು ಹಲವಾಪು ವಾಹನ ತಯಾರಕ ಸಂಸ್ಥೆಗಳು ಮಾರುಕಟ್ಟೆಗೆ ವಾರಕ್ಕೊಂದು ಹೊಸ ಬೈಕ್‍‍ಗಳನ್ನು ಬಿಡುಗಡೆಗೊಳಿಸುತ್ತಲೇ ಇವೆ. ಈ ಸಮಯದಲ್ಲಿ ಗ್ರಾಹಕರು ಯಾವ ಬೈಕ್ ಕೊಳ್ಳಬೇಕು? ಯಾವ ಬೈಕ್ ಕೊಂಡರೆ ಕೊಟ್ಟ ಹಣಕ್ಕೆ ನಷ್ಟ ಇರುವುದಿಲ್ಲ ಎಂಬುವುದೇ ಎಲ್ಲರ ಮನದೊಳಗಿನ ಗೊಂದಲ. ಹೀಗಾಗಿ ಬೆಸ್ಟ್ ಪರ್ಫಾಮೆನ್ಸ್ ಬೈಕ್‌ಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಈ ನಿಟ್ಟಿನಲ್ಲಿ 3 ಲಕ್ಷದೊಳಗೆ ಗ್ರಾಹಕರು ಖರೀದಿಸಬಹುದಾದ ಉತ್ತಮ ಪರ್ಫಾಮೆನ್ಸ್ ನೀಡಬಲ್ಲ ಹಾಗೂ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ 7 ಉತ್ತಮ ಬೈಕ್‍‍ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಕೆಟಿಎಮ್ ಆರ್‍‍‍ಸಿ 390 - ಬೆಲೆ ರೂ. 2.37 ಲಕ್ಷ

ಕೆಟಿಎಂ ಆರ್‌ಸಿ 390 ಬೈಕ್ ಮಾರುಕಟ್ಟೆಯಲ್ಲಿ 300ಸಿಸಿ ಗಿಂತ ಹೆಚ್ಚಿರುವ ಬೈಕ್ ಸರಣಿಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.2.37 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಕೆಟಿಎಂ ಆರ್‌ಸಿ 390 ಬೈಕ್ 373.3ಸಿಸಿ ಎಂಜಿನ್ ಸಹಾಯದಿಂದ 43.5-ಬಿಹೆಚ್‍‍ಪಿ ಮತ್ತು 36-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಟ್ವಿನ್ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಡ್ಯುಯಲ್ ಚಾನಲ್ ಎಬಿಎಸ್ ಮತ್ತು ಅಪ್‍‍ಸೈಡ್ ಫ್ರಂಟ್ ಫೋರ್ಕ್ಸ್ ಅನ್ನು ಪಡೆದುಕೊಂಡಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಯಮಹಾ ವೈಜೆಡ್‍ಎಫ್ ಆರ್15 ವಿ3 - ಬೆಲೆ ರೂ. 1.25 ಲಕ್ಷ

ಮೊದಲು ವಿದೇಶಿ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡ ನಂತರ ಭಾರೀ ಜನಪ್ರಿಯತೆ ಪಡೆದುಕೊಂಡಿದ್ದ ಯಮಹಾ ವೈಝಡ್ಎಫ್ ಆರ್ 15 ವಿ3 ಬೈಕ್‌ಗಳು ಸದ್ಯ ಭಾರತದಲ್ಲೂ ಬಿಡುಗಡೆಗೊಂಡಿದ್ದು, ಹಲವು ವಿಶೇಷತೆಗಳೊಂದಿಗೆ ಸೂಪರ್ ಬೈಕ್ ಪ್ರಿಯರ ಗಮನಸೆಳೆಯುತ್ತಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

155 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಜೊತೆಗೆ ಎಲ್ಇಡಿ ಹೆಡ್‍‍ಲ್ಯಾಂಪ್ಸ್ ಮತ್ತು ಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಕೆಟಿಎಂ 390 ಡ್ಯೂಕ್ - ಬೆಲೆ ರೂ. 2.40 ಲಕ್ಷ

ಕೆಟಿಎಂ 390 ಡ್ಯೂಕ್ ಬೈಕ್ 300ಸಿಸಿ ಗಿಂತ ಹೆಚ್ಚು ಸಾಮರ್ಥ್ಯವುಳ್ಳ ಮೋಟಾರ್‍‍ಸೈಕಲ್ ಆಗಿದ್ದು, ಪ್ರಸ್ತುತ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 2.40 ಲಕ್ಷಕ್ಕೆ ಮಾರಾಟಗೊಂಡು ಹತ್ತು ಹಲವು ವೈಶಿಷ್ಟ್ಯತೆಗಳನ್ನು ಪಡೆದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಕೆಟಿಎಂ 390 ಡ್ಯೂಕ್ ಬೈಕ್ 373ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಸಹಾಯದಿಂದ 42.9-ಬಿಹೆಚ್‍‍ಪಿ ಮತ್ತು 37-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹಾಗು ಪ್ರತೀ ಲೀಟರ್‍‍ಗೆ 23 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಬಜಾಜ್ ಪಲ್ಸರ್ ಎನ್ಎಸ್200 -(ಬೆಲೆ 95 ಸಾವಿರದಿಂದ 1.14 ಲಕ್ಷ)

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ 2012ರಲ್ಲಿ ತಮ್ಮ ಪಲ್ಸರ್ 200ಎನ್ಎಸ್ ಬೈಕ್ ಅನ್ನು ಬಿಡುಗಡೆಗೊಳಿಸಿದ್ದು, ಬಿಡುಗಡೆಗೊಂಡಾಗಿನಿಂದಲೂ ಯುವ ಸಮುದಾಯವನ್ನು ತನ್ನ ಪರ್ಫಾರ್ಮೆನ್ಸ್ ಹಿನ್ನೆಲೆಯಲ್ಲಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಬಜಾಜ್ ಪಲ್ಸರ್ ಎನ್ಎಸ್200 ಬೈಕ್ 199.5 ಸಿಸಿ ಡಿಟಿಎಸ್ಐ ಎಂಜಿನ್ ಸಹಾಯದಿಂದ 23.5-ಬಿಹೆಚ್‍ಪಿ ಮತ್ತು 18.3-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಮೊನೊಶಾಕ್ ಅನ್ನು ಅಳವಡಿಸಲಾಗಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಬಜಾಜ್ ಡೋಮಿನಾರ್ 400 - ಬೆಲೆ ರೂ. 1.42 ರಿಂದ 1.60 ಲಕ್ಷ

ಬಜಾಜ್ ಡೋಮಿನಾರ್ 400 ಬೈಕ್ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವ ಉತ್ತಮ ಬೈಕ್ ಮಾದರಿಯಾಗಿದ್ದು, ಇದರಲ್ಲಿ ಅಳವಡಿಸಲಾಗಿರುವ ಎಲ್ಇಡಿ ಹೆಡ್‍‍ಲೈಟ್ ನೋಡುಗರನ್ನು ಆಕರ್ಷಿಸುತ್ತದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಬಜಾಜ್ ಡೋಮಿನಾರ್ 400 ಬೈಕ್ 373ಸಿಸಿ ಎಂಜಿನ್ ಸಹಾಯದಿಂದ 19.03-ಬಿಹೆಚ್‍‍ಪಿ ಮತ್ತು 17.5-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಬೈಕ್ ಸವಾರರ ಸುರಕ್ಷಿತೆಗಾಗಿ ಡ್ಯುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಈ ಬೈಕ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 1.42 ಲಕ್ಷ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಬಜಾಜ್ ಅವೆಂಜರ್ ಸ್ಟ್ರೀಟ್ 220 - ಬೆಲೆ ರೂ. 95 ಸಾವಿರ

ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಕ್ರೂಸರ್ ಬೈಕ್‍‍ಗಳ ಸರಣಿಯಲ್ಲಿ ಬಜಾಜ್ ಅವೆಂಜರ್ ಸ್ಟ್ರೀಟ್ 220 ಹೆಚ್ಚು ಮಾರಾಟಗೊಳ್ಳುತ್ತಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 95 ಸಾವಿರಕ್ಕೆ ಖರೀದಿಗೆ ಲಭ್ಯವಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ಬಜಾಜ್ ಅವೆಂಜರ್ ಸ್ಟ್ರೀಟ್ 220 ಬೈಕ್ ಬಿಡುಗಡೆಗೊಂಡಾಗಿನಿಂದಲೂ ಎಂಜಿನ್‍‍ನಲ್ಲಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೆಚ್ಚು ಪರ್ಫಾರ್ಮೆನ್ಸ್ ಅನ್ನು ನೀಡುತ್ತಿದೆ. 219ಸಿಸಿ ಎಂಜಿನ್ ಸಹಾಯದಿಂದ ಈ ಬೈಕ್ 19.03-ಬಿಹೆಚ್‍‍ಪಿ ಮತ್ತು 17.5-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ರಾಯಲ್ ಎನ್‍‍ಫೀಲ್ಡ್ ಡೆಸೆರ್ಟ್ ಸ್ಟೋರ್ಮ್ 500 - ಬೆಲೆ ರೂ. 1.74 ಲಕ್ಷ

ತನ್ನ ಕ್ಲಾಸಿಕ್ ಶೈಲಿ ಹಾಗೂ ಎಂಜಿನ್ ಸಾಮರ್ಥ್ಯದಿಂದ ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ರಾಯಲ್ ಎನ್‍‍ಫೀಲ್ಡ್ ಸಂಸ್ಥೆಯು ಡೆಸೆರ್ಟ್ ಸ್ಟೋರ್ಮ್ 500 ಬೈಕ್‌ಗಳಲ್ಲಿ ಹಲವು ಸುರಕ್ಷಾ ಸೌಲಭ್ಯವನ್ನು ಒದಗಿಸಿದೆ.

3 ಲಕ್ಷದೊಳಗೆ ಖರೀದಿಸಬಹುದಾದ ಉತ್ತಮ ಪರ್ಫಾರ್‍‍ಮೆನ್ಸ್ ನೀಡುವ ಬೈಕ್‍‍ಗಳಿವು..

ರಾಯಲ್ ಎನ್‍‍ಫೀಲ್ಡ್ ಡೆಸೆರ್ಟ್ ಸ್ಟೋರ್ಮ್ 500 ಬೈಕ್ 499ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದಿಂದ 27.50-ಬಿಹೆಚ್‍‍ಪಿ ಮತ್ತು 41.3-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಶಾರ್ಟ್ ಸಿಲೆಂಡರ್, ಟ್ವಿನ್ ಗ್ಯಾಸ್ ಶಾಕ್ ಅಬ್ಸಾರ್ಬರ್ ಮತ್ತು ಗ್ರಾಹಕರು ಆಫ್ ರೋಡ್ ಆಕ್ಸೆಸರಿಗಳನ್ನು ವಿಶೇಷವಾಗಿ ಪಡೆಯಬಹುದಾಗಿದೆ.

Most Read Articles

Kannada
English summary
7 BEST ‘value-for-money’ high-performance motorcycles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X